'ಅತ್ಯಂತ ಯಶಸ್ವಿ ವ್ಯಕ್ತಿಗಳೊಂದಿಗೆ ಬದುಕುವುದು ಕಷ್ಟ ಎಂದ ಇನ್ಫೋಸಿಸ್ ಸುಧಾ ಮೂರ್ತಿ: ಅವರ ಅನುಭವ ಕೇಳಿ...

ಸುಧಾ ಮೂರ್ತಿ ಸದಾ ಸುದ್ದಿಯಲ್ಲಿರುವ ಹೆಸರು, ಲೇಖಕಿ, ಸಮಾಜಸೇವಕಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ, ಅಕ್ಷತಾ ಮೂರ್ತಿ ಅವರ ತಾಯಿ, ಯುಕೆ ಪಿಎಂ ರಿಷಿ ಸುನಕ್ ಅವರ ಅತ್ತೆ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ.
ಸುಧಾ ಮೂರ್ತಿ
ಸುಧಾ ಮೂರ್ತಿ
Updated on

ಸುಧಾ ಮೂರ್ತಿ ಸದಾ ಸುದ್ದಿಯಲ್ಲಿರುವ ಹೆಸರು, ಲೇಖಕಿ, ಸಮಾಜಸೇವಕಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ, ಅಕ್ಷತಾ ಮೂರ್ತಿ ಅವರ ತಾಯಿ, ಯುಕೆ ಪಿಎಂ ರಿಷಿ ಸುನಕ್ ಅವರ ಅತ್ತೆ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ.

ನಿನ್ನೆ ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಸುಧಾ ಮೂರ್ತಿ(Sudha Murthy) ಮಾತನಾಡಿದರು. ಸಮಾರಂಭದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ಮತ್ತು ಅವರ ಪುತ್ರ ರೋಹನ್ ಮೂರ್ತಿ(Rohan Murthy) ಭಾರತದಲ್ಲಿ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ನಾರಾಯಣ ಮೂರ್ತಿ ಅವರು ತಮ್ಮ ಜೀವನಪರ್ಯಂತ ವೃತ್ತಿಯಲ್ಲಿ ಪತ್ನಿ ಸುಧಾ ಮೂರ್ತಿಯಿಂದ ಸಿಕ್ಕಿದ ಬೆಂಬಲವನ್ನು ಮನಸಾರೆ ಹೊಗಳಿದ್ದಾರೆ. 

ಈ ವೇಳೆ ವೇದಿಕೆಗೆ ಆಗಮಿಸಿ ಮಾತನಾಡಿದ ಸುಧಾ ಮೂರ್ತಿ, ಹೆಚ್ಚು ಯಶಸ್ವಿ ವ್ಯಕ್ತಿಯೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ ಎಂದು ನಾನು ಎಲ್ಲಾ ಯುವ ಉದ್ಯಮಿಗಳಿಗೆ ಹೇಳಲು ಬಯಸುತ್ತೇನೆ. ಅವರು ಸಾಮಾನ್ಯವಾಗಿ ಸಹಜತೆಯಿಂದ ವರ್ತಿಸುವುದಿಲ್ಲ, ವಿಲಕ್ಷಣ ವರ್ತನೆ ಹೊಂದಿರುತ್ತಾರೆ. ಅವರಿಗೆ ಮನೆಗಳಲ್ಲಿ ತರ್ಕವಿರುವುದಿಲ್ಲ, ಕಚೇರಿಗಳಲ್ಲಿ ಮಾತ್ರ ಇರುತ್ತದೆ ಎಂದಾಗ ನೆರೆದಿದ್ದ ಸಭಿಕರು ನಕ್ಕರು. 

ಒಬ್ಬ ಯಶಸ್ವಿ ಉದ್ಯಮಿಯ ಪತ್ನಿ ಅವರಿಗೆ ಕೇವಲ ಪತ್ನಿ ಮಾತ್ರ ಆಗಿರುವುದಿಲ್ಲ. ಕಾರ್ಯದರ್ಶಿ, ಹಣಕಾಸು ವ್ಯವಸ್ಥಾಪಕಿ, ದಾದಿ, ಸಲಹೆಗಾರ್ತಿ ಮತ್ತು ಇನ್ನೂ ಅನೇಕ ಪಾತ್ರಗಳನ್ನು ಪತಿಯಾದವರು ನಿರೀಕ್ಷಿಸುತ್ತಾರೆ. ಇವೆಲ್ಲವನ್ನೂ ಮಹಿಳೆ ಮಾಡಬೇಕು. ಅವುಗಳಲ್ಲಿ ಯಾವುದಾದರೂ ಒಂದರಲ್ಲಿ ವಿಫಲವಾದರೆ ಅದು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಹ ಸುಧಾ ಮೂರ್ತಿ ಹೇಳಿದರು.

ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು. ಎಷ್ಟು ವರ್ಷಗಳ ಕಾಲ ಕಾಡಿಗೆ ಹೋಗುತ್ತಾರೆ, ಅವರು ಎಷ್ಟು ವರ್ಷಗಳ ಕಾಲ ಧ್ಯಾನ ಮಾಡುತ್ತಾರೆ ಮತ್ತು ಏನು ಪಡೆಯುತ್ತಾರೆ ಎಂಬುದು ವಿಷಯವಾಗುತ್ತಿತ್ತು. ಇಂದು ಒಬ್ಬ ವ್ಯಕ್ತಿಯ ಜೀವನ, ಚಿಕ್ಕ ವಯಸ್ಸಿನಲ್ಲಿ ನಡೆದುಕೊಂಡು ಬಂದ ಹಾದಿ, ಅವನ ಉದ್ವೇಗ, ಆಕಾಂಕ್ಷೆಗಳಿಗೆ ಕಂಪೆನಿಯಲ್ಲಿ ಮಾಡುವ ಕೆಲಸ, ಗಳಿಸುವ ಯಶಸ್ಸು ತಪಸ್ಸು ಆಗಿರುತ್ತದೆ ಎಂದರು. 

ಅಷ್ಟೇ ಅಲ್ಲದೆ ಸುಧಾ ಮೂರ್ತಿಯವರು, ಒಬ್ಬ ಮಹಿಳೆ ಪುರುಷನಿಗಿಂತ ಬಲಶಾಲಿಯಾಗಿರಬೇಕು. ಕಚೇರಿಯಲ್ಲಿ ಆತ ತುಂಬಾ ಬಲಶಾಲಿಯಾಗಿರಬಹುದು ಆದರೆ ಮಹಿಳೆ ಅವನಿಗಿಂತ ಹೆಚ್ಚು ಯಶಸ್ವಿಯಾಗಿರಬೇಕು ಎಂದು ಹಾಸ್ಯಮಿಶ್ರಿತವಾಗಿ ಸುಧಾ ಮೂರ್ತಿಯವರು ಹೇಳಿದಾಗ ನೆರೆದಿದ್ದವರಲ್ಲಿ ಚಪ್ಪಾಳೆ ಮತ್ತು ನಗುವಿನ ಸುರಿಮಳೆಯಾಯಿತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com