ಬೆಂಗಳೂರು: ಕೆಆರ್ ಪುರ-ಬೈಯಪ್ಪನಹಳ್ಳಿ ನಡುವೆ ಮೊದಲ ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ

ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ನಿನ್ನೆ ಬುಧವಾರ ಸಂಜೆ ಯಶಸ್ವಿಯಾಗಿ ನಡೆಯಿತು. ನಿರಂತರ ಮಳೆಯಿಂದಾಗಿ ತಡವಾಗಿ ಆರಂಭವಾದ ಪ್ರಾಯೋಗಿಕ ಸಂಚಾರ ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಸಂಜೆ 6.04 ಕ್ಕೆ ರೈಲು ಹೊರಟಿತು.
ಕೆ ಆರ್ ಪುರ-ಬೈಯಪ್ಪನಹಳ್ಳಿ ಮಧ್ಯೆ ಪ್ರಾಯೋಗಿಕ ಮೆಟ್ರೊ ಸಂಚಾರ
ಕೆ ಆರ್ ಪುರ-ಬೈಯಪ್ಪನಹಳ್ಳಿ ಮಧ್ಯೆ ಪ್ರಾಯೋಗಿಕ ಮೆಟ್ರೊ ಸಂಚಾರ

ಬೆಂಗಳೂರು: ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದ ಮೊದಲ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ನಿನ್ನೆ ಬುಧವಾರ ಸಂಜೆ ಯಶಸ್ವಿಯಾಗಿ ನಡೆಯಿತು. ನಿರಂತರ ಮಳೆಯಿಂದಾಗಿ ತಡವಾಗಿ ಆರಂಭವಾದ ಪ್ರಾಯೋಗಿಕ ಸಂಚಾರ ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಸಂಜೆ 6.04 ಕ್ಕೆ ರೈಲು ಹೊರಟಿತು.

ಬೈಯಪ್ಪನಹಳ್ಳಿ ಕಡೆಗೆ ನಿಧಾನವಾಗಿ ಮುಂದಕ್ಕೆ ಸಾಗಿ ತಪಾಸಣೆಗಾಗಿ ಕೆಲವು ಸ್ಥಳಗಳಲ್ಲಿ ನಿಲ್ಲಿಸಲಾಗಿತ್ತು. 2.5 ಕಿಲೋ ಮೀಟರ್ ದೂರವನ್ನು 47 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಲಿಂಗ್ ಸ್ಟಾಕ್, ಟ್ರಾಕ್ಷನ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಷನ್ಸ್ ಮತ್ತು ಟ್ರ್ಯಾಕ್ ತಂಡದಿಂದ ಮೆಟ್ರೋ ಸಿಬ್ಬಂದಿಯನ್ನು ಒಳಗೊಂಡಿರುವ 12 ಜನರೊಂದಿಗೆ ಲೊಕೊ ಪೈಲಟ್ ಪಿ ಜಗದೀಸನ್ ರೈಲನ್ನು ಸಂಚರಿಸಿದರು. 

ಜ್ಯೋತಿಪುರ ಮೆಟ್ರೋ ನಿಲ್ದಾಣದಲ್ಲಿ ಸಂಜೆ 4 ಗಂಟೆಗೆ ಮೊದಲ ಪ್ರಾಯೋಗಿಕ ಸಂಚಾರ ಪ್ರಾರಂಭಿಸಬೇಕಿತ್ತು, ಆದರೆ ನಿರಂತರ ಮಳೆಯಿಂದಾಗಿ ಯೋಜನೆಯನ್ನು ಬದಲಾಯಿಸಲಾಯಿತು. ಮಳೆಯಿಂದಾಗಿ ಜ್ಯೋತಿಪುರದಲ್ಲಿ ಹಳಿಗಳ ಮೇಲಿನ ಅವಶೇಷಗಳನ್ನು ತೆಗೆದುಹಾಕಲು ನಮಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆರಂಭದ ಸ್ಥಳವನ್ನು ಕೆ.ಆರ್.ಪುರಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದರು.

ರೈಲು ಅತ್ಯಂತ ನಿಧಾನಗತಿಯ ವೇಗದಲ್ಲಿ ಪ್ರಾರಂಭವಾಯಿತು. ಗರಿಷ್ಠ 15 ಕಿ.ಮೀ. ಮಾರ್ಗಮಧ್ಯದ ಎರಡು ಉಕ್ಕಿನ ಸೇತುವೆಗಳು ಹಾಗೂ ಜ್ಯೋತಿಪುರ ಮೆಟ್ರೋ ನಿಲ್ದಾಣದ ಕೆಳಗೆ ಕೆಲಕಾಲ ನಿಂತಿತ್ತು. ಟ್ರ್ಯಾಕ್‌ಗಳ ಉದ್ದಕ್ಕೂ ಇರುವ ಅಡಚಣೆಗಳಿಗಾಗಿ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿತ್ತು. ಇದು ನಿರ್ಮಾಣ ಅವಶೇಷಗಳು ಮತ್ತು ಸಣ್ಣ ತಂತಿಗಳನ್ನು ಸಹ ಒಳಗೊಂಡಿದೆ ಎಂದು ವಿವರಿಸಿದರು. 

ರೈಲು ಓಡಾಟ ಮುಗಿದ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗಿದೆ. ಬೈಯಪ್ಪನಹಳ್ಳಿಯಿಂದ ಹಿಂದಿರುಗುವ ವೇಳೆ ಮಳೆಯಿಂದಾಗಿ ಸ್ಪಷ್ಟ ಗೋಚಾರವಾಗದಿದ್ದ ಕಾರಣ ಸ್ಥಗಿತಗೊಂಡಿತ್ತು. ಹೀಗಾಗಿ ಸಂಪೂರ್ಣವಾಗಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.

ಇಂದು ಬೆಳಗ್ಗೆ 9.30ಕ್ಕೆ ಬೈಯಪ್ಪನಹಳ್ಳಿಯಿಂದ ಪೂರ್ಣ ಪ್ರಮಾಣದ ಪರೀಕ್ಷೆ ಆರಂಭವಾಗಲಿದೆ. ಸಿವಿಲ್ ಇಂಟರ್ ಫೇಸ್ ಪರೀಕ್ಷೆಗಳನ್ನು ಇಂದು ನಡೆಸಲಾಗುತ್ತದೆ. ಸಿಗ್ನಲಿಂಗ್ ಪರೀಕ್ಷೆಗಳು ಸುಮಾರು ಒಂದು ತಿಂಗಳ ಕಾಲ ನಡೆಯಲಿವೆ ಎಂದರು.

ವಿಸ್ತರಣೆಯನ್ನು ಆಗಸ್ಟ್ ಅಂತ್ಯದ ವೇಳೆಗೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ವೈಟ್ ಫೀಲ್ಡ್ ನಿಂದ ಕೆಆರ್ ಪುರ ಮಾರ್ಗಕ್ಕೆ ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಆದರೆ, ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ ಸಂಪರ್ಕ ತಪ್ಪಿ, ಸಂಪೂರ್ಣ ಮೆಟ್ರೊ ಜಾಲಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕವನ್ನು ಪ್ರಯಾಣಿಕರು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com