ವೈಟ್‌ಫೀಲ್ಡ್- ಕೆಆರ್ ಪುರ ಮಾರ್ಗ: ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಬಳಕೆಯಿಂದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ!

ವೈಟ್‌ಫೀಲ್ಡ್ ಕಾಡುಗೋಡಿಯಿಂದ ಕೆಆರ್ ಪುರದವರೆಗಿನ ಮೆಟ್ರೋ ಸೇವೆ ಸದ್ಯ ವಾತಾವರಣದ ಮೇಲೆ ತಮ್ಮ ಪ್ರಭಾವವನ್ನು ಬೀರಲು ಪ್ರಾರಂಭಿಸಿದೆ.
ವೈಟ್‌ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣ
ವೈಟ್‌ಫೀಲ್ಡ್ ಕಾಡುಗೋಡಿ ಮೆಟ್ರೋ ನಿಲ್ದಾಣ

ಬೆಂಗಳೂರು: ವೈಟ್‌ಫೀಲ್ಡ್ ಕಾಡುಗೋಡಿಯಿಂದ ಕೆಆರ್ ಪುರದವರೆಗಿನ ಮೆಟ್ರೋ ಸೇವೆ ಸದ್ಯ ವಾತಾವರಣದ ಮೇಲೆ ತಮ್ಮ ಪ್ರಭಾವವನ್ನು ಬೀರಲು ಪ್ರಾರಂಭಿಸಿದೆ. ಮಾರ್ಚ್ 25ರಂದು ಉದ್ಘಾಟನೆಗೊಂಡ ನಂತರದ ಆರಂಭಿಕ ಕೆಲವು ವಾರಗಳಲ್ಲಿ ಇದನ್ನು ಗುರುತಿಸಲಾಗದಿದ್ದರೂ, ಮೇ ತಿಂಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಹೇಳಿದೆ.

ಈ ಮಾರ್ಗದಲ್ಲಿ ದಿನಂಪ್ರತಿ ಸುಮಾರು 26,000 ದಿಂದ 28,000ರ ನಡುವೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಕ್ಯಾಬ್, ಸ್ವಂತ ವಾಹನಗಳ ಬಳಕೆ ಕಡಿಮೆಯಾಗುತ್ತಿರುವುದರಿಂದ ಈ ಬದಲಾವಣೆ ಕಂಡುಬರುತ್ತಿದೆ.

KSPCB ಸದಸ್ಯ ಕಾರ್ಯದರ್ಶಿ ಗಿರೀಶ್ HC ಅವರು TNIE ಜೊತೆ ಮಾತನಾಡಿದ್ದು ಈ ವೇಳೆ ಅವರು, ನಾವು ಶೂನ್ಯದಿಂದ 400ರ ಸೂಚ್ಯಂಕದಲ್ಲಿ ಮಾಲಿನ್ಯ ಮಟ್ಟವನ್ನು ವರ್ಗೀಕರಿಸುತ್ತೇವೆ. 50ಕ್ಕಿಂತ ಕಡಿಮೆ ಮಾಪನಗಳು ಉತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. 50 ರಿಂದ 100 ತೃಪ್ತಿಕರ ವ್ಯಾಪ್ತಿಗೆ ಬೀಳುತ್ತದೆ. 100 ರಿಂದ 200 ಮಧ್ಯಮ ಮಟ್ಟ ಸೂಚ್ಯಂಕದಲ್ಲಿರೆ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಕಳಪೆ ಎಂದು ವರ್ಗೀಕರಿಸಲಾಗುತ್ತದೆ ಎಂದರು.

ಕೆಆರ್ ಪುರಂ-ಕಾಡುಗೋಡಿ ಮಾರ್ಗಕ್ಕೆ ಸಂಬಂಧಿಸಿದಂತೆ, ಮಾಲಿನ್ಯದ ಮಾಪನವನ್ನು ಹೆಬ್ಬಾಳದ ನಿರಂತರ ವಾಯು ಗುಣಮಟ್ಟ ನಿಗಾ ಕೇಂದ್ರದಲ್ಲಿ ದಾಖಲಿಸಲಾಗಿದೆ. ಈ ವರ್ಷದ ಲಭ್ಯವಿರುವ ಮಾಪನವನ್ನು ಕಳೆದ ವರ್ಷದ ಮೇಗೆ ಹೋಲಿಸಿದರೆ, 31 ದಿನಗಳ ಪೈಕಿ 22 ದಿನಗಳು ಉತ್ತಮ ಗಾಳಿಯ ಗುಣಮಟ್ಟವನ್ನು ಹೊಂದಿದೆ. ಇದೇ ಕಳೆದ ವರ್ಷ ಕೇವಲ 14 ಮಾತ್ರ ಇತ್ತು. ಕಳೆದ ವರ್ಷ ನಾವು ತೃಪ್ತಿಕರ ವಿಭಾಗದಲ್ಲಿ 17 ದಿನಗಳನ್ನು ಕಂಡಿದ್ದರೆ ಅದು ಈ ವರ್ಷಕ್ಕೆ ಒಂಬತ್ತಕ್ಕೆ ಇಳಿದಿದ್ದು 22 ದಿನಗಳು ಉತ್ತಮ ಶ್ರೇಣಿಗೆ ಸ್ಥಳಾಂತರಗೊಂಡಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಸಾರಿಗೆಗೆ ಸಂಬಂಧಿಸಿದ ಯಾವುದೇ ಮೂಲಸೌಕರ್ಯ ಯೋಜನೆಯು ದೀರ್ಘಾವಧಿಯಲ್ಲಿ ಪರಿಸರಕ್ಕೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗುತ್ತದೆ. ಏಕೆಂದರೆ ಇದು ನೂರಾರು ವಾಹನಗಳನ್ನು ರಸ್ತೆಗಳಿಯುವುದರಿಂದ ತಪ್ಪಿಸುತ್ತದೆ ಎಂದು ಗಿರೀಶ್ ಹೇಳಿದರು.

ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್, ಕಳೆದ ಹದಿನೈದು ದಿನಗಳ ಅವಧಿಯಲ್ಲಿ (ಮೇ 15 ರಿಂದ 31) ಒಟ್ಟು 4,36,597 ಪ್ರಯಾಣಿಕರು ಈ ಮಾರ್ಗವನ್ನು ಬಳಸಿದ್ದಾರೆ ಎಂದು ಹೇಳಿದರು. ಮೇ 24 ರಂದು ಅತ್ಯಧಿಕ 29,480 ಮಂದಿ  ಪ್ರಯಾಣಿಸಿರುವುದು ದಾಖಲಾಗಿದೆ ಎಂದರು. 

ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಮಾತನಾಡಿ, ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವಿನ 2.5 ಕಿಮೀ ಸಂಪರ್ಕ ಪೂರ್ಣಗೊಂಡ ನಂತರ ವಿಸ್ತರಣಾ ಮಾರ್ಗದಲ್ಲಿ ದಿನಕ್ಕೆ ಸರಾಸರಿ 1.25 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಪ್ರಸ್ತುತ, ಮೆಟ್ರೋ ಮತ್ತು ಫೀಡರ್ ಬಸ್ ಎರಡನ್ನೂ ಬಳಸುವುದು ಪ್ರಯಾಣಿಕರಿಗೆ ದುಬಾರಿಯಾಗಿದೆ ಎಂದು ಸಾಬೀತಾಗಿದೆ. ಮೆಟ್ರೋ ಟಿಕೆಟ್ 28 ರೂ ಆಗಿರುತ್ತದೆ ಮತ್ತು ನಂತರ ಬಸ್ ದರ 20 ರೂ ಆಗಿರುತ್ತದೆ. ಹಾಗೆಯೇ ಮಧ್ಯದಲ್ಲಿ ಇಳಿಯಲು ಮತ್ತು ಬದಲಾಯಿಸಲು ಯಾರು ಮನಸು ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಚಾಲ್ತಿಯಲ್ಲಿರುವ ಕಾಮಗಾರಿಯ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಟ್ರ್ಯಾಕ್ ಹಾಕುವ ಕಾರ್ಯ ಪೂರ್ಣಗೊಂಡಿದ್ದು ಸಿಗ್ನಲಿಂಗ್ ಕೇಬಲ್‌ಗಳನ್ನು ಮೇಲೆ ಇರಿಸಲಾಗಿದೆ. ಯೋಜನೆಗಳ ಪ್ರಕಾರ ಕೆಲಸಗಳು ನಡೆಯುತ್ತಿದ್ದು ಜುಲೈ 15 ಮತ್ತು ಜುಲೈ 30 ರ ನಡುವೆ ಯಾವುದೇ ಸಮಯದಲ್ಲಿ ಅದನ್ನು ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಕಾಡುಗೋಡಿ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗೆ ಕಂಡುಬಂದಿರುವ ಸೋರಿಕೆ ಮೇಲ್ಛಾವಣಿಯ ಸೋರಿಕೆಯಿಂದಲ್ಲ, ಆದರೆ ಗಾಳಿಯ ಉದ್ದೇಶಕ್ಕಾಗಿ ಪ್ಲಾಟ್‌ಫಾರ್ಮ್‌ಗಳಲ್ಲಿ 6 ಮೀಟರ್ ದೂರಕ್ಕೆ ತೆರೆದ ಸ್ಥಳಗಳಿಂದಾಗಿ ಸೋರಿಕೆಯಾಗಿದೆ ಎಂದು ಹೇಳಿದರು. ನೀರು ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸಿದ್ದು ನಂತರ ಎಸ್ಕಲೇಟರ್ ಮತ್ತು ಮೆಟ್ಟಿಲುಗಳಿಗೆ ಹರಿಯಿತು. ನಾವು ಈಗ ಕಾಡುಗೋಡಿಯಲ್ಲಿರುವ ಈ ಜಾಗವನ್ನು ಲೌವ್ರೆ ಕಿಟಕಿಗಳಿಂದ ಮುಚ್ಚಲು ನಿರ್ಧರಿಸಿದ್ದೇವೆ ಇದರಿಂದ ಬೆಳಕು ಮತ್ತು ಗಾಳಿ ಪ್ರವೇಶಿಸಬಹುದು ಆದರೆ ಮಳೆ ಬರುವುದಿಲ್ಲ. ನಲ್ಲೂರಹಳ್ಳಿ ನಿಲ್ದಾಣದಲ್ಲಿಯೂ, ಕಟ್ಟಡಗಳ ನಡುವಿನ ಜಾಗದಲ್ಲಿ ಛಾವಣಿ ನಿರ್ಮಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com