ಗೃಹ ಜ್ಯೋತಿ ಯೋಜನೆಯಲ್ಲಿ ದಾಖಲಾತಿ ಮಾಡಿಕೊಂಡರೂ ಬಾಕಿ ಉಳಿಕೆ ಬಿಲ್ ನ್ನು ಕಡ್ಡಾಯವಾಗಿ ಕಟ್ಟಲೇಬೇಕು

ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಂಡರೆ ಆಗಸ್ಟ್ 1ರಿಂದ ವಿದ್ಯುತ್‌ ಬಿಲ್ ಪಾವತಿಸಬೇಕಾಗಿಲ್ಲ ಎಂದು ನೀವು ಭಾವಿಸಿದ್ದರೆ, ಅದು ತಪ್ಪು. ಗ್ರಾಹಕರ ಮಾಸಿಕ ಯೂನಿಟ್‌ 200 ಕ್ಕಿಂತ ಕಡಿಮೆ ಬಂದಿದ್ದರೆ ಬಿಲ್ ಕಟ್ಟಬೇಕಾಗಿಲ್ಲದಿದ್ದರೂ ಕೆಇಆರ್‌ಸಿ ಆದೇಶದಂತೆ ಜೂನ್ ಮತ್ತು ಜುಲೈ ತಿಂಗಳ ಬಾಕಿ ಪಾವತಿಸಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಂಡರೆ ಆಗಸ್ಟ್ 1ರಿಂದ ವಿದ್ಯುತ್‌ ಬಿಲ್ ಪಾವತಿಸಬೇಕಾಗಿಲ್ಲ ಎಂದು ನೀವು ಭಾವಿಸಿದ್ದರೆ, ಅದು ತಪ್ಪು. ಗ್ರಾಹಕರ ಮಾಸಿಕ ಯೂನಿಟ್‌ 200 ಕ್ಕಿಂತ ಕಡಿಮೆ ಬಂದಿದ್ದರೆ ಬಿಲ್ ಕಟ್ಟಬೇಕಾಗಿಲ್ಲದಿದ್ದರೂ ಕೆಇಆರ್‌ಸಿ ಆದೇಶದಂತೆ ಜೂನ್ ಮತ್ತು ಜುಲೈ ತಿಂಗಳ ಬಾಕಿ ಪಾವತಿಸಬೇಕಾಗುತ್ತದೆ. ಗ್ರಾಹಕರು ಕಳೆದ ಮೂರು ತಿಂಗಳ ಬಾಕಿಯನ್ನು ನಿಗದಿತ ದಂಡದೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಜೂನ್ ತಿಂಗಳ ಬಿಲ್‌ನಲ್ಲಿ ಮೇ ತಿಂಗಳು ಗ್ರಾಹಕರು ಖರ್ಚು ಮಾಡಿದ ವಿದ್ಯುತ್ ಯೂನಿಟ್ ಗಳ ಬೆಲೆಯಲ್ಲಿ ದಿಢೀರ್‌ ಏರಿಕೆ ಕಂಡು ಅಳಲು ತೋಡಿಕೊಂಡ ಗ್ರಾಹಕರು, ಜುಲೈ ಬಿಲ್‌ನಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. 2022-23ರ ಮೊದಲ ತ್ರೈಮಾಸಿಕದಲ್ಲಿ ಕೆಇಆರ್‌ಸಿ ಆದೇಶಗಳ ಪ್ರಕಾರ ಜೂನ್‌ವರೆಗೆ ವಿವಿಧ ವಿದ್ಯುತ್ ಸರಬರಾಜು ನಿಗಮಗಳು (ಎಸ್ಕಾಮ್‌ಗಳು) ಬಾಕಿ ಸಂಗ್ರಹಿಸುತ್ತಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜುಲೈನಿಂದ ಡಿಸೆಂಬರ್ 2023 ರವರೆಗೆ ಜೂನ್ 2, 2023 ರ ಕೆಇಆರ್‌ಸಿ ಆದೇಶದ ಪ್ರಕಾರ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (ಎಫ್‌ಪಿಪಿಸಿಎ) ಪ್ರಕಾರ ಬಾಕಿ ವಸೂಲಾತಿ ಪ್ರಾರಂಭವಾಗುತ್ತದೆ.

ಗ್ರಾಹಕರಿಗೆ ಬಾಕಿಯಿರುವ ವಿವರಗಳನ್ನು ತಿಳಿಸಲು ವಿವಿಧ ಎಸ್ಕಾಮ್‌ಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಕೆಇಆರ್‌ಸಿ ಆದೇಶದ ಜೊತೆಗೆ ಸರ್ಕಾರಿ ಆದೇಶವನ್ನು ಪ್ರಕಟಿಸಿವೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು. ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದ ಕೆಇಆರ್‌ಸಿ ಆದೇಶವನ್ನು ಬಿಲ್ ಮಾಡಬೇಕಾದರೆ ನಂತರ ಪ್ರತಿ ಯೂನಿಟ್‌ಗೆ 90 ಪೈಸೆಗಿಂತ ಹೆಚ್ಚಿನ ಶುಲ್ಕಗಳು ಇರುವುದರಿಂದ ಗ್ರಾಹಕರು ಭಾರಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಕಾಗುತ್ತದೆ. ಇದು ಬಿಲ್‌ಗಳಲ್ಲಿ ಬಾಕಿ ಎಂದು ತೋರಿಸುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಿವಿಧ ಎಸ್ಕಾಮ್‌ಗಳಿಗೆ ತ್ರೈಮಾಸಿಕ ಆಧಾರದ ಮೇಲೆ ಬಾಕಿ ಸಂಗ್ರಹದ ದರವು ಭಿನ್ನವಾಗಿರುತ್ತದೆ.

ನೋಂದಣಿ 1 ಕೋಟಿ ದಾಟಿದೆ: ಇಂಧನ ಇಲಾಖೆ ಮತ್ತು ಇ-ಆಡಳಿತ ಇಲಾಖೆಯ ದಾಖಲೆಗಳ ಪ್ರಕಾರ, ಗೃಹ ಜ್ಯೋತಿ ಯೋಜನೆಯ ನೋಂದಣಿಯು ಜುಲೈ 5, 2023 ರಂದು ಒಂದು ಕೋಟಿಯ ಗಡಿಯನ್ನು ದಾಟಿದೆ, ರಾತ್ರಿ 11 ಗಂಟೆಯವರೆಗೆ ಪೋರ್ಟಲ್‌ನಲ್ಲಿ  1,00,20,163 ಗ್ರಾಹಕರು ದಾಖಲಿಸಿದ್ದಾರೆ. ಜುಲೈ 6 ರಂದು ಸಂಜೆ 5.30 ರವರೆಗೆ 1,01,62,415 ಗ್ರಾಹಕರನ್ನು ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com