ಅನ್ನಭಾಗ್ಯ ಯೋಜನೆ: ಸದನದಲ್ಲಿ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಉಲ್ಲೇಖಿಸಿದ ಎಚ್.ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವ ನಿರ್ಧಾರವನ್ನು ಸ್ವಾಗತಿಸಿದರು.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಸರ್ಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವ ನಿರ್ಧಾರವನ್ನು ಸ್ವಾಗತಿಸಿದರು.

ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಬದಲಿಗೆ ನಗದು ನೀಡುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ನು ಎಚ್‌ಡಿ ಕುಮಾರಸ್ವಾಮಿ ಬುಧವಾರ ವಿಧಾನಸಭೆಯಲ್ಲಿ ಉಲ್ಲೇಖಿಸಿದ್ದಾರೆ. ನಗದು ವರ್ಗಾವಣೆ ಮಾಡಲು ಫಲಾನುಭವಿಗಳ ಬ್ಯಾಂಕ್ ಖಾತೆ ವಿವರಗಳನ್ನು ಹೇಗೆ ಪಡೆಯುತ್ತೀರಿ ಎಂದು ಅವರು ಸರ್ಕಾರವನ್ನು ಕೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಅವರು ಜೂನ್ 30 ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸಂಪೂರ್ಣ ಲೇಖನವನ್ನು ಓದಿದರು, “ಬಿಪಿಎಲ್ ಕಾರ್ಡ್‌ಗಳಲ್ಲಿ ಬ್ಯಾಂಕ್ ವಿವರಗಳಿಲ್ಲ, ಹೀಗಾಗಿ ಕರ್ನಾಟಕ ಸರ್ಕಾರಕ್ಕೆ ಹಣ ಜಮಾವಣೆ ಮಾಡಲು ಕಷ್ಟವಾಗುತ್ತದೆ. ನಾನು  ಈ ಯೋಜನೆಗೆ ವಿರೋಧಿಯಲ್ಲ, ಆದರೆ ಪಡಿತರ ಚೀಟಿಯಲ್ಲಿ ಯಾವುದೇ ಬ್ಯಾಂಕ್ ವಿವರಗಳಿಲ್ಲದಿದ್ದರೂ ಸರ್ಕಾರವು ನೇರ ವರ್ಗಾವಣೆಯ ಮೂಲಕ ಹಣವನ್ನು ಹೇಗೆ ಕಳುಹಿಸುತ್ತದೆ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, 1.28 ಕೋಟಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳಿದ್ದು, 4.42 ಕೋಟಿ ಫಲಾನುಭವಿಗಳಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಅವರಿಗೆ ಹಣ ಕಳುಹಿಸುತ್ತೇವೆ ಎಂದರು.

ಅನ್ನ ಭಾಗ್ಯದಲ್ಲಿ ಘೋಷಿಸಿರುವ 5 ಕೆಜಿ ಹೆಚ್ಚುವರಿ ಅಕ್ಕಿ ಬದಲು ಧಾನ್ಯ, ಎಣ್ಣೆ, ಸಕ್ಕರೆ ನೀಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಸರಕಾರವನ್ನು ಒತ್ತಾಯಿಸಿದರು. ರಾಜ್ಯ ಸರಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಬದಲು 170 ರೂ.ನಗದು ನೀಡುತ್ತಿದೆ. ಆದರೆ ಈ ಹಣವನ್ನು ಕುಟುಂಬವು ಅಕ್ಕಿ ಅಥವಾ ಧಾನ್ಯಗಳನ್ನು ಖರೀದಿಸಲು ಹಣವನ್ನು ಬಳಸಿದರೆ, ನನಗೆ ಯಾವುದೇ ಸಮಸ್ಯೆಗಳಿಲ್ಲ. ಮುಂಜಾನೆಯೇ ಮದ್ಯದಂಗಡಿಗಳು ತೆರೆದಿರುವುದರಿಂದ ಜನರು ಅದರಲ್ಲೂ ಕಾರ್ಮಿಕ ವರ್ಗದ ಜನರು ಅಲ್ಲಿಯೇ ನಿಂತಿರುತ್ತಾರೆ. ಈ ಹಣವನ್ನು ಮದ್ಯ ಖರೀದಿಗೆ ದುರುಪಯೋಗಪಡಿಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com