ಹೊಯ್ಸಳರ ಕಾಲದ 13ನೇ ಶತಮಾನದಲ್ಲಿನ ವೀರಗಲ್ಲು ಮಂಡ್ಯದಲ್ಲಿ ಪತ್ತೆ

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ತಂಡವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.
‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ
‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ

ಮೈಸೂರು: ಇಲ್ಲಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ತಂಡವು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಪತ್ತೆ ಹಚ್ಚಿದೆ.

ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ನೀಡಿದ ಮಾಹಿತಿಯ ಮೇರೆಗೆ ಪುರಾತತ್ವ ಸಂಶೋಧಕ ಡಾ.ಶಶಿಧರ ಸಿ.ಎ. ಕ್ಷೇತ್ರ ಕಾರ್ಯಾನ್ವೇಷಣೆ ಕೈಗೊಂಡಿದ್ದಾರೆ. ಬಳಿಕ ಅವರು ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ವಿಶೇಷ ವೀರಗಲ್ಲನ್ನು ಪತ್ತೆ ಮಾಡಿದ್ದಾರೆ.

ಹೊಯ್ಸಳರ 2ನೇ ವೀರಬಲ್ಲಾಳನ ಕಾಲದ್ದು ಎನ್ನಲಾದ ಈ ವೀರಗಲ್ಲನ್ನು ಸೋಪುಗಲ್ಲಿನಲ್ಲಿ ಕೆತ್ತಲಾಗಿದೆ. ಮೂರು ಹಂತದಲ್ಲಿ ಶಿಲ್ಪಕಲಾ ಫಲಕಗಳನ್ನು ಹೊಂದಿದೆ ಮತ್ತು ಅವುಗಳ ಮಧ್ಯದಲ್ಲಿ ಅವುಗಳ ಮಧ್ಯದ 2 ಪಟ್ಟಿಕೆಯಲ್ಲಿ ಶಾಸನದ ಪಾಠಗಳನ್ನು ಒಳಗೊಂಡಿದೆ. ವೀರಗಲ್ಲಿನ ಅಂಕಿಅಂಶಗಳನ್ನು ನೋಡಲಾಯಿತು ಮತ್ತುಅಧ್ಯಯನದ ನಂತರ, ದಾಸರ ಶೆಟ್ಟಿಹಳ್ಳಿ (ಪ್ರಸ್ತುತ ಚಾಕಶೆಟ್ಟಿಹಳ್ಳಿ) ಹೊಯ್ಸಳರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ. 

ಮಸಣಯ್ಯ ಹೊಯ್ಸಳರ ಆಡಳಿತದಲ್ಲಿ ಪ್ರಮುಖ ಸ್ಥಾನಮಾನದ ಸ್ಥಾನಿಕರಾಗಿದ್ದರು. ಅವರು ಯುದ್ಧದಲ್ಲಿ ಹೋರಾಡಿದರು ಮತ್ತು ತೀವ್ರವಾಗಿ ಗಾಯಗೊಂಡರು. ಬಳಿಕ ಗಂಡನ ಮೇಲಿನ ಪ್ರೀತಿಯಿಂದ ಮಸಣಯ್ಯನ ಹೆಂಡತಿಯೂ ಸಾಯಲು ಬಯಸಿದ್ದರು. ಹೀಗಾಗಿ ಮಸಣಯ್ಯ ಮೊದಲಿಗೆ ಆಕೆಗೆ ಚಾಕುವಿನಿಂದ ಇರಿದು, ತಾನೂ ತನ್ನ ಜೀವನವನ್ನು ಕೊನೆಗೊಳಿಸಿಕೊಂಡರು.

ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟ ಮಾಡಿ ಮಡಿದ ವೀರರ ಸ್ಮರಣಾರ್ಥವಾಗಿ ನಿಲ್ಲಿಸಿದವರಾಗಿರುತ್ತವೆ. ಮಹಾಸತಿ ಕಲ್ಲುಗಳು ಮಡಿದ ಪತಿಯನ್ನು ಅನುಸರಿಸಿದ ಸ್ಮರಣಾರ್ಥ ನಿಲ್ಲಿಸಿದವಾಗಿರುತ್ತವೆ. ಆದರೆ, ಈಗ ಸಿಕ್ಕಿರುವ ವೀರಗಲ್ಲು ತನ್ನ ಪತ್ನಿಯನ್ನು ಕೊಂದು ತಾನೂ ಮಡಿದಿರುವುದರ ಸ್ಮರಣಾರ್ಥವಾಗಿ ಸ್ಥಾಪಿಸಿದ್ದಾಗಿದೆ. ಈ ರೀತಿಯ ಸ್ಮಾರಕ ಶಾಸನಶಿಲ್ಪಗಳು ಹೊಯ್ಸಳರ ಕಾಲದಲ್ಲಿಯೇ ಆಗಲಿ, ಬೇರಾವುದೇ ರಾಜಮನೆತನಗಳ ಕಾಲದಲ್ಲಿ ಈವರೆಗೆ ಕಂಡುಬಂದಿಲ್ಲ’ ಎಂದು ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ತಿಳಿಸಿದರು.

‘ವೀರಗಲ್ಲು ಹಾಗೂ ಮಹಾಸತಿಕಲ್ಲುಗಳು ಸಿಗುವುದು ಸಾಮಾನ್ಯ. ಆದರೆ, ಚುಚ್ಚಿ ಕೊಂದು ಪತಿಯು ಮರಣ ಹೊಂದಿರುವ ಶಾಸನ ಮತ್ತು ಶಿಲ್ಪ ದೊರೆತಿರುವುದು ಇದೇ ಮೊದಲು. ಆದ್ದರಿಂದ ಇದು ಬಹಳ ವಿಶೇಷವಾದುದಾಗಿದೆ.

ಈ ವಿಶೇಷವಾದ ಹೊಯ್ಸಳರ ಶಾಸನೋಕ್ತವಾದ ವೀರಗಲ್ಲಿನ ಅರ್ಧಭಾಗವು ಭೂಮಿಯಲ್ಲಿ ಹುದುಗಿತ್ತು. ಕಚೇರಿ ಸೂಪರಿಂಟೆಂಡೆಂಟ್ ಲಿಂಗರಾಜು ಎಚ್.ಸಿ., ಕಿರಿಯ ಸಂಶೋಧಕ ಡಾ.ರಕ್ಷಿತ್ ಎ.ಪಿ. ಕೂಡ ತಂಡದಲ್ಲಿದ್ದರು. ಸ್ಥಳೀಯ ಮುಖಂಡರಾದ ಜಯಶಂಕರ್, ಬಸಪ್ಪ ಅವರ ಸಹಕಾರ ಪಡೆದು ಜ.6ರಂದು ವೀರಗಲ್ಲು ಪೂರ್ಣ ಪ್ರಮಾಣದಲ್ಲಿ ಕಾಣುವಂತೆ ಭೂಮಿಯನ್ನು ಅಗೆದು ಹೊರತೆಗೆದು ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳಲಾಯಿತು’ ಎಂದು ವಿವರ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com