ವಿದ್ಯಾರ್ಥಿ ಬಸ್ ಪಾಸ್ ವಿತರಿಸಲು ಪ್ರಾರಂಭಿಸಿದ ಬಿಎಂಟಿಸಿ; ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ...

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2023-24ನೇ ಸಾಲಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲು ಪ್ರಾರಂಭಿಸಿದೆ. 
ಬಿಎಂಟಿಸಿ ಬಸ್
ಬಿಎಂಟಿಸಿ ಬಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2023-24ನೇ ಸಾಲಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲು ಪ್ರಾರಂಭಿಸಿದೆ. 

ಈ ಹಿಂದೆ ಟಿಎನ್ಐಇ ವರದಿ ಮಾಡಿದಂತೆ, ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಡಿಯಲ್ಲಿಯೇ ಉಚಿತವಾಗಿ ಪ್ರಯಾಣಿಸಲು ಬಸ್ ನಿಗಮ ಕೇಳಿದೆ. ಹೀಗಾಗಿ ಅವರು ವಿದ್ಯಾರ್ಥಿ ಬಸ್ ಪಾಸ್‌ಗಳಿಗೆ ಚಿಂತಿಸುವ ಅಗತ್ಯವಿಲ್ಲ.

ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್‌ಗಳನ್ನು ಸೇವಾ ಸಿಂಧು ಪೋರ್ಟಲ್‌ನಿಂದ (https://sevasindhu.karnataka.gov.in) ಅಥವಾ BMTC ವೆಬ್‌ಸೈಟ್‌ಗೆ (https://mybmtc.karnataka.gov.in) ಲಾಗಿನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು. 

ಅರ್ಜಿ ಸಲ್ಲಿಸುವುದು ಹೇಗೆ?

<strong>ಬಿಎಂಟಿಸಿ ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಕೆ ವಿಧಾನ</strong>
ಬಿಎಂಟಿಸಿ ವೆಬ್‌ಸೈಟಿನಲ್ಲಿ ಅರ್ಜಿ ಸಲ್ಲಿಕೆ ವಿಧಾನ

https://sevasindhu.karnataka.gov.in ಅಥವಾ BMTC ವೆಬ್‌ಸೈಟ್‌ಗೆ https://mybmtc.karnataka.gov.in ಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮತ್ತೊಂದು ವಿಂಡೋ ತೆರೆಯಲಿದೆ. ಇಲ್ಲಿ ನಿಮ್ಮ ನಿಮ್ಮ ವ್ಯಾಸಂಗದ ಆಯ್ಕೆಯನ್ನು ಕ್ಲಿಕ್ಕಿಸಿದರೆ ನಂತರ ಅರ್ಜಿ ನಮೂನೆ ತೆರೆಯಲಿದೆ. ಅಲ್ಲಿ ಕೇಳಿದ ವಿವರಗಳನ್ನು ನಮೂದಿಸಿ, ನಿಮ್ಮ ಫೋಟೊ, ಶಾಲಾ/ಕಾಲೇಜು ರಸೀತಿ, ಅರ್ಜಿ ನಮೂನೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

<strong>ಸೇವಾಸಿಂಧು ಪೋರ್ಟಲ್ ಮೂಲಕ ಈ ಆಯ್ಕೆ ಮಾಡಿಕೊಳ್ಳಬಹುದಾಗಿದೆ</strong>
ಸೇವಾಸಿಂಧು ಪೋರ್ಟಲ್ ಮೂಲಕ ಈ ಆಯ್ಕೆ ಮಾಡಿಕೊಳ್ಳಬಹುದಾಗಿದೆ

ಒಂದು ವೇಳೆ ಆಫ್‌ಲೈನ್‌ನಲ್ಲಿ ಪಡೆಯಲು ಇಚ್ಛಿಸುವವರು ಕೆಂಪೇಗೌಡ ಬಸ್ ನಿಲ್ದಾಣ, ಆನೇಕಲ್ ಬಸ್ ನಿಲ್ದಾಣ, ಕೆಂಗೇರಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರಗಳು (ಟಿಟಿಎಂಸಿ), ಶಾಂತಿನಗರ ಟಿಟಿಎಂಸಿ, ಹೊಸಕೋಟೆ ಡಿಪೋ, ಎಲೆಕ್ಟ್ರಾನಿಕ್ ಸಿಟಿ ಡಿಪೋಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ಪಡೆಯಬಹುದಾಗಿದೆ.

ಶುಕ್ರವಾರದಿಂದ ಬಸ್ ಪಾಸ್ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಶಾಲಾ-ಕಾಲೇಜುಗಳು ಪುನರಾರಂಭಗೊಂಡಿರುವುದರಿಂದ 1ನೇ ತರಗತಿಯಿಂದ 10ನೇ ತರಗತಿ, ಪಿಯುಸಿ, ಪದವಿ ಮತ್ತು ಪಿಜಿ ವಿದ್ಯಾರ್ಥಿಗಳು ಹಾಗೂ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2022-23ನೇ ಸಾಲಿಗೆ ನೀಡಲಾದ ತಮ್ಮ ಹಳೆಯ ಪಾಸ್‌ಗಳನ್ನು ತೋರಿಸಿ ಅಥವಾ ಪ್ರಸಕ್ತ ವರ್ಷದ ಪ್ರವೇಶ ರಸೀದಿಗಳನ್ನು ತೋರಿಸುವ ಮೂಲಕ ಪ್ರಯಾಣಿಸಲು ಬಿಎಂಟಿಸಿ ಸದ್ಯಕ್ಕೆ ಅನುಮತಿ ನೀಡಿದೆ. ಜುಲೈ 15ರವರೆಗೆ ವಿದ್ಯಾರ್ಥಿಗಳು ಈ ಮಾರ್ಗವನ್ನು ಅನುಸರಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com