ಮುಂಗಾರು ಮಳೆ: ಬೆಂಗಳೂರಿನಲ್ಲಿ ಜ್ವರದ ಲಸಿಕೆಗೆ ಬೇಡಿಕೆ ಹೆಚ್ಚಳ

ಆಷಾಢ ಮಾಸ...ಮುಂಗಾರು ಮಳೆ...ಹಲವು ವಾಹಕಗಳಿಂದ ಹರಡುವ ಮತ್ತು ನೀರಿನ ಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಜ್ವರದಿಂದ ಲಸಿಕೆಗಳನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಷಾಢ ಮಾಸ...ಮುಂಗಾರು ಮಳೆ...ಹಲವು ವಾಹಕಗಳಿಂದ ಹರಡುವ ಮತ್ತು ನೀರಿನ ಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಜ್ವರದಿಂದ ಲಸಿಕೆಗಳನ್ನು ತೆಗೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. 

ರಾಜ್ಯದಲ್ಲಿ ಮಾನ್ಸೂನ್ ಆಗಮನವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದ್ದು, ಟೈಫಾಯಿಡ್ ಮತ್ತು ಹೆಪಟೈಟಿಸ್ ಎ ಜೊತೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.

ಸಾಂಕ್ರಾಮಿಕ ರೋಗದ ನಂತರ ಜನರು ಹೆಚ್ಚು ಜಾಗರೂಕರಾಗಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ (ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್) ಡಾ ಪರಿಮಳಾ ವಿ ತಿರುಮಲೇಶ್ ಹೇಳುತ್ತಾರೆ.

ವ್ಯಕ್ತಿಗಳು ಮಾತ್ರವಲ್ಲ, ಇಡೀ ಕುಟುಂಬಗಳು ಇತ್ತೀಚೆಗೆ ಫ್ಲೂ ಲಸಿಕೆಗಳನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ಕಳೆದ ಒಂದು ವಾರದಲ್ಲಿ 25ರಿಂದ 30 ಮಂದಿ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ, ವೈದ್ಯರು ಹೆಚ್ಚಿನ ದಾಸ್ತಾನು ಇರಿಸಿಕೊಂಡಿದ್ದಾರೆ. 

ಹಿಂದೆ, ವೈದ್ಯರು ಜ್ವರದ ಲಸಿಕೆ ಪಡೆಯಲು ಹೆಚ್ಚಿನ ಅಪಾಯದ ರೋಗಿಗಳಿಗೆ ಮಾತ್ರ ಸಲಹೆ ನೀಡುತ್ತಿದ್ದರು, ಆದರೆ ಈಗ ಎಲ್ಲರೂ ಪ್ರತಿ ವರ್ಷ ಲಸಿಕೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ದಿನನಿತ್ಯದ ಲಸಿಕೆಗಳಿಗಿಂತ ಹೆಚ್ಚಾಗಿ ಜನರು ಫ್ಲೂ ಲಸಿಕೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಡಾ ಪರಿಮಳಾ ಹೇಳಿದರು. ಲಸಿಕೆ ಕೇವಲ ಶೇಕಡಾ 70ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದ್ದರೂ, ಇದು ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಗಂಭೀರ ಕಾಯಿಲೆಗಳನ್ನು ಉಂಟುಮಾಡುವುದಿಲ್ಲ. ಜನಸಂಖ್ಯೆಯಲ್ಲಿ ರೋಗಗಳನ್ನು ಹರಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು.

ಇನ್ನೂ 3 ತಿಂಗಳು ಎಚ್ಚರಿಕೆ ಅಗತ್ಯ: ಇನ್ನು ಎರಡು-ಮೂರು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ವೈದ್ಯರು ಕೂಡ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳಲ್ಲಿ ಪ್ರತಿದಿನ 20-30 ರೋಗಿಗಳು ಲಸಿಕೆ ಪಡೆಯುತ್ತಿದ್ದಾರೆ.

ಶಾಲೆಗಳ ಪುನರಾರಂಭವು ಬೇಡಿಕೆಯ ಹೆಚ್ಚಳಕ್ಕೆ ಮತ್ತೊಂದು ಅಂಶವಾಗಿದೆ ಎಂದು AASRA ಆಸ್ಪತ್ರೆಗಳ ಅಧ್ಯಕ್ಷ ಡಾ ಜಗದೀಶ್ ಹಿರೇಮಠ ವಿವರಿಸಿದರು, ಕಳೆದ ಎರಡು ವಾರಗಳಲ್ಲಿ ಫ್ಲೂ ಲಸಿಕೆಗಳ ಬೇಡಿಕೆಯಲ್ಲಿ ಶೇಕಡಾ 30ರಷ್ಟು ಹೆಚ್ಚಳವಾಗಿದೆ. ಲಸಿಕೆ ಸಹಾಯಕವಾಗಿದ್ದರೂ, ವೈದ್ಯರು ಆರೋಗ್ಯಕರ ಆಹಾರವನ್ನು ಸೇವಿಸಲು ಮತ್ತು ನೈಸರ್ಗಿಕ ಪ್ರತಿರಕ್ಷೆಯನ್ನು ತೆಗೆದುಕೊಳ್ಳುವುದನ್ನು ಒತ್ತಿಹೇಳುತ್ತಾರೆ. ಜನರು ಜಂಕ್ ಫುಡ್ ತಿನ್ನಲು ಒಡ್ಡಿಕೊಳ್ಳುತ್ತಾರೆ. ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಮತ್ತಷ್ಟು ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ. 

ನೆರೆಯ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯ ಆರೋಗ್ಯ ಇಲಾಖೆಯೂ ಸಹ ಪ್ರಕರಣಗಳ ಸಂಭವನೀಯ ಹೆಚ್ಚಳದ ಬಗ್ಗೆ ನಿಗಾ ಇರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com