ರೈತ ಶರಣಪ್ಪ
ರೈತ ಶರಣಪ್ಪ

ಗದಗ ರೈತನ ಹುಡುಕಿ ಬಂದ ಅದೃಷ್ಟ ದೇವತೆ: ಒಂದು ಕ್ವಿಂಟಲ್​ ಮೆಣಸಿನಕಾಯಿಗೆ ಸಿಕ್ಕ ಬೆಲೆ ರೂ.70,199!

ಅದೃಷ್ಟ ಎಂದರೆ ಇದೇ ಅಲ್ಲವೇ...ಮೆಣಸಿನಕಾಯಿ ಬೆಳೆದಿದ್ದ ಗದಗ ರೈತನನ್ನು ಮಹಾಲಕ್ಷ್ಮೀಯೇ ಹುಡುಕಿಕೊಂಡು ಬಂದಿದ್ದಾಳೆ.
Published on

ಗದಗ: ಅದೃಷ್ಟ ಎಂದರೆ ಇದೇ ಅಲ್ಲವೇ...ಮೆಣಸಿನಕಾಯಿ ಬೆಳೆದಿದ್ದ ಗದಗ ರೈತನನ್ನು ಮಹಾಲಕ್ಷ್ಮೀಯೇ ಹುಡುಕಿಕೊಂಡು ಬಂದಿದ್ದಾಳೆ.

ಹೀಗೆ ಹೇಳುತ್ತಿದ್ದಾರೇನೆಂದು ಹುಬ್ಬೇರಿಸದಿರಿ...ಗದಗದ ರೈತರೊಬ್ಬರು ದಾಖಲೆ ಬೆಲೆಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.

ಗದಗ ತಾಲೂಕಿನಲ್ಲಿ ಕೋಟಮಚಗಿಯ ರೈ ಶರಣಪ್ಪ ಜಗ್ಗಲ್ ಎಂಬುವರೇ ಮೆಣಸಿನಕಾಯನ್ನು ದಾಖಲೆ ಬೆಲೆಗೆ ಮಾರಾಟ ಮಾಡಿದ ರೈತರಾಗಿದ್ದಾರೆ. ಶರಣಪ್ಪ ಅವರು ಕ್ವಿಂಟಲ್​ಗೆ 70,199 ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.

4 ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿರೋ ರೈತ ಶರಣಪ್ಪ ಜಗ್ಗಲ್ ಈಗಾಗಲೇ ಸುಮಾರು 1 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.

ಕಾಶ್ಮೀರ ಡಬ್ಬಿ ಎಂಬ ಮೆಣಸಿನ ಬೀಜ ಬಿತ್ತನೆ ಮಾಡಿ ಶರಣಪ್ಪ ಅವರು ಈ ದಾಖಲೆ ಬೆಲೆ ಕಂಡಿದ್ದಾರೆ. ಇನ್ನೂ ಬೆಳೆದ ಮೆಣಸಿನಕಾಯಿಯನ್ನು ಸ್ಟಾಕ್ ಇಟ್ಟಿರುವ ರೈತ ಶರಣಪ್ಪ  ಅವರು, ಇನ್ನಷ್ಟು ಆದಾಯ ಗಳಿಸುವ ಉತ್ಸಾಹದಲ್ಲಿದ್ದಾರೆ.

ಸಾಮಾನ್ಯವಾಗಿ, ಮೆಣಸಿನಕಾಯಿ ಬೆಲೆಯನ್ನು ಅದರ ಗುಣಮಟ್ಟವನ್ನು ಅವಲಂಬಿಸಿ ಕ್ವಿಂಟಲ್‌ಗೆ 35,000-50,000 ರೂ ನೀಡಲಾಗುತ್ತದೆ. ಆದರೆ, ಶರಣಪ್ಪ ಅವರು ಕ್ವಿಂಟಲ್'ಗೆ ರೂ.70 ಸಾವಿರಕ್ಕೂ ಹೆಚ್ಚು ಹಣವನ್ನು ಗಳಿಕೆ ಮಾಡಿದ್ದಾರೆ.

ಕಾಶ್ಮೀರ ಡಬ್ಬಿ ಮೆಣಸಿನಕಾಯಿಯು ದಪ್ಪ, ಉದ್ದ ಮತ್ತು ಎಣ್ಣೆಯ ಅಂಶವನ್ನು ಹೊಂದಿರುವ ತಳಿಯಾಗಿದೆ. ಮತ್ತು ಇದು ಹೆಚ್ಚಿನ ಬೆಲೆಯನ್ನು ಆಕರ್ಷಿಸುತ್ತದೆ. ಇದನ್ನು ಮುಖ್ಯವಾಗಿ ಮೆಣಸಿನ ಪುಡಿ ಮಾಡಲು ಬಳಸಲಾಗುತ್ತದೆ. ಗದಗ, ಹುಬ್ಬಳ್ಳಿ ಮತ್ತು ಹಾವೇರಿಯ ಏಜೆಂಟ್‌ಗಳು ಇದಕ್ಕೆ ಉತ್ತಮ ಬೆಲೆ ನೀಡಿ, ಇತರ ರಾಜ್ಯಗಳಿಂದ ಖರೀದಿ ಮಾಡುತ್ತಾರೆ.

ಈ ಹಿಂದೆ 2020ರಲ್ಲಿ ರೈತರೊಬ್ಬರು ಕ್ವಿಂಟಲ್ ಮೆಣಸಿನಕಾಯಿಗೆ 41,101 ರೂ.ಗೆ ಮಾರಾಟ ಮಾಡಿದ್ದರು. ನವೆಂಬರ್ 2022ರಲ್ಲಿ ಮಾರುಕಟ್ಟೆ ಬೆಲೆ 45,000 ಆಗಿತ್ತು ಎಂದು ರೈತರು ತಿಳಿಸಿದ್ದಾರೆ.

ಶರಣಪ್ಪ ಅವರ ಮೆಣಸಿನಕಾಯಿಯನ್ನು ಅಂಗಡಿ ಮಾಲೀಕ ಅಶೋಕ ಗಡಾದ್ ಅವರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ.

ಕಳೆದ ವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶರಣಪ್ಪ ಅವರು, ಇದೇ ಮೆಣಸಿನಕಾಯಿಯನ್ನು ಕ್ವಿಂಟಲ್ ಗೆ 59 ಸಾವಿರ ರೂಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯನ್ನು ಗಮಿಸಿದ ಗಡಾದ್ ಅವರು ಮೆಣಸಿನಕಾಯಿ ನೋಡಿ ಉತ್ತಮ ಬೆಲೆ ನೀಡಿ ಖರೀದಿ ಮಾಡಿದ್ದಾರೆ.

ಕಳೆದ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಮೆಣಸಿನಕಾಯಿ ಬೆಳೆ ನಾಶವಾಗಿ ಬೆಲೆ ಏರಿಕೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಈ ಹಣವನ್ನು ನನ್ನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಇದು ನಮ್ಮ ಕುಟುಂಬಕ್ಕೆ ಹೊಸ ವರ್ಷದ ಉಡುಗೊರೆಯಾಗಿದೆ. ಈ ವಿಶೇಷ ಮೆಣಸಿನಕಾಯಿಯನ್ನು ಬೆಳೆಯಲು ನಮಗೆ ಸಹಾಯ ಮಾಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಾವು ಧನ್ಯವಾದಗಳು ಎಂದು ಶರಣಪ್ಪ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com