ಹೈದ್ರಾಬಾದ್: ಬಳ್ಳಾರಿ ಉತ್ಸವದಲ್ಲಿ ಶನಿವಾರ ಪಾಲ್ಗೊಂಡಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರ ಕಾರಿನ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಈ ಕುರಿತಂತೆ ಟ್ವಿಟ್ ಮಾಡಿರುವ ಮಂಗ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಹರಿಡಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದೆ. ದಯವಿಟ್ಟು ಅಂತಹ ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
'ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವುದು ಹಾಗೂ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒಂದಾಗಿರುವುದನ್ನು ಫೋಟೋಗಳು ಮತ್ತು ವಿಡಿಯೋಗಳಿಂದ ನೀವೇ ನೋಡಬಹುದು. ಕನ್ನಡಿಗರು ಅಪಾರ ಪ್ರೀತಿ ಮತ್ತು ಪ್ರೋತ್ಸಾಹ ತೋರಿಸಿದ್ದಾರೆ. ಅಧಿಕಾರಿಗಳು ತೋರಿಸಿದ ಕಾಳಜಿಯನ್ನು ಪದಗಳನ್ನು ವರ್ಣಿಸಲು ಅಸಾಧ್ಯ. ತಮ್ಮ ವರ್ಚಸ್ಸು ಕುಂದಿಸಲು ಈ ರೀತಿಯ ಇಲ್ಲಸಲ್ಲದ ತಪ್ಪು ಪ್ರಚಾರ ನೀಡಲಾಗುತ್ತಿದ್ದು, ಇದನ್ನು ಖಂಡಿಸುವುದಾಗಿ ಅವರು ಟ್ವೀಟರ್ ನಲ್ಲಿ ಬರೆದಿದ್ದಾರೆ.
Advertisement