ಕಳೆದ 10 ವರ್ಷಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ!

ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳು ಮತ್ತು ಟ್ಯಾಂಕ್‌ಗಳ ಪುನರುಜ್ಜೀವನ ಮತ್ತು ಮುಚ್ಚಿಹೋಗಿರುವ ನೀರಿನ ಕಾಲುವೆಗಳನ್ನು ತೆರವುಗೊಳಿಸಿರುವುದು ಗಣನೀಯ ಮಟ್ಟದಲ್ಲಿ ಸಹಾಯ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 10 ವರ್ಷಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳು ಮತ್ತು ಟ್ಯಾಂಕ್‌ಗಳ ಕೆಸರು, ಹೂಳು ತೆಗೆದು ಸ್ವಚ್ಛಗೊಳಿಸುವುದರಿಂದ ಮತ್ತು ಮುಚ್ಚಿಹೋಗಿರುವ ನೀರಿನ ಕಾಲುವೆಗಳನ್ನು ತೆರವುಗೊಳಿಸಿರುವುದು ಗಣನೀಯ ಮಟ್ಟದಲ್ಲಿ ಸಹಾಯ ಮಾಡಿದೆ. 

ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಇತ್ತೀಚಿನ ವರದಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ 201 ಸ್ಥಳಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. 2022ರವರೆಗೆ 233 ತಾಲ್ಲೂಕುಗಳಲ್ಲಿ 32 ವೀಕ್ಷಣಾ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ.

ಎರಡು ಇಲಾಖೆಗಳು ಆಯ್ದ ತಾಲ್ಲೂಕುಗಳಲ್ಲಿ 10 ವರ್ಷಗಳ ಅವಧಿಯಲ್ಲಿ ಸಂಗ್ರಹಿಸಿದ ಅಂಕಿಅಂಶವನ್ನು ಮೌಲ್ಯಮಾಪನ ಮಾಡಿದೆ. ಕೋಲಾರ, ಚನ್ನಪಟ್ಟಣ ಮತ್ತಿತರ ತಾಲೂಕುಗಳಲ್ಲಿ ಕೆರೆ, ಟ್ಯಾಂಕುಗಳ ಪುನರುಜ್ಜೀವನಗೊಳಿಸಿ ನೀರು ತುಂಬಿಸುವ ಕೆಲಸ ಹಾಗೂ ಜಲಾವೃತ ಪ್ರದೇಶಗಳಿಗೆ ನೀರು ಹರಿದು ಬರುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮುಚ್ಚಿಹೋಗಿರುವ ನೀರಿನ ಕಾಲುವೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಪ್ರಾಧಿಕಾರದ ನಿರ್ದೇಶಕ ರಾಮಚಂದ್ರಯ್ಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ತಿಳಿಸಿದ್ದಾರೆ. 

ಅಂತರ್ಜಲ ನೀರಿನ ಮಟ್ಟವನ್ನು(Groundwater level) ಹೆಚ್ಚಿಸುವ ಕಾರ್ಯದಲ್ಲಿ ರಾಜ್ಯ ಸರಕಾರ, ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಪರಿಸರ ಹೋರಾಟಗಾರರು ಕೈಜೋಡಿಸಿ ಕೆಲಸ ಮಾಡಿದ್ದಾರೆ. ಅಂತರ್ಜಲ ಮಟ್ಟವನ್ನು ಕೂಲಂಕಷವಾಗಿ ಅಧ್ಯಯನ ನಡೆಸಲಾಗುತ್ತಿದೆ.

ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 50.12 ಮೀಟರ್‌ಗಳಷ್ಟು ಅಂತರ್ಜಲ ಹೆಚ್ಚಿದೆ. ಇನ್ನು ಕಲಬುರಗಿ ಜಿಲ್ಲೆಯ ಚಿಂಚೋಳ್ಳಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಭಾರೀ ಕುಸಿತ ಕಂಡುಬಂದಿದೆ.. ಚಿಂಚೋಳ್ಳಿಯಲ್ಲಿ 7.42 ಮೀಟರ್ ಮಟ್ಟ ಕುಸಿದಿದೆ.

ಅವ್ಯಾಹತವಾಗಿ ಬೋರ್ ವೆಲ್ ಗಳ ಕೊರೆತ: ಚಿಕ್ಕಮಗಳೂರು ಜಿಲ್ಲೆಯ ಒಂಬತ್ತು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು 0.38 ರಿಂದ 11.20 ಮೀ ವರೆಗೆ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೌಲ್ಯಮಾಪನ ಮಾಡಲಾದ ಏಳು ತಾಲ್ಲೂಕುಗಳಲ್ಲಿ 0.32 ರಿಂದ 1.61 ಮೀ ಹೆಚ್ಚಳವಾಗಿದೆ. ತೀರ್ಥಹಳ್ಳಿಯಲ್ಲಿ 0.53ಮೀ, ಶಿವಮೊಗ್ಗದಲ್ಲಿ 0.30ಮೀ, ಸಾಗರದಲ್ಲಿ 0.79ಮೀಟರ್ ಇಳಿಕೆಯಾಗಿದೆ. ಪೂರ್ವ ಬೆಂಗಳೂರಿನಲ್ಲಿ 3.36 ಮೀಟರ್‌ ಕುಸಿದಿದ್ದರೆ, ಯಲಹಂಕದಲ್ಲಿ 14.38 ಮೀಟರ್‌ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ವಿಶೇಷವಾಗಿ ಬೂದು ಪ್ರದೇಶಗಳಲ್ಲಿ(Grey area) ಅಂತರ್ಜಲವನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಂತಹ ಸ್ಥಳಗಳ ಸಂಪೂರ್ಣ ಅಧ್ಯಯನದ ಅಗತ್ಯವಿದೆ. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಅಂತರ್ಜಲ ಮಂಡಳಿಗಳು ಅಂತರ್ಜಲ ಮಟ್ಟ ಮತ್ತು ರಾಜ್ಯದ ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟವನ್ನು ಸಾಮೂಹಿಕ ಅಧ್ಯಯನ ಮಾಡಲು ಯೋಜಿಸಿವೆ ಎಂದು ಅವರು ಹೇಳಿದರು.

ಅಂತರ್ಜಲವನ್ನು ಅತಿಯಾಗಿ ಕೊರೆಯುವುದನ್ನು ತಪ್ಪಿಸಲು ವೀಕ್ಷಣಾಲಯ ಬೋರ್‌ವೆಲ್‌ಗಳ(observatory borewells ) ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com