ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತಕ್ಕೆ ಇದುವರೆಗೆ 100 ಸಾವು, 335 ಮಂದಿ ಗಾಯ: ಡಾ ಜಿ ಪರಮೇಶ್ವರ್

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಇದುವರೆಗೆ ಅಪಘಾತದಲ್ಲಿ 100 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಅಂಕಿಅಂಶ ಮಾಹಿತಿ ನೀಡಿದೆ.
ಸದನದಲ್ಲಿ ಉತ್ತರಿಸಿದ ಡಾ ಜಿ ಪರಮೇಶ್ವರ್
ಸದನದಲ್ಲಿ ಉತ್ತರಿಸಿದ ಡಾ ಜಿ ಪರಮೇಶ್ವರ್
Updated on

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಇದುವರೆಗೆ ಅಪಘಾತದಲ್ಲಿ 100 ಮಂದಿ ಮೃತಪಟ್ಟಿದ್ದು 335 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ಅಂಕಿಅಂಶ ಮಾಹಿತಿ ನೀಡಿದೆ.

ಇಂದು ಮಂಗಳವಾರ ಸದನದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ್, ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಿಲ್ಲ. ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ‌ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗುತ್ತಿವೆ ಎಂದರು.

ಹೆದ್ದಾರಿಯಲ್ಲಿ ವೇಗವಾಗಿ ವಾಹನ ಬಂದಾಗ ಅಪಘಾತಗಳಾಗುತ್ತಿವೆ. ಮಾರ್ಚ್​ನಲ್ಲಿ 62 ಅಪಘಾತವಾಗಿದ್ದು, 20 ಜನ ಮೃತಪಟ್ಟಿದ್ದಾರೆ. 63 ಜನ ಗಾಯಗೊಂಡಿದ್ದಾರೆ. ಏಪ್ರಿಲ್​ನಲ್ಲಿ 23 ಜನ ಸಾವು, 83 ಗಾಯ. ಮೇ ತಿಂಗಳಲ್ಲಿ 29 ಸಾವು, 93 ಗಾಯ. ಜೂನ್ 28 ಸಾವು, 96 ಗಾಯ. ಮಾರ್ಚ್​​ನಿಂದ ಜೂನ್​ವರೆಗೆ ಒಟ್ಟು 100 ಸಾವು ಸಂಭವಿಸಿದ್ದು 335 ಜನರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿವರಿಸಿದರು.

ಸಂಚಾರ ವಿಭಾಗದ ಎಡಿಜಿಪಿ ಎಕ್ಸ್​​ಪ್ರೆಸ್​ ವೈವೇ ಪರಿಶೀಲಿಸಿದ್ದಾರೆ. ಪಾದಚಾರಿಗಳು ಹೆದ್ದಾರಿಗೆ ಬರದಂತೆ ತಂತಿ ಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ಯಾಟ್ರೋಲಿಂಗ್ ವಾಹನಗಳ ಸಂಖ್ಯೆ ಹೆಚ್ಚಿಸಲು, ಯಾವುದೇ ವಾಹನಗಳು ಮಾರ್ಗ ಮಧ್ಯೆ ನಿಲ್ಲದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಎಕ್ಸ್​​ಪ್ರೆಸ್​ ವೈವೇ ವ್ಯಾಪ್ತಿಯಲ್ಲಿ ಸ್ಥಳಗಳ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಲೈನ್ ಪಾಲನೆಗೆ ಕ್ರಮ, ಓವರ್ ಟೇಕ್ ಹೇಗೆ ಅನ್ನೋ ಬಗ್ಗೆ ಸೂಚನೆ ಕೊಡಲಾಗುತ್ತದೆ.

ಕೆಲವು ವಾಹನ ಚಾಲಕರಿಗೆ ಸಂಚಾರಿ ನಿಯಮಗಳು ಗೊತ್ತಿಲ್ಲ. ಲೈಸೆನ್ಸ್ ಸುಲಭವಾಗಿ ಸಿಗುತ್ತದೆ, ಹಾಗಾಗಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ರಾಜ್ಯ ಸರ್ಕಾರ ಪತ್ರ ಬರೆಯುತ್ತದೆ. ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದರು.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಕಳೆದ ಮಾರ್ಚ್ 13 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಗಂಟೆಗೆ 100 ರಿಂದ 120 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಚಲಿಸುವಂತೆ ಎಕ್ಸ್‌ಪ್ರೆಸ್‌ವೇ ವಿನ್ಯಾಸಗೊಳಿಸಲಾಗಿದ್ದರೂ ಅಪಘಾತ ತಡೆಗೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸರಿಯಾಗಿ ಅಳವಡಿಸದೇ ಇರುವುದು ಅಪಘಾತ, ಸಾವು-ನೋವುಗಳಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com