ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರಿಕೆ: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಆತಂಕ!

ಅನ್ನ ಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರು ಕಾಯುತ್ತಿದ್ದರು, ಅಕ್ಕಿ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಬದಲಿಗೆ ನಗದು ನೀಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿ ಪಡೆಯಲು ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರು ಕಾಯುತ್ತಿದ್ದರು, ಅಕ್ಕಿ ಸಿಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಬದಲಿಗೆ ನಗದು ನೀಡುತ್ತಿದೆ.

ತಲಾ 10 ಕೆಜಿ ಅಕ್ಕ ಒದಗಿಸಲು ಸರ್ಕಾರವು ವಿಭಿನ್ನ ಮೂಲಗಳನ್ನು ಹುಡುಕುತ್ತಿದೆ. ಈ ನಡುವೆ ಅಕ್ಕಿಯ ಜಾಗತಿಕ ಬೆಲೆ ಏರಿಕೆಯ ಹೊಸ ಸಮಸ್ಯೆಯನ್ನು ತರುತ್ತಿದೆ.  ಭಾರತದ ರಫ್ತು ನೀತಿಯಲ್ಲಿ ಬದಲಾವಣೆ ಮಾಡಿದ್ದು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಅಕ್ಕಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಬೆಲೆಗೆ ಕಡಿವಾಣ ಹಾಕಲು ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯವು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಿ ಗುರುವಾರ ಆದೇಶವನ್ನು ಹೊರಡಿಸಿದೆ.

ಸದ್ಯದ ಪರಿಸ್ಥಿತಿಂದಾ ಹೆಚ್ಚುವರಿ 5 ಕೆಜಿ ಉಚಿತ ಅಕ್ಕಿಗೆ ನಗದು ವರ್ಗಾವಣೆಗೆ ಕರ್ನಾಟಕದ ನಿರ್ಧಾರ ಸೂಕ್ತವಾಗಿದೆ. ಫಲಾನುಭವಿಗಳು ಈಗಾಗಲೇ ಕೇಂದ್ರ ಸರ್ಕಾರದ ಕಾರ್ಯಕ್ರಮದ ಮೂಲಕ 5 ಕೆಜಿ ಪಡೆಯುವುದರಿಂದ, ಫಲಾನುಭವಿಗಳಿಗೆ ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಸ್ವಾತಂತ್ರ್ಯವನ್ನು ನೀಡುವುದರಿಂದ ನಗದು ವರ್ಗಾವಣೆಯನ್ನು ಮುಂದುವರಿಸುವುದು ಸೂಕ್ತವಾಗಿದೆ ಎಂದು  ಭಾರತೀಯ ಆಹಾರ ನಿಗಮದ ಮಾಜಿ ಅಧ್ಯಕ್ಷ ಡಿವಿ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಬೆಳವಣಿಗೆಗಳಿಂದ ನಾವು ವಿಚಲಿತರಾಗಿಲ್ಲ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ. ನಾನು ಎಲ್ಲ ಪಾಲುದಾರರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದೇನೆ. ಸೆಪ್ಟೆಂಬರ್ ವೇಳೆಗೆ, ನಾವು ನಗದು ವಿತರಣೆಯನ್ನು ನಿಲ್ಲಿಸಿ, ಮೂಲತಃ ಯೋಜಿಸಿದಂತೆ ಅಕ್ಕಿ ವಿತರಿಸಲು ಸಾಧ್ಯವಾಗುತ್ತದೆ.

ಅಕ್ಕಿಯ ಬದಲಿಗೆ, ನಾವು ರಾಜ್ಯದ ದಕ್ಷಿಣ ಭಾಗಗಳಲ್ಲಿ ರಾಗಿ ಮತ್ತು ಉತ್ತರ ಪ್ರದೇಶಗಳಲ್ಲಿ ಜೋಳ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮುನಿಯಪ್ಪ ಹೇಳಿದರು. ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು  ಸೆಪ್ಟೆಂಬರ್‌ ವೇಳೆಗೆ ರಾಜ್ಯ ಸರ್ಕಾರ ಹೇಗೆ ಅಕ್ಕಿ ಪೂರೈಕೆ ಮಾಡುತ್ತದೆ ಎಂದು ನನಗೆ ಆಶ್ಚರ್ಯವಾಗಿದೆ ಎಂದು ಡಿವಿ ಪ್ರಸಾದ್ ಪ್ರಶ್ನಿಸಿದ್ದಾರೆ.

ಅಕ್ಟೋಬರ್-ನವೆಂಬರ್ ವೇಳೆಗೆ ತಾಜಾ ಖಾರಿಫ್ ಅಕ್ಕಿ ಬೆಳೆ ಬರಲಿದ್ದು, ಆಗ ಮಾತ್ರ ರಾಜ್ಯ ಸರ್ಕಾರ ಸರಬರಾಜನ್ನು ಪೂರೈಸಬಹುದು, ಉಚಿತ ಅಕ್ಕಿಯ ಬೆಲೆ ಇನ್ನು ಮುಂದೆ 34 ರೂಪಾಯಿ ಇರುವುದಿಲ್ಲ, ಮುಂದಿನ ಕೆಲವು ತಿಂಗಳುಗಳಲ್ಲಿ ಈ ಅಕ್ಕಿಯ ಬೆಲೆ 42-44 ರೂಪಾಯಿಗಳಿಗೆ ಏರಬಹುದು ಎಂದು ಆಹಾರ ತಜ್ಞರು ಹೇಳಿದ್ದಾರೆ, ಇದು ರಾಜ್ಯದ ಬೊಕ್ಕಸಕ್ಕೆ ಹೊರೆ ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com