ಸ್ವಿಗ್ಗಿ ಡೆಲಿವರಿ ನೌಕರರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ

ಗಿಗ್ ಕೆಲಸಗಾರರು ಯಾವಾಗಲೂ ಅತಿ ಅಪಾಯಕಾರಿ ಸಂದರ್ಭಗಳಲ್ಲಿ, ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿಯಿರುತ್ತದೆ. ಗಿಗ್ ಕೆಲಸಗಾರರಿಗೆ ಅವರ ಸಮಯ ಮತ್ತು ಅವರ ಕೆಲಸದ ವೇಗದ ಸ್ವಭಾವದಿಂದಾಗಿ ರಸ್ತೆ ಅಪಘಾತಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗಿಗ್ ಕೆಲಸಗಾರರು ಯಾವಾಗಲೂ ಅತಿ ಅಪಾಯಕಾರಿ ಸಂದರ್ಭಗಳಲ್ಲಿ, ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿಯಿರುತ್ತದೆ. ಗಿಗ್ ಕೆಲಸಗಾರರಿಗೆ ಅವರ ಸಮಯ ಮತ್ತು ಅವರ ಕೆಲಸದ ವೇಗದ ಸ್ವಭಾವದಿಂದಾಗಿ ರಸ್ತೆ ಅಪಘಾತಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಇಂತಹ ಗಿಗ್ ಕೆಲಸ ಮಾಡುವ ಸ್ವಿಗ್ಗಿ ಕಂಪೆನಿ ತನ್ನ ಕಾರ್ಮಿಕರಿಗೆ ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವುದಾಗಿ ಘೋಷಿಸಿದೆ.

Swiggy, ತನ್ನ ಎಲ್ಲಾ ಡೆಲಿವರಿ ಕೆಲಸಗಾರರು ಮತ್ತು ಅವರ ಅವಲಂಬಿತರಿಗೆ (ಸಂಗಾತಿ ಮತ್ತು ಇಬ್ಬರು ಮಕ್ಕಳಿಗೆ ಸೀಮಿತವಾಗಿದೆ) ತನ್ನ ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಹೊರತಂದಿದೆ,  ಆನ್‌ಲೈನ್ ಆಹಾರ ವಿತರಣಾ ವೇದಿಕೆಯು ವೈದ್ಯಕೀಯ ತುರ್ತು ಪ್ಲಾಟ್‌ಫಾರ್ಮ್ ಡಯಲ್ 4242 ಆಂಬ್ಯುಲೆನ್ಸ್ ಸೇವೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಕಾರ್ಮಿಕರಿಗೆ ತುರ್ತು ಸಂದರ್ಭದಲ್ಲಿ 'ಹೆರಿಗೆಯ ಮೊದಲು, ಸಮಯದಲ್ಲಿ ಅಥವಾ ನಂತರ' ಸಹಾಯವನ್ನು ಒದಗಿಸುತ್ತದೆ.

ಸ್ವಿಗ್ಗಿ ಪ್ರಕಾರ, ಭಾರತದಾದ್ಯಂತ ಸೇವೆಯನ್ನು ಒದಗಿಸಲಾಗುತ್ತಿದೆ, ನೂರು ನಗರಗಳಲ್ಲಿ 10,000 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಲಭ್ಯವಿವೆ, ವಿತರಣಾ ಕೆಲಸಗಾರರು ಆಂಬ್ಯುಲೆನ್ಸ್ ನ್ನು ಕರೆಸಲು ಅಪ್ಲಿಕೇಶನ್‌ನಲ್ಲಿ ಒದಗಿಸಲಾದ SOS ಬಟನ್ ನ್ನು ಟ್ಯಾಪ್ ಮಾಡಲು ಸಾಧ್ಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com