ಉಳ್ಳವರು ಗ್ಯಾರಂಟಿಗಳನ್ನು ತ್ಯಜಿಸಿ, ಸರ್ಕಾರದ ಹೊರೆಯನ್ನು ಕಡಿಮೆ ಮಾಡಿ: ಸಿಎಂ ಸಿದ್ದರಾಮಯ್ಯ ಮನವಿ

'ಉಳ್ಳವರು' ಅಥವಾ ಆರ್ಥಿಕವಾಗಿ ಸಾಮರ್ಥ್ಯವುಳ್ಳವರು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಭರವಸೆಗಳನ್ನು ಬಿಟ್ಟುಕೊಟ್ಟು 'ಇಲ್ಲದವರಿಗೆ' ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 'ಉಳ್ಳವರು' ಅಥವಾ ಆರ್ಥಿಕವಾಗಿ ಸಾಮರ್ಥ್ಯವುಳ್ಳವರು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಭರವಸೆಗಳನ್ನು ಬಿಟ್ಟುಕೊಟ್ಟು 'ಇಲ್ಲದವರಿಗೆ' ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

‘ಉಳ್ಳವರು’ ಉದಾರವಾಗಿ ‘ಇಲ್ಲದವರ’ನ್ನು ಗುರಿಯಾಗಿಸಿಕೊಂಡಿರುವ ಗ್ಯಾರಂಟಿಗಳನ್ನು ಬಿಟ್ಟುಕೊಟ್ಟರೆ, ಅದು ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

'ಅನೇಕ ಸರ್ಕಾರಿ ಅಧಿಕಾರಿಗಳು, ಮಾಧ್ಯಮಗಳ ಮುಖ್ಯಸ್ಥರು ಮತ್ತು ಖಾಸಗಿ ವಲಯದಲ್ಲಿರುವವರು ‘ಗೃಹ ಜ್ಯೋತಿ’ಯನ್ನು ತ್ಯಜಿಸಲು ಬಯಸುವುದಾಗಿ ನನಗೆ ಪತ್ರ ಬರೆದಿದ್ದಾರೆ. ಈ ಯೋಜನೆಯಿಂದ ಹೊರಗುಳಿಯಲು ಇಚ್ಛಿಸುವವರಿಗೆ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸುವಂತೆ ಜನರನ್ನು ಕೇಳುವ ಅಭಿಯಾನವನ್ನು ಪ್ರಾರಂಭಿಸಿದಾಗ, ಅನೇಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಅದೇ ರೀತಿ ಇಲ್ಲೂ ಕೂಡ ಗ್ಯಾರಂಟಿಗಳನ್ನು ಕೈಬಿಡಬಹುದು. ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಸಹ 'ಗೃಹ ಜ್ಯೋತಿ'ಗೆ ಅರ್ಹವಾಗಿವೆ’ ಎಂದು ಶಿವಕುಮಾರ್ ಹೇಳಿದರು. 

ಯಾವುದೇ ಪಕ್ಷದ ಬೆಂಬಲಿಗರು ಸಹ ಗ್ಯಾರಂಟಿಗಳನ್ನು ಬಿಟ್ಟುಕೊಡಬಹುದು

ತಮ್ಮ ಮನೆಯ ಟೆರೇಸ್‌ನಲ್ಲಿ 6.5 ಕೆವಿಎ ಸೌರಶಕ್ತಿ ಉತ್ಪಾದಿಸುತ್ತಿರುವುದಾಗಿ ಹೇಳಿಕೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ‘ಗೃಹ ಜ್ಯೋತಿ’ ಪ್ರಯೋಜನಗಳನ್ನು ಬಳಸಲು ಇಚ್ಛಿಸುವುದಿಲ್ಲ ಎಂದು ಶಿವಕುಮಾರ್‌ಗೆ ಪತ್ರ ಬರೆದಿದ್ದಾರೆ. 

ಅಮರನಾರಾಯಣ ಅವರು ತಮ್ಮ ಪತ್ರದಲ್ಲಿ, ಐಎಎಸ್‌ನಿಂದ ಸಿ ದರ್ಜೆಯವರೆಗಿನ ಎಲ್ಲಾ ಅಧಿಕಾರಿಗಳು ಮತ್ತು ಆದಾಯ ತೆರಿಗೆದಾರರು ಗ್ಯಾರಂಟಿಗಳನ್ನು ಬಿಟ್ಟುಕೊಡಬೇಕು. ಸಾಮರ್ಥ್ಯವುಳ್ಳವರು ಹೆಚ್ಚಿನ ಭಾರವನ್ನು ಹೊರಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದರಿಂದ, ಇತರೆ ಕೆಲವು ಪಕ್ಷದ ಬೆಂಬಲಿಗರು ಗ್ಯಾರಂಟಿಗಳನ್ನು ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲು ಸಿದ್ಧರಿರಬಹುದು. ಆದರೆ, ಅವರ ಸಂಖ್ಯೆ ಕಡಿಮೆ ಇರಬಹುದು ಎಂದು ಮೂಲಗಳು ತಿಳಿಸಿವೆ.

ಈಮಧ್ಯೆ, ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸುತ್ತಿರುವ ಸಿದ್ದರಾಮಯ್ಯ, ಒಂದು ವರ್ಷದ ಗ್ಯಾರಂಟಿಗಾಗಿ ಅಂದಾಜು 47,000 ರಿಂದ 50,000 ರೂ. ಕೋಟಿವರೆಗೆ ಅಂದಾಜು ವೆಚ್ಚವನ್ನು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಐದು ಖಾತರಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಶೀಘ್ರದಲ್ಲೇ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಿದ್ದಾರೆ. ಕೆಲವು ಗ್ಯಾರಂಟಿಗಳನ್ನು ಪಡೆಯುವುದರ ಮೇಲೆ, ವರ್ಗ I ಮತ್ತು ವರ್ಗ II ಸರ್ಕಾರಿ ನೌಕರರಿಗೆ ಮತ್ತು ಸಾಮಾನ್ಯವಾಗಿ ಆದಾಯ ತೆರಿಗೆದಾರರನ್ನು ವಿಶೇಷ ವರ್ಗವನ್ನಾಗಿ ವಿಂಗಡಿಸಲಾಗಿದೆ. ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಗಾಗಿ ಮೀಸಲಿಟ್ಟಿರುವ 25,000 ಕೋಟಿ ರೂ.ಗಳಲ್ಲಿ ಸಿಂಹಪಾಲು 1.25 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವ ‘ಗೃಹ ಲಕ್ಷ್ಮಿ’ ಯೋಜನೆ ಅನುಷ್ಠಾನಕ್ಕೆ ಹೋಗುತ್ತದೆ ಎಂದು ಅಧಿಕಾರಿಯೊಬ್ಬರು ಟಿಎನ್‌ಎಸ್‌ಇಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com