ಗಾಂಧಿ ಪ್ರತಿಕೃತಿಯಲ್ಲಿ ಲೋಪ: ಹಾಸನದ ಗಾಂಧಿಭವನ ಉದ್ಘಾಟನೆ ಮುಂದೂಡಿಕೆ

ಹಾಸನದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಉದ್ಘಾಟನೆ ಎಲ್ಲವೂ ಅಂದುಕೊಂಡಿದ್ದರೆ ಜ.26 ರಂದು ಆಗಬೇಕಿತ್ತು. ಆದರೆ ಗಾಂಧಿ ಪ್ರತಿಕೃತಿಯಲ್ಲಿನ ಲೋಪಗಳಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
ಗಾಂಧಿ ಪ್ರತಿಕೃತಿಯಲ್ಲಿ ಲೋಪ
ಗಾಂಧಿ ಪ್ರತಿಕೃತಿಯಲ್ಲಿ ಲೋಪ
Updated on

ಹಾಸನ: ಹಾಸನದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಉದ್ಘಾಟನೆ ಎಲ್ಲವೂ ಅಂದುಕೊಂಡಿದ್ದರೆ ಜ.26 ರಂದು ಆಗಬೇಕಿತ್ತು. ಆದರೆ ಗಾಂಧಿ ಪ್ರತಿಕೃತಿಯಲ್ಲಿನ ಲೋಪಗಳಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
 
ಗಣರಾಜ್ಯೋತ್ಸವದ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಂದ ಗಾಂಧಿ ಭವನ ಉದ್ಘಾಟನೆಗೆ ಸಕಲ ತಯಾರಿಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಸಾರ್ವಜನಿಕರು ಹಾಗೂ ಕಲಾವಿದರು ಗಾಂಧಿ ಭವನದಲ್ಲಿನ ಗಾಂಧಿ ಪ್ರತಿಕೃತಿಯ ಆಕಾರದಲ್ಲಿ ಲೋಪಗಳಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅರ್ಚನ ಗಾಂಧಿ ಭವನವನ್ನು ನಿರ್ಮಿಸಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಪೊರೇಷನ್ (ಕೆಆರ್ ಐಡಿಸಿ) ಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡುವಂತೆ ಸೂಚಿಸಿದ್ದಾರೆ. ಮಹಾತ್ಮ ಗಾಂಧಿ ಅವರ ಲೋಪದೋಷಗಳಿರುವ ಪ್ರತಿಕೃತಿಗಳನ್ನು ಸರಿಪಡಿಸಿ ಮರು ನಿರ್ಮಿಸುವಂತೆ ಸೂಚಿಸಿದ್ದಾರೆ.   

ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ 2.95 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವಾಗಿದ್ದು, 2018 ರಲ್ಲಿ ಎ ಮಂಜು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಗಾಂಧಿ ಭವನ ಯೋಜನೆಯನ್ನು ಮಂಜೂರು ಮಾಡಿದ್ದರು. ಗಾಂಧಿ ಭವನ ನಿರ್ಮಾಣ ಹಲವು ಕಾರಣಗಳಿಂದಾಗಿ ಹಿಂದುಳಿದಿತ್ತು. ಬೆಂಗಳೂರಿನ ಶಿಲ್ಪಿ ತ್ರಿಭುವನ್ ಗಾಂಧಿ ಪ್ರತಿಕೃತಿಯನ್ನು ರಚಿಸುವುದಕ್ಕಾಗಿ ಅನುಭವಿ ಶಿಲ್ಪಿಗಳನ್ನು ನಿಯೋಜಿಸಲು ವಿಫಲರಾಗಿದ್ದರು.
 
ಕೆಆರ್ ಐಡಿಸಿ ಅಥವಾ ನಿರ್ಮಿತಿ ಕೇಂದ್ರಕ್ಕೆ ಸಂಬಂಧಪಟ್ಟ ಇಂಜಿನಿಯರ್ ಗಳು ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ವಿಫಲವಾಗಿದ್ದರು. ಜಿಲ್ಲಾ ಅಧಿಕಾರಿಗಳ ನಿರ್ಲಕ್ಷ್ಯತನವನ್ನು  ಜನರು ಖಂಡಿಸಿದ್ದಾರೆ. ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ಸಿದ್ದೇಗೌಡ ಮಾತನಾಡಿದ್ದು, 23 ಲಕ್ಷ ರೂಪಾಯಿಗಳ ಪೈಕಿ ಶೇ.30 ರಷ್ಟು ಮಾತ್ರ ಶಿಲ್ಪಿಗಳಿಗೆ ಪಾವತಿ ಮಾಡಲಾಗಿದೆ. ಲೋಪಗಳನ್ನು ಸರಿಪಡಿಸಿದ ಬಳಿಕವಷ್ಟೇ ಉಳಿದ ಮೊತ್ತವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com