ಶಕ್ತಿ ಯೋಜನೆ; ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಟಿಕೆಟ್ ಮೌಲ್ಯ ಪಾವತಿಗೆ ಸರ್ಕಾರ ನಿರ್ಧಾರ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಪ್ರಾರಂಭವಾದ ಸುಮಾರು ಎರಡು ತಿಂಗಳ ನಂತರ, ರಾಜ್ಯ ಸರ್ಕಾರವು ಕೆಎಸ್ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಯೋಜನೆಯ ಟಿಕೆಟ್ ಮೌಲ್ಯವನ್ನು ಮರುಪಾವತಿಸಲು ನಿರ್ಧರಿಸಿದೆ. 
ಕೆಎಸ್ಆರ್‌ಟಿಸಿ ಬಸ್‌ಗಳು
ಕೆಎಸ್ಆರ್‌ಟಿಸಿ ಬಸ್‌ಗಳು
Updated on

ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಪ್ರಾರಂಭವಾದ ಸುಮಾರು ಎರಡು ತಿಂಗಳ ನಂತರ, ರಾಜ್ಯ ಸರ್ಕಾರವು ಕೆಎಸ್ಆರ್‌ಟಿಸಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ), ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು ಬಿಎಂಟಿಸಿ ನಿಗಮಗಳಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಯೋಜನೆಯ ಟಿಕೆಟ್ ಮೌಲ್ಯವನ್ನು ಮರುಪಾವತಿಸಲು ನಿರ್ಧರಿಸಿದೆ. 

ಕೆಎಸ್ಆರ್‌ಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ಜೂನ್‌ ತಿಂಗಳ 248.30 ಕೋಟಿ ರೂ.ಗಳನ್ನು ಆಗಸ್ಟ್ ಮೊದಲ ವಾರದಲ್ಲಿ ಪಡೆಯಲಿದ್ದಾರೆ ಮತ್ತು ಜುಲೈ ತಿಂಗಳ ಮೊತ್ತವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದರು. 

ಶಕ್ತಿ ಯೋಜನೆ ಪ್ರಾರಂಭವಾದ ನಂತರ ನಾಲ್ಕು ಬಸ್ ನಿಗಮಗಳ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ. ಈ ಹಿಂದೆ ದಿನಕ್ಕೆ ಸುಮಾರು 84 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಪ್ರಾರಂಭವಾದ ನಂತರ ಇದು ಒಂದು ಕೋಟಿ ದಾಟಿದೆ. ಮಹಿಳಾ ಪ್ರಯಾಣಿಕರು ಮಾತ್ರವಲ್ಲದೆ, ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯೂ ಹೆಚ್ಚಾಗಿದೆ.

ರಾಜ್ಯ ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ 2,800 ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದರೂ, ಈವರೆಗೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ್ದ ಮಹಿಳೆಯರ ಟಿಕೆಟ್ ಮೌಲ್ಯವನ್ನು ಬಸ್ ನಿಗಮಗಳಿಗೆ ಮರುಪಾವತಿ ಮಾಡಿರಲಿಲ್ಲ. 

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಸ್ ನಿಗಮಗಳನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳುವುದಿಲ್ಲ ಮತ್ತು ಮಹಿಳೆಯರಿಗೆ ನೀಡಲಾದ ಶೂನ್ಯ ಟಿಕೆಟ್‌ನಿಂದ ಉತ್ಪತ್ತಿಯಾಗುವ ಒಟ್ಟು ಟಿಕೆಟ್ ಮೌಲ್ಯದ ಆಧಾರದ ಮೇಲೆ ನಿಗಮಗಳಿಗೆ ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.

'ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ ಸರ್ಕಾರ 2,800 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಈ ಯೋಜನೆಯು ಜೂನ್ 11 ರಂದು ಪ್ರಾರಂಭವಾಗಿರುವುದರಿಂದ, ಈ ಆರ್ಥಿಕ ವರ್ಷದ ಅಂತ್ಯದವರೆಗೆ ಈ ಮೊತ್ತವು ಸಾಕಾಗುತ್ತದೆ ಎಂದು ನಾವು ಭಾವಿಸುತ್ತೇವೆ' ಎಂದು ಅಧಿಕಾರಿ ಹೇಳಿದರು.

ಬಸ್ ನಿಗಮಗಳು ಹಣದ ಕೊರತೆಯನ್ನು ಎದುರಿಸುತ್ತಿರುವುದರಿಂದ ಮುಂಗಡವಾಗಿ ಮೊತ್ತವನ್ನು ಪಡೆಯಲು ಬಯಸುತ್ತೀರಾ ಎಂದು ಅಧಿಕಾರಿಯನ್ನು ಕೇಳಿದಾಗ, ನಾವು ಶಕ್ತಿ ಯೋಜನೆಯ ವೆಚ್ಚವನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರವೇ ಅವರು ಅದನ್ನು ಮರುಪಾವತಿ ಮಾಡಬಹುದು ಎಂದರು.

ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಬಸ್ ನಿಗಮದ ಆದಾಯವೂ ಹೆಚ್ಚಿದೆ. ಯೋಜನೆಯು ಯಶಸ್ವಿಯಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಈ ಪ್ರಮಾಣದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಈ ಹಠಾತ್ ಜಿಗಿತವನ್ನು ನಿರೀಕ್ಷಿಸಲಾಗಿತ್ತು. ಏಕೆಂದರೆ, ಇಂತಹ ಯೋಜನೆಗಳಿಗೆ ಯಾವಾಗಲೂ ಅಂತಹ ಶಕ್ತಿ ಇರುತ್ತದೆ. ಶಕ್ತಿ ಯೋಜನೆಯಡಿಲ್ಲಿನ ಪ್ರಯಾಣಿಕರ ಸಂಖ್ಯೆಯ ಮೇಲೆ ನಿಗಾ ಇಡುತ್ತಿದ್ದೇವೆ. ಸದ್ಯ ಪ್ರಯಾಣಿಕರ ಸಂಖ್ಯೆಯೊಂದಿಗೆ, ಈ ಯೋಜನೆಗಾಗಿ ಬಸ್ ನಿಗಮಗಳಿಗೆ ತಿಂಗಳಿಗೆ ಸುಮಾರು 400 ಕೋಟಿ ರೂ. ಅಗತ್ಯವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com