ಕೆಆರ್ ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ: ಮುಕ್ತಾಯದ ಗಡುವು ಆಗಸ್ಟ್ ಅಂತ್ಯಕ್ಕೆ ಮುಂದೂಡಿಕೆ

ಕೆಆರ್ ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ: ಮುಕ್ತಾಯದ ಗಡುವು  ಆಗಸ್ಟ್ ಅಂತ್ಯಕ್ಕೆ ಅಧಿಕೃತವಾಗಿ ಮುಂದೂಡಿಕೆಯಾಗಿದೆ.
ಜ್ಯೋತಿಪುರ ಮೆಟ್ರೋ ನಿಲ್ದಾಣ
ಜ್ಯೋತಿಪುರ ಮೆಟ್ರೋ ನಿಲ್ದಾಣ

ಬೆಂಗಳೂರು: ಕೆಆರ್ ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗ: ಮುಕ್ತಾಯದ ಗಡುವು  ಆಗಸ್ಟ್ ಅಂತ್ಯಕ್ಕೆ ಅಧಿಕೃತವಾಗಿ ಮುಂದೂಡಿಕೆಯಾಗಿದೆ.ನೇರಳೆ ಮಾರ್ಗದಲ್ಲಿ ಚಲ್ಲಘಟ್ಟ ನಿಲ್ದಾಣದಿಂದ  ವೈಟ್‌ಫೀಲ್ಡ್ ಕಾಡುಗೋಡಿವರೆಗಿನ ಸಂಪೂರ್ಣ ಸಿಗ್ನಲಿಂಗ್ ಸಿಂಕ್ರೊನೈಸೇಶನ್ ಮಾಡುವ ಅವಶ್ಯಕತೆಯಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದರು.

ಇದನ್ನು ಜುಲೈ ವೇಳೆಗೆ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಎಂಆರ್‌ಸಿಎಲ್‌ ನೊಂದಿಗಿನ ತಮ್ಮ ಪರಿಶೀಲನಾ ಸಭೆಯಲ್ಲಿ ಘೋಷಿಸಿರುವುದಾಗಿ ಎಂಡಿ ತಿಳಿಸಿದರು. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವೆ ಕೇವಲ 2.5 ಕಿಮೀ ದೂರದ ಕೆಲಸ ಉಳಿದಿದ್ದರೂ, ಪೂರ್ಣ ನೇರಳೆ ಮಾರ್ಗಕ್ಕೆ ಈಗ ಸಿಗ್ನಲಿಂಗ್ ನ್ನು ಮರುಹೊಂದಿಸಬೇಕಾಗಿದೆ. ಈಗ ಇದನ್ನು ಇಡೀ ಮಾರ್ಗಕ್ಕೆ ಮಾಡಬೇಕಾಗಿದೆ ಎಂದು ಅವರು ವಿವರಿಸಿದರು. ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ  13.71 ಕಿಮೀ ಉದ್ದದ ಕಾಡುಗೋಡಿ-ಕೆ ಆರ್ ಪುರ ಮಾರ್ಗದಲ್ಲಿ ಪ್ರಸ್ತುತ ಪ್ರತಿದಿನ ಸರಾಸರಿ 26,000 ರಿಂದ 27,000 ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ. 

ಹೊಸದಾಗಿ ಪ್ರಾರಂಭಿಸಲಾದ ಮಾರ್ಗಕ್ಕೆ ಪ್ರಸ್ತುತ ಗರುಡಾಚಾರ್ ಪಾಳ್ಯದ ನಿಲ್ದಾಣದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದನ್ನು ಈಗ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು, ಇದಕ್ಕೆ ಸ್ವಲ್ಪ ಸಮಯ ಬೇಕು  ಎಂದು ಎಂಡಿ ಹೇಳಿದರು. ಜ್ಯೋತಿಪುರ ಮೆಟ್ರೊ ನಿಲ್ದಾಣ ಇನ್ನೂ ಪೂರ್ಣಗೊಂಡಿಲ್ಲ.  ಜುಲೈ- ಆಗಸ್ಟ್ ಅಂತ್ಯದ ಮಧ್ಯದೊಳಗೆ ಪ್ರಾಯೋಗಿಕ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು. ಆದರೆ ಬಿಎಂಆರ್ ಸಿ ಮೂಲಗಳ ಪ್ರಕಾರ ಸೆಪ್ಟೆಂಬರ್ ವೇಳೆಗೆ ಮಾತ್ರ ಮಾರ್ಗ ಸಿದ್ದವಾಗಬಹುದು ಎನ್ನಲಾಗುತ್ತಿದೆ. 

ಹೊಸ ಮಾರ್ಗದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ ಎಂಬುದಾಗಿ ಪ್ರಯಾಣಿಕರು ಪದೇ ಪದೇ ದೂರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಎಂಡಿ, ಕಾಡುಗೋಡಿ-ಕೆಆರ್ ಪುರ ಮಾರ್ಗದಲ್ಲಿ ಜಮೀನು ಲಭ್ಯವಿಲ್ಲ. ಸೀಮಿತ ಪಾರ್ಕಿಂಗ್ ಸ್ಥಳವನ್ನು ಹೊಂದಿದ್ದೇವೆ ಮತ್ತು ಸದ್ಯಕ್ಕೆ ದ್ವಿಚಕ್ರ ವಾಹನಗಳಿಗೆ ಮಾತ್ರ ಸ್ಥಳಾವಕಾಶವಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com