ಮುಂಗಾರು ಕೊರತೆಯ ನಡುವೆಯೂ ರೈತರಲ್ಲಿ ಆಶಾವಾದ ಮೂಡಿಸಿದ 'ಮಳೆ': ದೀರ್ಘಾವಧಿ ಬೆಳೆ ಬೆಳೆಯಲು ತಜ್ಞರ ಸಲಹೆ!

ಕೆಲವು ವಾರಗಳ ಹಿಂದೆ ಮುಂಗಾರು ಪ್ರಾರಂಭವಾದಾಗಿನಿಂದ ಕರ್ನಾಟಕವು ಮಳೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ನಡುವೆಯೂ,  ಕೆಲ ದಿನಗಳಿಂದ ಮಳೆ ಚುರುಕುಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಲವು ವಾರಗಳ ಹಿಂದೆ ಮುಂಗಾರು ಪ್ರಾರಂಭವಾದಾಗಿನಿಂದ ಕರ್ನಾಟಕವು ಮಳೆಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ ನಡುವೆಯೂ,  ಕೆಲ ದಿನಗಳಿಂದ ಮಳೆ ಚುರುಕುಗೊಂಡಿದೆ.

ಮುಂದಿನ ಕೆಲವು ವಾರಗಳಲ್ಲಿ, ಮಳೆ ಕೊರತೆ ಸಂಪೂರ್ಣವಾಗಿ ಇಲ್ಲದಂತಾಗುವ ಸಾಧ್ಯೆತೆಯಿದೆ. ಇದರೊಂದಿಗೆ ಮುಂದಿನ ಎರಡು ತಿಂಗಳ ಕಾಲ ಸಾಮಾನ್ಯ ಮಳೆಯಾಗುವುದರಿಂದ ರೈತರು ದೀರ್ಘಾವಧಿ ಬೆಳೆಗಳ ಮೊರೆ ಹೋಗುವಂತೆ ತಜ್ಞರು ಸಲಹೆ ನೀಡುತ್ತಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವರದಿಯು ಜೂನ್ 1 ರಿಂದ ಜುಲೈ 9 ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ದಾಖಲಿಸಿದೆ. 22 ಜಿಲ್ಲೆಗಳು ಮಳೆ ಅಭಾವಕ್ಕೆ ಸಾಕ್ಷಿಯಾಗಿವೆ, ಬಾಗಲಕೋಟೆಯಲ್ಲಿ  ಹೆಚ್ಚಿನ ಕೊರತೆ ದಾಖಲಾಗಿದೆ. ಆರು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ದು, ಎರಡು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಸುಧಾರಿಸುತ್ತಿದ್ದು, ಕೊರತೆ ಕಡಿಮೆಯಾಗುತ್ತಿದೆ. ಮುಂದಿನ ಕೆಲವು ದಿನಗಳು ಈ ಮುನ್ಸೂಚನೆಯು ಉತ್ತಮವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೆಎಸ್‌ಎನ್‌ಡಿಎಂಸಿ ಅಂಕಿಅಂಶಗಳ ಪ್ರಕಾರ ಜುಲೈ 3 ರವರೆಗೆ 35 ತಾಲ್ಲೂಕುಗಳಲ್ಲಿ ವಾಡಿಕೆ ಮಳೆಯಾಗಿದ್ದು, ಈಗ 75 ತಾಲ್ಲೂಕುಗಳಿಗೆ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ರಾಜ್ಯವು ಶೇಕಡಾ 66 ರಷ್ಟು ಕೊರತೆಯನ್ನು ಎದುರಿಸಿತ್ತು ಈಗ ಅದು ಶೇಕಡಾ 32 ಕ್ಕೆ ಇಳಿದಿದೆ ಎಂದು ವಿವರಿಸಿದೆ.  ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಳೆ ಕೊರತೆಯಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡುವಂತೆ ಹಲವು ಶಾಸಕರು ಒತ್ತಾಯಿಸಿದ್ದರು. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಜುಲೈ 15ರವರೆಗೆ ಕಾಯುವುದಾಗಿ ಹೇಳಿದ್ದರು.  ಮಳೆ ಮತ್ತು ಜಲಾಶಯದ ಮಟ್ಟಗಳು ಸೇರಿದಂತೆ ಬರ ಘೋಷಣೆಗೆ ಹಲವು ನಿಯಮಗಳಿವೆ ಎಂದು ರೆಡ್ಡಿ ವಿವರಿಸಿದರು.

ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ನಿಯಮಗಳ ಪ್ರಕಾರ, ಎರಡು ತಿಂಗಳಿಗಿಂತ ಹೆಚ್ಚು ಕಾಲ ಮಳೆ ಕೊರತೆ ಇರಬೇಕು. ಆದರೆ ಕರ್ನಾಟಕದಲ್ಲಿ ಈ ವರ್ಷ ಜೂನ್‌ನಲ್ಲಿ ಕೊರತೆಯಾಗಿದ್ದರೂ ಜುಲೈನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ಅನೇಕ ಜಿಲ್ಲೆಗಳಲ್ಲಿ, ವಿಶೇಷವಾಗಿ ಮಲೆನಾಡು ಪ್ರದೇಶಗಳಲ್ಲಿ ಮಳೆ ಕೊರತೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ 2019 ರಲ್ಲಿ ಬರಕ್ಕೆ ಸಾಕ್ಷಿಯಾಯಿತು. ಅಂದಿನಿಂದ ಪ್ರತಿ ವರ್ಷವೂ ಉತ್ತಮ ಮಳೆಯಾಗುತ್ತಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದು ಕೃಷಿ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಪ್ರೊ.ಎಂ.ಬಿ.ರಾಜೇಗೌಡ ತಿಳಿಸಿದರು.

ಸೆಪ್ಟೆಂಬರ್‌ನಲ್ಲಿ ಕೊರತೆಯಿದ್ದರೂ, ರಾಜ್ಯದಲ್ಲಿ ಹೇಗಾದರೂ ಅಕ್ಟೋಬರ್‌ನಿಂದ ಮಳೆ ಬೀಳುತ್ತದೆ. ಸದ್ಯ ರಾಜ್ಯದ ಬಹುತೇಕ ಕಡೆ ಉತ್ತಮ ಮಳೆಯಾಗುತ್ತಿದೆ. ಇದರಿಂದ ರೈತರು ಇನ್ನೂ ರಾಗಿ, ಭತ್ತ, ಶೇಂಗಾ, ಜೋಳ ಸೇರಿದಂತೆ ದೀರ್ಘಾವಧಿ ಬೆಳೆ ಬೆಳೆಯಬಹುದು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com