ಬೆಂಗಳೂರು: 2 ಸಾವಿರ ಕೋಟಿ ರು. ವೆಚ್ಚದ ಎರಡು ಕಾರಿಡಾರ್ ಕಾಮಗಾರಿ 2024 ಜನವರಿಯೊಳಗೆ ಪೂರ್ಣ!

ಹೊಸಕೋಟೆ-ಬೂದಿಗೆರೆ ಮತ್ತು  ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024 ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮೇಲ್ದರ್ಜೇಗೇರಿಸುತ್ತಿರುವ ಹೊಸಕೋಟೆ- ಬೂದಿಗೆರೆ ಕ್ರಾಸ್ ರಸ್ತೆ
ಮೇಲ್ದರ್ಜೇಗೇರಿಸುತ್ತಿರುವ ಹೊಸಕೋಟೆ- ಬೂದಿಗೆರೆ ಕ್ರಾಸ್ ರಸ್ತೆ

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) 2,095 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಹೊರವಲಯದಲ್ಲಿ ಆರು ರಸ್ತೆ ಮತ್ತು ನಾಲ್ಕು ಸೇತುವೆಗಳ  ರಸ್ತೆ ನವೀಕರಣ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024 ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಹೊಸಕೋಟೆ-ಬೂದಿಗೆರೆ ಕಾರಿಡಾರ್‌ನ ಒಟ್ಟು ಉದ್ದ 20.11 ಕಿ.ಮೀ. ಇದೆ, ನೆಲಮಂಗಲ-ಮಧುರೆ ಕಾರಿಡಾರ್ ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆಯನ್ನು ಸಹ ಹೊಂದಿದ್ದು, ಒಟ್ಟು 15.25 ಕಿಮೀ ಉದ್ದವನ್ನು ಹಾದು ಹೋಗುತ್ತದೆ. ಹೊಸಕೋಟೆ-ಬೂದಿಗೆರೆ ಕ್ರಾಸ್ ರಸ್ತೆಯನ್ನು ಕೆಆರ್‌ಡಿಸಿಎಲ್‌ ಮೇಲ್ದರ್ಜೆಗೇರಿಸುತ್ತಿದೆ.

2019 ರಲ್ಲಿ ಕಾಮಗಾರಿ  ಪ್ರಾರಂಭವಾಯಿತು, ಆದಾಗ್ಯೂ, ಭೂಸ್ವಾಧೀನ, ಮರ ಕತ್ತರಿಸುವಿಕೆಗೆ ಸಮಯ ತೆಗೆದುಕೊಂಡಿತು. ನಂತರ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಮುಂತಾದ ಕಾರಣದಿಂದಾಗಿ ಕಾಮಗಾರಿ ಮುಂದುವರಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೊಸಕೋಟೆ-ಬೂದಿಗೆರೆ ಕ್ರಾಸ್ (ಎನ್‌ಎಚ್-4) ಬೂದಿಗೆರೆ-ಸಿಂಗಹಳ್ಳಿ ಮತ್ತು ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಯೋಜನೆಗೆ ಅಂದಾಜು 137.51 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿ, ಬೆಂಗಳೂರು ಉತ್ತರದಲ್ಲಿ, ಚಿಕ್ಕಮಧುರೆ ಮೂಲಕ ಎನ್ ಎಚ್ 4 ನಲ್ಲಿ ನೆಲಮಂಗಲದಿಂದ ರಾಜ್ಯ ಹೆದ್ದಾರಿ-74 ರಲ್ಲಿ ಮಧುರೆಗೆ ಸಂಪರ್ಕಿಸಲು 15.25 ಕಿಮೀ ರಸ್ತೆಯನ್ನು 155.69 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ರಸ್ತೆ ವಿಸ್ತರಣೆಯಿಂದಾಗಿ ವಾರಾಂತ್ಯದಲ್ಲಿ ಟ್ರಾಫಿಕ್ ಪ್ರಮಾಣವು ಹೆಚ್ಚಾಗುತ್ತಿದೆ, ಅನೇಕ ನಿವಾಸಿಗಳು ವಾರಾಂತ್ಯದಲ್ಲಿ ಮನೆಯಿಂದ ಹೊರಗೆ ಪ್ರಯಾಣಿಸುತ್ತಾರೆ ಹೀಗಾಗಿ ಸಂಚಾರ ದಟ್ಟಣೆ ಹೆಚ್ಚುತ್ತದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. . ಈ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಜನವರಿಯೊಳಗೆ ನಾವು ಈ ಎರಡು ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ" ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com