ಬೆಂಗಳೂರು ಮೆಟ್ರೊ: ಬೈಯಪ್ಪನಹಳ್ಳಿ-ಕೆಆರ್ ಪುರಂ ನೇರಳೆ ಮಾರ್ಗದ ಸುರಕ್ಷತಾ ತಪಾಸಣೆ ಆಗಸ್ಟ್ ತಿಂಗಳಲ್ಲಿ

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗಕ್ಕಾಗಿ ಮೆಟ್ರೊ ರೈಲು ಸುರಕ್ಷತೆ (CMRS) ಆಯುಕ್ತರಿಗೆ ದಾಖಲೆಗಳನ್ನು ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ನೇರಳೆ ಮಾರ್ಗದ ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗಕ್ಕಾಗಿ ಮೆಟ್ರೊ ರೈಲು ಸುರಕ್ಷತೆ (CMRS) ಆಯುಕ್ತರಿಗೆ ದಾಖಲೆಗಳನ್ನು ಸಲ್ಲಿಸಿದೆ.

ಆಗಸ್ಟ್ 20 ರ ನಂತರ ಯಾವಾಗ ಬೇಕಾದರೂ ತಪಾಸಣೆ ನಡೆಸಲು ಆಯುಕ್ತರು ಆಹ್ವಾನಿಸಬಹುದು ಎಂದು ಮೆಟ್ರೊ ನಿಗಮದ ಮೂಲಗಳು ತಿಳಿಸಿವೆ. 2.5-ಕಿಮೀ ಮಾರ್ಗದ ವಾಣಿಜ್ಯ ಉದ್ದೇಶದ ಬಳಕೆ ಆರಂಭಕ್ಕೆ ಇತ್ತೀಚಿನ ಗಡುವನ್ನು ಆಗಸ್ಟ್-ಅಂತ್ಯದ ವೇಳೆಗೆ ನಿಗದಿಪಡಿಸಲಾಗಿದೆ.

ದಾಖಲೆಯನ್ನು ಇಂದು ಅಥವಾ ನಾಳೆ ಸಿಎಂಆರ್‌ಎಸ್‌ಗೆ ಸಲ್ಲಿಸಲಾಗುವುದು. ಆಗಸ್ಟ್ 20 ರ ನಂತರ ಯಾವುದೇ ದಿನ ತಪಾಸಣೆ ನಡೆಸಲಾಗುವುದು ಎಂದು ಮೆಟ್ರೊ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೇರಳೆ ಮಾರ್ಗದ ಪ್ರಸ್ತುತ ಸ್ಥಿತಿಯ ಬಗ್ಗೆ ಕೇಳಿದಾಗ, ಟ್ರಾಕ್ಷನ್ ಕಾಮಗಾರಿ ಪೂರ್ಣಗೊಂಡಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. ''ಸಿಗ್ನಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಜುಲೈ 20 ರಿಂದ ರೋಲಿಂಗ್ ಸ್ಟಾಕ್ ಪ್ರಯೋಗಗಳನ್ನು (Train trial run)) ನಡೆಸಲಾಗುವುದು. ಸ್ಟ್ರೆಚ್‌ನ ಸುರಕ್ಷತಾ ಅಂಶಗಳನ್ನು ನಿರ್ಣಯಿಸಲು ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ, ಖಾಸಗಿ ಏಜೆನ್ಸಿಯನ್ನು ಸಹ ತರಲಾಗುವುದು. ಎಲ್ಲಾ ಕೆಲಸಗಳು ಆಗಸ್ಟ್ 15 ಮತ್ತು 20 ರ ನಡುವೆ ಯಾವುದೇ ಸಮಯದಲ್ಲಿ ಪೂರ್ಣಗೊಳ್ಳುತ್ತವೆ ಎಂದರು. 

ಅಪೂರ್ಣವಾದ ಜ್ಯೋತಿಪುರ ನಿಲ್ದಾಣವು ಈ ವಿಸ್ತರಣೆಯನ್ನು ಒಂದು ತಿಂಗಳು ಮುಂದೂಡಲು ಕಾರಣಗಳಲ್ಲಿ ಒಂದಾಗಿದೆ. ಈ ಬಗ್ಗೆ ಮತ್ತೊಬ್ಬ ಅಧಿಕಾರಿಯನ್ನು ಕೇಳಿದರೆ, ''ಗ್ಲೇಜಿಂಗ್ ಮತ್ತು ಎಕ್ಸ್‌ಟರ್ನಲ್ ಫಿನಿಶಿಂಗ್ ಕೆಲಸಗಳು ಇನ್ನೂ ನಡೆಯುತ್ತಿವೆ. ಈ ಜುಲೈ ಅಂತ್ಯದ ವೇಳೆಗೆ ಮುಗಿಯಬಹುದು ಎಂದರು. 

ಜುಲೈ 20 ರಿಂದ ಈ ಮಾರ್ಗದ ವಿದ್ಯುತ್ ಚಾರ್ಜಿಂಗ್ ನಡೆಯಲಿದೆ ಎಂದು ಮೂಲವೊಂದು ತಿಳಿಸಿದೆ. BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, "ನಾವು ಆಗಸ್ಟ್ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗದಲ್ಲಿ ಸಂಚಾರ ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com