ಮಲೆ ಮಹದೇಶ್ವರ ಬೆಟ್ಟ: ಸರಿಯಾದ ರಸ್ತೆಗಳಿಲ್ಲದ ಕಾರಣ 'ಆದಿವಾಸಿ'ಗಳಿಗೆ ಅನ್ನಭಾಗ್ಯವೂ ಇಲ್ಲ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು ನಾಗಮಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ತಲುಪುವುದು ದುಸ್ತರವಾಗಿದೆ.
ಸಾರಿಗೆ ಸೌಲಭ್ಯದಿಂದ ವಂಚಿತವಾಗಿರುವ ಆದಿವಾಸಿಗಳು
ಸಾರಿಗೆ ಸೌಲಭ್ಯದಿಂದ ವಂಚಿತವಾಗಿರುವ ಆದಿವಾಸಿಗಳು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು ನಾಗಮಲೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಸಮೀಪದ ಗ್ರಾಮಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ತಲುಪುವುದು ದುಸ್ತರವಾಗಿದೆ.

ಪುದೂರಿನಿಂದ ನಾಗಮಲೆವರೆಗಿನ ಏಕೈಕ ರಸ್ತೆ (10 ಕಿ.ಮೀ) ಡಾಂಬರೀಕರಣಗೊಳ್ಳದೆ ದಯನೀಯ ಸ್ಥಿತಿಯಲ್ಲಿದೆ. ಇದರಿಂದಾಗಿ ನಾಗಮಲೆ ಮತ್ತು ಸಮೀಪದ ಗ್ರಾಮಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಆಹಾರಧಾನ್ಯ ಮತ್ತು ಇತರ ವಸ್ತುಗಳನ್ನು ಸಾಗಿಸಲು ಟ್ರಕ್ ಚಾಲಕರು ಹಿಂದೇಟು ಹಾಕುತ್ತಾರೆ.

ಸುಮಾರು 50 ಕುಟುಂಬಗಳು ತಮ್ಮ ಉಳಿವಿಗಾಗಿ ಸ್ಥಳೀಯವಾಗಿ ದೊರೆಯುವ ಆಹಾರಧಾನ್ಯಗಳನ್ನು ಅವಲಂಬಿಸಿವೆ. ಇತ್ತೀಚಿನವರೆಗೂ, ಮಲೆ ಮಹದೇಶ್ವರ ಬೆಟ್ಟದ ಹಳ್ಳಿಗಳಿಗೆ ಆಹಾರ ಧಾನ್ಯಗಳು ಮತ್ತು ಇತರ ಸರಕುಗಳನ್ನು ತಲುಪಲು ಹೇಸರಗತ್ತೆಗಳನ್ನು ಬಳಸಲಾಗುತ್ತಿತ್ತು. ಆದರೆ ಹೆಚ್ಚುತ್ತಿರುವ ವೆಚ್ಚದ ಕಾರಣ ಹೇಸರಗತ್ತೆ ಮಾಲೀಕರು ಅವುಗಳನ್ನು ಸಾಕುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಈ ಸಾರಿಗೆ ವಿಧಾನವು ಈಗ ಲಭ್ಯವಿಲ್ಲ.

ಕಳಪೆ ಸಾರಿಗೆ ಸೌಲಭ್ಯದಿಂದಾಗಿ ಅವರು ಈಗ ನಾಲ್ಕು ತಿಂಗಳಿಗೊಮ್ಮೆ ಆಹಾರ ಧಾನ್ಯ ಪೂರೈಸಲಾಗುತ್ತಿದೆಯ ಎಂಎಂ ಹಿಲ್ಸ್‌ನ ಮೇಲಿರುವ ಪಡಸುಲನಾಥ ಗ್ರಾಮದ ಅನೇಕ ಕುಟುಂಬಗಳು ಆಹಾರ ಧಾನ್ಯಗಳನ್ನು ಪಡೆಯಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪಾಲಾರ್‌ಗೆ ನಡೆದುಕೊಂಡು ಹೋಗುತ್ತಾರೆ. ಸರಕಾರ ವಾಹನ ಸೌಲಭ್ಯ ಒದಗಿಸಿದ್ದರೂ ಅವು ಬೆಟ್ಟದ ಮೇಲಿನ ಹಳ್ಳಿಗಳಿಗೆ ಹೋಗುತ್ತಿಲ್ಲ ಹೀಗಾಗಿ ಪ್ರತಿ ತಿಂಗಳು ಆಹಾರಧಾನ್ಯ ಸಿಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಚಂದ್ರು ಹೇಳಿದ್ದಾರೆ.

ತಮ್ಮ ಗ್ರಾಮಗಳಿಗೆ ಹೋಗುವ ಏಕೈಕ ರಸ್ತೆಯ ದಯನೀಯ ಸ್ಥಿತಿಗೆ ಅರಣ್ಯ ಇಲಾಖೆಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಬರುವ ರಸ್ತೆಗೆ ಡಾಂಬರೀಕರಣ ಮಾಡಲು ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಅನ್ನ ಭಾಗ್ಯದ ಸದುಪಯೋಗ ಪಡೆಯುವ ಭರವಸೆಯನ್ನು ಹಲವು ಕುಟುಂಬಗಳು ಕೈಬಿಟ್ಟಿವೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಶೀಘ್ರವೇ ಸಭೆ ಕರೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಸ್ತೆ ಹದಗೆಟ್ಟಿರುವ ಕಾರಣ ಎಂ.ಎಂ.ಹಿಲ್ಸ್‌ನ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಆಹಾರಧಾನ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಎಸ್ ಡೀಲರ್ ಮಣಿ ತಿಳಿಸಿದ್ದಾರೆ. ಇದಲ್ಲದೆ,  ಸಾರಿಗೆ ಬಾಕಿಗಳನ್ನು ತೆರವುಗೊಳಿಸಲಾಗಿಲ್ಲ ಎಂದಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಮಾತನಾಡಿ, ಫಲಾನುಭವಿಗಳಿಗೆ ಧಾನ್ಯಗಳನ್ನು ಕೊಂಡೊಯ್ಯಲು ಪಿಡಿಎಸ್ ಪೂರೈಕೆದಾರರು ಬಾಡಿಗೆ ವಾಹನಗಳಿಗೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಆಹಾರ ನಿರೀಕ್ಷಕರಿಂದ ವರದಿ ಕೇಳಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com