ಲಘು ವಿಮಾನ ಪತನ
ರಾಜ್ಯ
ಚಾಮರಾಜನಗರದಲ್ಲಿ ಲಘು ವಿಮಾನ ಪತನ, ಹೊತ್ತಿ ಉರಿದ ಜೆಟ್
ಚಾಮರಾಜನಗರ ತಾಲೂಕಿನ ಎಚ್ ಮೂಕಳ್ಳಿ ಬಳಿ ಗುರುವಾರ ಲಘು ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಮರಾಜನಗರ: ಚಾಮರಾಜನಗರ ತಾಲೂಕಿನ ಎಚ್ ಮೂಕಳ್ಳಿ ಬಳಿ ಗುರುವಾರ ತರಬೇತಿ ನಿರತ ಲಘು ವಿಮಾನವೊಂದು ಪತನವಾಗಿದ್ದು, ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆಟ್ ವಿಮಾನ ಪತನಗೊಂಡು, ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಲಘು ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ