ಮೈಸೂರು: 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಬಳಿಕ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಮತ್ತು ಕತ್ತವಾಡಿ ಗ್ರಾಮಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗೆ ತೆರಳುವ ಮಕ್ಕಳಿಗೆ ಭದ್ರತೆ ಒದಗಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಂದಾಗಿದ್ದಾರೆ.
ಕಳೆದೆರಡು ದಿನಗಳಿಂದ ಕಲ್ಲೇಗುಂದ ಹಾಗೂ ಮಲ್ಲಿಗೆಹಳ್ಳಿಯಲ್ಲಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಿತ್ತು. ಶಾಲೆಗೆ ಹೋಗಿ ವಾಪಾಸಾಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ರಕ್ಷಣೆ ನೀಡಲು ಅರಣ್ಯ ಸಿಬ್ಬಂದಿ ನಿರ್ಧರಿಸಿದ್ದಾರೆ.
ಮಲ್ಲಿಗೆಹಳ್ಳಿಯಲ್ಲಿ 105 ಮತ್ತು ಕಟ್ಟೆವಾಡಿಯಲ್ಲಿ 50, ಕೆ.ಹೊಸೂರಿನಲ್ಲಿ 27 ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಚಿರತೆ ದಾಳಿಗೆ ಹೆದರಿರುವ ವಿದ್ಯಾರ್ಥಿಗಲು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಭಯ ನೀಡಿ, ಮಕ್ಕಳು ಶಾಲೆಗೆ ತೆರಳುವಂತೆ ಮಾಡಲು ಅರಣ್ಯ ಸಿಬ್ಬಂದಿಗಳು ರಕ್ಷಣೆ ನೀಡಲು ಮುಂದಾಗಿದ್ದಾರೆ.
ಆರ್‌ಎಫ್‌ಒ ಲೋಕೇಶ್ ಮೂರ್ತಿ ಅವರು, ಗ್ರಾಮಗಳಿಗೆ ಭೇಟಿ ನೀಡಿದ್ದು, ತ್ಯಾಜ್ಯಗಳನ್ನು ಮನೆಗಳ ಮುಂದೆ ಸುತ್ತಮುತ್ತ ಎಸೆಯದಂತೆ ಹಾಗೂ ಜಾನುವಾರುಗಳ ಸುರಕ್ಷತೆಯ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಚಿರತೆ ಕಾಣಿಸಿಕೊಂಡರೆ ಫೋಟೋ, ವಿಡಿಯೋಗಳ ತೆಗೆಯದಂತೆಯೂ ಮನವಿ ಮಾಡಿಕೊಂಡಿದ್ದಾರೆ.
Advertisement