ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಎರಡು ಭರವಸೆಗಳಾದ ಯುವ ನಿಧಿ ಮತ್ತು ಶಕ್ತಿ ಅವರು ಗುರಿಯಾಗಿಸಿರುವ ಸಮುದಾಯಗಳ ಮೇಲೆ ದೊಡ್ಡ ಧನಾತ್ಮಕ ಪರಿಣಾಮ ಬೀರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುವ ನಿಧಿ ಅಡಿಯಲ್ಲಿ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರು 1,500 ರೂ., ಶಕ್ತಿ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ ನೀಡುತ್ತದೆ.
'ಕಾಲೇಜಿನಿಂದ ಹೊರಗುಳಿದಿರುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ಯುವಕರು ಈಗ ರಿಸ್ಕ್ ಅನ್ನು ತೆಗೆದುಕೊಳ್ಳಬಹುದು. ಏಕೆಂದರೆ, ಸರ್ಕಾರವು ಅವರಿ1ಗೆ ಎರಡು ವರ್ಷಗಳವರೆಗೆ ಹಣವನ್ನು ನೀಡುತ್ತದೆ. ಈ ಹಿಂದೆ, ಕೆಳ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳ ಅಂತಹ ಯುವಕರು ತಮ್ಮ ಕನಸುಗಳನ್ನು ಬೆನ್ನಟ್ಟಲು ಮುಖ್ಯವಾಗಿ ತಮ್ಮ ಹೆತ್ತವರ ಮೇಲೆ ಅವಲಂಬಿತರಾಗಬೇಕಾಗಿತ್ತು ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸ್ಟೈಫಂಡ್‌ಗಾಗಿ ಕೆಲಸ ಮಾಡಬೇಕಾಗಿತ್ತು. ನಗರಗಳಲ್ಲಿನ ತಮ್ಮ ಸಮುದಾಯದ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಇಂತಹ ವಿದ್ಯಾರ್ಥಿಗಳು ಸಾಕಷ್ಟು ಮಂದಿ ಇದ್ದಾರೆ. SDA/FDA ಮತ್ತು KAS ಪರೀಕ್ಷೆಗಳನ್ನು ಬರೆದು ಅನೇಕರು ಹೊರಬರುತ್ತಾರೆ. ಈಗ ಯುವತಿಯರು ಕೂಡ ತಮ್ಮ ಕುಟುಂಬವನ್ನು ಅವಲಂಬಿಸದೆ ಇಂತಹ ಪ್ರಯತ್ನಗಳನ್ನು ಮಾಡಬಹುದು' ಎಂದು ಕೆಎಎಸ್ ಅಧಿಕಾರಿಯೊಬ್ಬರು ಹೇಳಿದರು.
ಸಮಾಜಶಾಸ್ತ್ರಜ್ಞ ನಾಗೇಶ್ ಕಾಳೇನಹಳ್ಳಿ ಮಾತನಾಡಿ, ನಿರುದ್ಯೋಗಿ ಯುವಕರಿಗೆ ಖಾತ್ರಿಯನ್ನು ವಿದೇಶದಿಂದ ಅದರಲ್ಲೂ ಕಲ್ಯಾಣ ರಾಜ್ಯಗಳಿಂದ ಎರವಲು ಪಡೆಯಲಾಗಿದೆ. ಇದರೊಂದಿಗೆ ಯುವಕರಿಗೆ ತಮ್ಮೊಂದಿಗೆ ಸರ್ಕಾರವಿದೆ ಎಂಬ ಭಾವನೆ ಮೂಡುತ್ತದೆ ಎಂದು ಹೇಳಿದರು.
ಎಂಬತ್ತರ ದಶಕದಲ್ಲಿ, ಕಂಪನಿಗಳು ಹೊಸ ಪದವೀಧರರನ್ನು ನಾಮಮಾತ್ರದ ಸ್ಟೈಫಂಡ್‌ನೊಂದಿಗೆ ತಾತ್ಕಾಲಿಕ ಆಧಾರದ ಮೇಲೆ ನೇಮಿಸಿಕೊಂಡವು ಮತ್ತು ಅವರು ಅಗತ್ಯವಾದ ಕೌಶಲ್ಯಗಳನ್ನು ಪಡೆದ ನಂತರ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದವು. ಆದರೆ, ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗಗಳ ಕೊರತೆ ಇರುವುದರಿಂದ ಸರ್ಕಾರದ ಯೋಜನೆಯು ಯುವಕರಿಗೆ ಸಹಾಯ ಮಾಡುತ್ತದೆ. ಆದರೆ, ಈ ಹಣವನ್ನು ಅವರು ಉತ್ತಮ ಕಾರ್ಯಕ್ಕೆ ಖರ್ಚು ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ನಿಗಾ ವಹಿಸಬೇಕು ಮತ್ತು ತೆರಿಗೆದಾರರ ಹಣಕ್ಕೆ ಯುವಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪೀಣ್ಯದ ಕೈಗಾರಿಕೋದ್ಯಮಿ ವೆಂಕಟೇಶ್ ಹೇಳಿದರು. ಈ ಯುವಕರಿಗೆ ಕೌಶಲ್ಯ ನೀಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಕ್ತಿ ಯೋಜನೆಯು ಗ್ರಾಮೀಣ ಮಹಿಳೆಯರು ವಾರದ ಸಂತೆಗಳಿಗೆ ಭೇಟಿ ನೀಡಿ ಕೃಷಿ ಉಪಕರಣಗಳು, ಬೀಜಗಳು ಮತ್ತು ಇತರ ಅವಶ್ಯಕತೆಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ಸಮಾಜ ವಿಜ್ಞಾನಿ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಕೊರಟಗೆರೆ ತಾಲೂಕಿನ ತೋವಿನಕೆರೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿರುವ ರೈತ ಎಚ್.ಜೆ. ಪದ್ಮರಾಜು ಮಾತನಾಡಿ, ಈ ಯೋಜನೆ ಮಹಿಳೆಯರಿಗೆ ನೆರವಾಗಲಿದೆ. ಹಳ್ಳಿಯ ಹಳ್ಳಿಸಿರಿ ಸ್ವಸಹಾಯ ಸಂಘದ ಮುಖ್ಯಸ್ಥೆ ಮಂಜಮ್ಮ ಅವರು ಮೇ 17 ಮತ್ತು 18 ರಂದು ನಡೆಯಲಿರುವ ಹಲಸು ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂಬ ಕಾರಣಕ್ಕೆ ತಂಡವನ್ನು ಕರೆದೊಯ್ಯಲು ಯೋಜಿಸಿದ್ದಾರೆ.
ಕೆಲವು ಮಹಿಳೆಯರು ವಿಶೇಷವಾಗಿ ಧರ್ಮಸ್ಥಳಕ್ಕೆ ಪ್ರವಾಸ ಮತ್ತು ತೀರ್ಥಯಾತ್ರೆಗಳನ್ನು ಯೋಜಿಸುತ್ತಿದ್ದಾರೆ. ಈ ರೀತಿಯ ಯೋಜನೆಗನ್ನು ಮಾಡಲು ತಿಂಗಳುಗಳೇ ತೆಗೆದುಕೊಳ್ಳುತ್ತಿದ್ದದ್ದು, ಈಗ ಕೆಲವೇ ವಾರಗಳಲ್ಲಿ ಯೋಜನೆ ಸಿದ್ಧವಾಗುತ್ತದೆ. ಆದರೆ, ನಮ್ಮ ಮಹಿಳೆಯರು ಶಕ್ತಿ ಖಾತರಿಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಏಕೆಂದರೆ, ಅವರು ಹೊಲಗಳಲ್ಲಿ ಅಥವಾ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ ಎಂದು ಮಹಿಳಾ ಸಬಲೀಕರಣವನ್ನು ಬೆಂಬಲಿಸುವ ನಾಟಕ ರಚನೆಕಾರ ರಾಜಪ್ಪ ದಳವಾಯಿ ಹೇಳಿದರು.
Advertisement