ಜಿಟಿಜಿಟಿ ಮಳೆ ನಡುವೆಯೇ ಬೆಂಗಳೂರಿನ ಆಗಸದಲ್ಲಿ 'ನಿಗೂಢ' ಪತ್ತೆ; ಸ್ವರ್ಗದ ಬಾಗಿಲು ಎಂದ ನೆಟ್ಟಿಗರು, ವಿಡಿಯೋ ವೈರಲ್

ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೇ ಸಿಲಿಕಾನ್ ಸಿಟಿಯ ಆಗಸದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದ್ದು, ಆಗಸದಲ್ಲಿ 'ನಿಗೂಢ ಬಾಗಿಲು' (Mysterious Shadow In Bengaluru) ಪತ್ತೆಯಾಗುವ ಮೂಲಕ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಕಾಣಿಸಿಕೊಂಡ ನಿಗೂಢ ಬಾಗಿಲು
ಬೆಂಗಳೂರಿನಲ್ಲಿ ಕಾಣಿಸಿಕೊಂಡ ನಿಗೂಢ ಬಾಗಿಲು

ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೇ ಸಿಲಿಕಾನ್ ಸಿಟಿಯ ಆಗಸದಲ್ಲಿ ಪ್ರಕೃತಿ ವಿಸ್ಮಯವೊಂದು ನಡೆದಿದ್ದು, ಆಗಸದಲ್ಲಿ 'ನಿಗೂಢ ಬಾಗಿಲು' (Mysterious Shadow In Bengaluru) ಪತ್ತೆಯಾಗುವ ಮೂಲಕ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಹೌದು.. ಟ್ವಿಟರ್​ ಬಳಕೆದಾರರೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ವಿಡಿಯೋದಲ್ಲಿ ಮಳೆಯ ನಡುವೆ ಸೂರ್ಯನ ಕಿರಣಗಳು ಮತ್ತು ಮೋಡಗಳ ಚಲನೆಯಿಂದಾಗಿ ಬಾಗಿಲಿನ ಆಕಾರದ ಆಕೃತಿ ರಚನೆಯಾಗಿದ್ದು ಇದು ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ನಿನ್ನೆ(ಜುಲೈ 24) ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದ್ದು ಟ್ವಿಟರ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಟ್ವಿಟರ್​ ಬಳಕೆದಾರರೊಬ್ಬರು ಆಕಾಶದಲ್ಲಿ ಬಾಗಿಲಿನಂತೆ ಕಾಣುವ ನಿಗೂಢ ಹೊಳೆಯುವ ಚಿತ್ರದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆನೇಕರು ಇದು ಸ್ವರ್ಗದ ಬಾಗಿಲು ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಅಚ್ಚರಿ ಹೊರ ಹಾಕಿದ್ದಾರೆ.

ವಸೀಮ್ ಎಂಬ ಟ್ವಿಟರ್​ ಬಳಕೆದಾರರೊಬ್ಬರು ವಿಡಿಯೋವನ್ನು ಟ್ವೀಟ್ ಮಾಡಿದ್ದು 'ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ನಿನ್ನೆ ರಾತ್ರಿ ಆಕಾಶದಲ್ಲಿ ನಿಗೂಢ ನೆರಳು ಕಾಣಿಸಿಕೊಂಡಿದೆ. ಬೇರೆ ಯಾರಾದರೂ ನೋಡಿದ್ದೀರಾ? ಇದು ಏನಾಗಿರಬಹುದು? ಕಟ್ಟಡದ ನೆರಳಾ? ಹಾಗಿದ್ದಲ್ಲಿ, ಇದರ ಹಿಂದಿನ ವಿಜ್ಞಾನ ಏನಿರಬಹುದು? ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಟ್ವಿಟರ್​ನಲ್ಲಿ ಚರ್ಚೆಗೆ ಕಾರಣವಾಗಿದ್ದು ಜನರು ಆಶ್ಚರ್ಯ ಪಡುವಂತೆ ಮಾಡಿದೆ. ಕೇವಲರು ಇದು ಯಾವುದೋ ಎತ್ತರದ ಕಟ್ಟಡದ ಲೈಟ್​ನ ನೆರಳಿರಬಹುದು ಎಂದು ಊಹಿಸಿದರೆ ಇನ್ನೂ ಕೆಲವರು ಇದನ್ನು 'ಬ್ರೋಕನ್ ಸ್ಪೆಕ್ಟರ್' ಎಂದು ಊಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com