ನರೇಂದ್ರ ಮೋದಿಯವರ ಮುಂದೆ ಬೊಮ್ಮಾಯಿಯವರು ನಾಯಿಮರಿ ತರ ಇರುತ್ತಾರೆ, ಗಡಗಡ ನಡುಗುತ್ತಾರೆ: ಸಿದ್ದರಾಮಯ್ಯ
ಹಗರಿಬೊಮ್ಮನಹಳ್ಳಿ: ರಾಜಕೀಯದಲ್ಲಿ ನಾಯಕರ ಮಧ್ಯೆ ಆರೋಪ-ಪ್ರತ್ಯಾರೋಪ ಸಾಮಾನ್ಯ. ಹಲವು ಬಾರಿ ರಾಜಕೀಯ ನಾಯಕರು ತಮ್ಮ ನಾಲಿಗೆಗೆ ನಿಯಂತ್ರಣ ಹಾಕಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡಿ ವಿವಾದ, ಟೀಕೆಗೆ ಸಿಲುಕಿಹಾಕಿಕೊಳ್ಳುವುದು ಉಂಟು.
ನಿನ್ನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಲಿಗೆ ಹರಿಬಿಟ್ಟಿದ್ದಾರೆ. ಬಿಜೆಪಿ ಮತ್ತು ಸಿಎಂ ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ನಾಯಿಗೆ ಹೋಲಿಕೆ ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿಯವರೇ ನಿಮಗೆ ಧಮ್ಮಿದ್ದರೆ, ತಾಕತ್ತಿದ್ದರೆ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರಿಸಿ, ಈ ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡಿ. ನಿಮಗೆ ಆ ಧೈರ್ಯ. ತಾಕತ್ತು, ಧಮ್ಮು ಎಲ್ಲಿದೆ? ನರೇಂದ್ರ ಮೋದಿಯವರ ಮುಂದೆ ನಾಯಿಮರಿಯಂತೆ ಮುದುಡಿಕೊಂಡು ಕೂರುತ್ತೀರಿ ಎಂದು ಟೀಕಿಸಿದ್ದಾರೆ.
ಮಾಲವಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ ನಿನ್ನೆ ಶಾಸಕ ಭೀಮಾ ನಾಯಕ್ ಅವರು ಆಯೋಜಿಸಿದ್ದ ಸಾರ್ಥಕ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಮಾಜಿ ಸಚಿವರಾದ ಜಮೀರ್ ಅಹಮದ್, ಸಂತೋಷ್ ಲಾಡ್, ತುಕಾರಾಂ, ಅಮರೇಗೌಡ ಬಯ್ಯಾಪುರ, ರುದ್ರಪ್ಪ ಲಮಾಣಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಬೈರತಿ ಸುರೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ