ಅಧಿಕಾರಿಗಳ ವಿರುದ್ಧದ ಖಾಸಗಿ ದೂರುಗಳನ್ನು ಪೂರ್ವಾನುಮತಿ ಇಲ್ಲದೆ ತನಿಖೆಗೆ ಪರಿಗಣಿಸುವುದು ಬೇಡ: ಹೈ ಕೋರ್ಟ್

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದ ಅಥವಾ ಅನುಮೋದನೆ ಹೊಂದಿರದಿದ್ದಲ್ಲಿ, ಸಾರ್ವಜನಿಕ ಅಧಿಕಾರಿಗಳ ವಿರುದ್ಧದ ಖಾಸಗಿ ದೂರುಗಳನ್ನು ತನಿಖೆಗೆ ಪರಿಗಣಿಸದಂತೆ ಮ್ಯಾಜಿಸ್ಟ್ರೇಟ್‌ಗಳು, ಸೆಷನ್ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದ ಅಥವಾ ಅನುಮೋದನೆ ಹೊಂದಿರದಿದ್ದಲ್ಲಿ, ಸಾರ್ವಜನಿಕ ಅಧಿಕಾರಿಗಳ ವಿರುದ್ಧದ ಖಾಸಗಿ ದೂರುಗಳನ್ನು ತನಿಖೆಗೆ ಪರಿಗಣಿಸದಂತೆ ಮ್ಯಾಜಿಸ್ಟ್ರೇಟ್‌ಗಳು, ಸೆಷನ್ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದೆಯೇ ಚಿಕ್ಕಬಳ್ಳಾಪುರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಅಶೋಕ್ ವಿ ವಿರುದ್ಧ ಆರ್‌ಟಿಐ ಕಾರ್ಯಕರ್ತ ಸೈಯದ್ ಮಲಿಕ್ ಪಾಷಾ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದ ಮೇಲೆ ಐಪಿಸಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರಂಭಿಸಿದ್ದ ಮೊಕದ್ದಮೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ. 

ದೂರುದಾರರು ಈ ಪ್ರಕರಣದ ಮೂಲಕ ಕಾನೂನಿನ ದುರ್ಬಳಕೆ ಅಥವಾ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಬಣ್ಣಿಸಿದ ನ್ಯಾಯಾಲಯ, ಈ ಅಭ್ಯಾಸವನ್ನು ಈಗ ಅನುಮತಿಸಿದರೆ, ಅದು ಮುಂದೆ ಇಂತಹ ಹಲವಾರು ದಾವೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿತು.

ದೂರುದಾರರು ಕರ್ನಾಟಕ ಲೋಕಾಯುಕ್ತದಂತಹ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸದೆಯೇ ಮ್ಯಾಜಿಸ್ಟ್ರೇಟ್ ಅಥವಾ ಸೆಷನ್ಸ್ ನ್ಯಾಯಾಧೀಶರ ಬಾಗಿಲು ತಟ್ಟಲು ಆಯ್ಕೆ ಮಾಡಿಕೊಳ್ಳುವ ಮೂಲಕ ಖಾಸಗಿ ದೂರುಗಳಿಗೆ ಆದ್ಯತೆ ನೀಡುವ ಹಲವಾರು ಪ್ರಕರಣಗಳನ್ನು ಕಂಡಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಾಧೀಶರು ಸಿಆರ್‌ಪಿಸಿಯ ಸೆಕ್ಷನ್ 156(3) ರ ಅಡಿಯಲ್ಲಿ ಈ ವಿಷಯವನ್ನು ತನಿಖೆಗೆ ಉಲ್ಲೇಖಿಸುತ್ತಾರೆ. ಆಗ ಪೊಲೀಸರು ಅಥವಾ ಲೋಕಾಯುಕ್ತರು ಅಪರಾಧವನ್ನು ದಾಖಲಿಸಲೇ ಬೇಕಿರುತ್ತದೆ. 2018ರಲ್ಲಿ ಸಂಸತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸೆಕ್ಷನ್ 17A ಅನ್ನು ಪರಿಚಯಿಸಿದ್ದು, ಸಾರ್ವಜನಿಕ ಅಧಿಕಾರಿಗಳ ವಿರುದ್ಧದ ಆಧಾರರಹಿತ ಅಥವಾ ದುರುದ್ದೇಶಪೂರಿತ ಕಾನೂನು ಕ್ರಮದ ವಿರುದ್ಧ ರಕ್ಷಣಾತ್ಮಕ ಫಿಲ್ಟರ್ ಆಗಿರಲು ಉದ್ದೇಶಿಸಿದೆ. ಆದಾಗ್ಯೂ, ಸೆಕ್ಷನ್ 17A ಅಡಿಯಲ್ಲಿ ಅಗತ್ಯ ಪೂರ್ವಾನುಮತಿ ಇಲ್ಲದೆ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಖಾಸಗಿ ದೂರುಗಳನ್ನು ಸ್ವೀಕರಿಸಿದಾಗ, ಈ ಸೆಕ್ಷನ್ ತನ್ನ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಮ್ಯಾಜಿಸ್ಟ್ರೇಟ್‌ಗಳು/ನ್ಯಾಯಾಧೀಶರಿಗೆ ಹೈಕೋರ್ಟ್ ಪರಿಶೀಲನಾಪಟ್ಟಿ

* ದೂರುದಾರರು ತಾವು ಲೋಕಾಯುಕ್ತ ಪೊಲೀಸರ ಮುಂದೆ ದೂರು ದಾಖಲಿಸಲು ಪ್ರಯತ್ನಿಸಿದ್ದು, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾಸಗಿ ದೂರಿನಲ್ಲಿ ಪೂರಕ ದಾಖಲೆಗಳೊಂದಿಗೆ ವಿವರಿಸಿರಬೇಕು.

* ಖಾಸಗಿ ದೂರುಗಳನ್ನು ಸಲ್ಲಿಸುವಾಗ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ಅದನ್ನು ಲಗತ್ತಿಸಿರಬೇಕು

* ಆಪಾದಿತ ಅಪರಾಧಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹವಾಗಿದ್ದರೆ ಅಥವಾ ಆಪಾದನೆಯು ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿನ ಅಪರಾಧಗಳ ಸಂಯೋಜನೆಯಾಗಿದ್ದರೆ ಮಾತ್ರ ಎರಡನೇ ನಿರ್ದೇಶನವು ಅನ್ವಯಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com