ಗೆದ್ದಾಗ ಭಾರತ ಗೆದ್ದದ್ದು ನಿಜವಾದರೆ, ಕುಸ್ತಿ ಪಟುಗಳ ಮೇಲೆ ಅತ್ಯಾಚಾರವಾದಾಗ? ನಟ ಕಿಶೋರ್ ಕುಮಾರ್

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಂಚಿಕೊಂಡಿರುವ ಅವರು, ''ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದದ್ದು ನಿಜವಾದರೆ ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ, ಇಂದು ಅವರು ಸೋತರೆ ಭಾರತ ಸೋಲುತ್ತದೆ'' ಎಂದು ಎಂದು ಹೇಳಿದ್ದಾರೆ.
ಕಿಶೋರ್ ಕುಮಾರ್ ಹಂಚಿಕೊಂಡಿರುವ ಫೋಟೋ
ಕಿಶೋರ್ ಕುಮಾರ್ ಹಂಚಿಕೊಂಡಿರುವ ಫೋಟೋ

ಬೆಂಗಳೂರು: ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿರುವ ಬಹುಭಾಷಾ ನಟ ಕಿಶೋರ್‌ ಕುಮಾರ್ ಕುಸ್ತಿಪಟುಗಳ ವಿರುದ್ಧದ ಕೇಂದ್ರ ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌  ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪರ ಬೆಂಬಲ ಸೂಚಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಹಂಚಿಕೊಂಡಿರುವ ಅವರು, ''ಅಂದು ನಮ್ಮ ಕುಸ್ತಿ ಪಟುಗಳು ಗೆದ್ದಾಗ ಭಾರತ ಗೆದ್ದದ್ದು ನಿಜವಾದರೆ ಇಂದು ಅವರ ಮೇಲೆ ಅತ್ಯಾಚಾರವಾದಾಗ ಭಾರತದ ಮೇಲೆ ಅತ್ಯಾಚಾರವಾಗುತ್ತದೆ, ಇಂದು ಅವರು ಸೋತರೆ ಭಾರತ ಸೋಲುತ್ತದೆ'' ಎಂದು ಎಂದು ಹೇಳಿದ್ದಾರೆ.

ದೇಶದ ಗೌರವ ಹೆಚ್ಚಾಗುವುದು ಬೇರೆ ದೇಶದಲ್ಲೂ ನಮ್ಮ ಹಣ ಸುರಿದು ಜನರನ್ನು ಬಾಡಿಗೆಗೆ ತಂದು ಮಾಡುವ ರಾಜಕೀಯ ರ‍್ಯಾಲಿಯ ನಾಟಕಗಳಿಂದಲ್ಲ, ಜೀವ ತೇಯ್ದು ಬೆವರು ಹರಿಸಿ ಈ ಪಟುಗಳು ತಂದ ಮೆಡಲ್ಲುಗಳಿಂದ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com