ಬಿಪೊರ್ ಜೋಯ್ ಚಂಡಮಾರುತ ಎಫೆಕ್ಟ್: ರಾಜ್ಯದ ಕರಾವಳಿಯಲ್ಲಿ ಹೆಚ್ಚಿದ ಮಳೆ, ಆತಂಕ

ಜೂನ್ 15ಕ್ಕೆ ಬಿಪೊರ್ ಜೋಯ್ ಚಂಡಮಾರುತ ಗುಜರಾತ್ ಪ್ರವೇಶಿಸಲಿದ್ದು ಅದರ ಪರಿಣಾಮ ಈಗಾಗಲೇ ಕಂಡುಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಜೂನ್ 15ಕ್ಕೆ ಬಿಪೊರ್ ಜೋಯ್ ಚಂಡಮಾರುತ ಗುಜರಾತ್ ಪ್ರವೇಶಿಸಲಿದ್ದು ಅದರ ಪರಿಣಾಮ ಈಗಾಗಲೇ ಕಂಡುಬರುತ್ತಿದೆ.

ಚಂಡಮಾರುತ ಪರಿಣಾಮ ಕಾರವಾರದ ಸಮುದ್ರ ತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಗೋಕರ್ಣ, ಮುರುಡೇಶ್ವರ, ಕಾರವಾರ ಕಡಲ ತೀರಗಳು ಪ್ರವಾಸಿಗರಿಲ್ಲದೆ ಖಾಲಿಯಾಗಿದ್ದು, ಸಂಪ್ರದಾಯಿಕ ದೋಣಿ ಮೂಲಕ ಮೀನು ಹಿಡಿಯಲು ಮೀನುಗಾರರು ವಿಫಲ ಯತ್ನ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ತಡೆ ಗೋಡೆ ಚೆಲ್ಲಾಪಿಲ್ಲಿಯಾಗಿದೆ. ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪೊರ್​​ಜಾಯ್​​ ಚಂಡಮಾರುತದ ಅಬ್ಬರ ಜೋರಾಗಿದೆ. ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲತೀರದಲ್ಲಿ ಕಡಲ್ಕೊರೆತ ಉಂಟಾಗಿ ತೆಂಗಿನ ಮರ ಧರೆಗುರುಳಿದೆ. 

ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಉಳ್ಳಾಲ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಜೊತೆಗಿದ್ದರು. ಕಡಲ್ಕೊರೆತ ಸಂತ್ರಸ್ತರ ಸಮಸ್ಯೆ ಆಲಿಸಿದ ಸಚಿವ ಗುಂಡೂರಾವ್ ಅವರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದರು. ಸಮಸ್ಯೆಯಿಂದ ರಾತ್ರಿ ಕಳೆಯಲು ಭಯವಾಗುತ್ತಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಆಲಿಸಿದ ಸಚಿವರು ತಕ್ಷಣ ಸ್ಥಳೀಯ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಬಿಪೊರ್ ಜೋಯ್ ಚಂಡಮಾರುತ: ಜೂನ್ 15 ರ ಮಧ್ಯಾಹ್ನದ ವೇಳೆಗೆ ಜಖೌ ಬಂದರು (ಗುಜರಾತ್) ಬಳಿ ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಸೌರಾಷ್ಟ್ರ ಮತ್ತು ಕಚ್ ಪ್ರದೇಶವನ್ನು ಗಂಟೆಗೆ 125-135 ಕಿ.ಎಂ. ನಿರಂತರ ಗಾಳಿಯ ವೇಗದೊಂದಿಗೆ ಗರಿಷ್ಠ ಗಂಟೆಗೆ 145 ಕಿ.ಎಂ. ವರೆಗಿನ ವೇಗದಲ್ಲಿ ಚಂಡಮಾರುತವು ದಾಟುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇದರಿಂದಾಗಿ ಜೂನ್ 14-15 ರಂದು ಗುಜರಾತ್ ನ ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್ ನಗರಗಳಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ.

ಗುಜರಾತ್ ನ ಪೋರ್ ಬಂದರ್, ರಾಜ್ಕೋಟ್, ಮೊರ್ಬಿ ಮತ್ತು ಜುನಾಗರ್ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸೇರಿದಂತೆ ಗುಜರಾತ್ ನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 6 ರಂದು ಸೈಕ್ಲೋನಿಕ್ ಸಿಸ್ಟಮ್ ಪ್ರಾರಂಭವಾದಾಗಿನಿಂದ ಇತ್ತೀಚಿನ ಮುನ್ಸೂಚನೆಯೊಂದಿಗೆ ಎಲ್ಲಾ ರಾಜ್ಯಗಳು ಮತ್ತು ಸಂಸ್ಥೆಗಳಿಗೆ ಭಾರತೀಯ ಹವಾಮಾನ ಇಲಾಖೆಯು ಸುದ್ದಿ ಬಿಡುಗಡೆ ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com