ಉತ್ತರ ಕನ್ನಡದಲ್ಲಿ ಚುರುಕುಗೊಂಡ ಬಿಪೊರ್ ಜೋಯ್ ಚಂಡಮಾರುತ: ತೀವ್ರಗೊಂಡ ಕಡಲ್ಕೊರೆತ

ಬಿಪರ್‌ಜಾಯ್‌ ಚಂಡ ಮಾರುತದ ಉತ್ತರ ಕನ್ನಡದ ಹಲವೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಅಲೆಗಳ ರಭಸಕ್ಕೆ ಕಲ್ಲು ಬಂಡೆಗಳ ತಡೆಗೋಡೆ ಸಮುದ್ರ ಪಾಲಾಗುತ್ತಿದೆ. ತೆಂಗಿನ ಮರಗಳು, ಭೂಭಾಗ ನೀರುಪಾಲಾಗಿ ಸ್ಥಳೀಯರು ಆತಂಕ ಪಡುವಂತಾಗಿದೆ.
ಉತ್ತರ ಕನ್ನಡದಲ್ಲಿ ಕಡಲ್ಕೊರೆತ
ಉತ್ತರ ಕನ್ನಡದಲ್ಲಿ ಕಡಲ್ಕೊರೆತ

ಕಾರವಾರ: ಬಿಪರ್‌ಜಾಯ್‌ ಚಂಡ ಮಾರುತದ ಉತ್ತರ ಕನ್ನಡದ ಹಲವೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಅಲೆಗಳ ರಭಸಕ್ಕೆ ಕಲ್ಲು ಬಂಡೆಗಳ ತಡೆಗೋಡೆ ಸಮುದ್ರ ಪಾಲಾಗುತ್ತಿದೆ. ತೆಂಗಿನ ಮರಗಳು, ಭೂಭಾಗ ನೀರುಪಾಲಾಗಿ ಸ್ಥಳೀಯರು ಆತಂಕ ಪಡುವಂತಾಗಿದೆ.

ಬಿಪರ್‌ಜೋಯ್ ಚಂಡಮಾರುತವು ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ಹೊಡೆತ ನೀಡಿದೆ ಅಧಿಕ ಪ್ರಮಾಣದಲ್ಲಿ, ಭೂಮಿ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಿದೆ. ಮುಂಗಾರು ಇನ್ನೂ ವೇಗವನ್ನು ಪಡೆಯದ ಕಾರಣ, ಹಲವಾರು ಕರಾವಳಿ ಗ್ರಾಮಗಳು ಈಗಾಗಲೇ ಕ್ಷಿಪ್ರಗತಿಯಲ್ಲಿ ಭೂಮಿ ಕಳೆದುಕೊಳ್ಳುತ್ತಿವೆ.

ಕಾರವಾರ ತಾಲೂಕಿನ ಮಾಜಾಳಿ, ದೇವಬಾಗ್, ಹಾರವಾಡ, ರವೀಂದ್ರನಾಥ ಟ್ಯಾಗೋರ್ ಬೀಚ್ ಸುತ್ತಮುತ್ತಲಿನ ಗ್ರಾಮಗಳು, ಕುಮಟಾದ ಮಾವಿನಕುರ್ವೆ, ಪಾವಿನಕುರ್ವೆ, ಹೊನ್ನಾವರ ಮತ್ತು ಭಟ್ಕಳದ ಕೆಲವು ಭಾಗಗಳಲ್ಲಿ ಕೊರೆತ ಉಂಟಾಗಿದೆ. ಅನಿರೀಕ್ಷಿತ ಸಮುದ್ರದ ಅಬ್ಬರದಿಂದಾಗಿ ಮೀನುಗಾರರು ಜೀವನೋಪಾಯ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಹಾರವಾಡದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. "ಹಲವಾರು ವರ್ಷಗಳಿಂದ ಸವೆತ ನಡೆಯುತ್ತಿದೆ. ನಮ್ಮ ಎಲ್ಲಾ ಮನೆಗಳು ಸಮುದ್ರ ತೀರದಲ್ಲಿವೆ. ಇಲ್ಲಿಯವರೆಗೆ ಬೇಲಿ ಹಾಕುವ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ಸಮುದ್ರವು ಭೂಮಿಯನ್ನು ತಿನ್ನುತ್ತಿದೆ. ಇದೇ ರೀತಿ ಮುಂದುವರಿದರೆ ನಮ್ಮ ಮನೆಗಳು ಇಲ್ಲವಾಗುತ್ತವೆ’ ಎಂದು ಮಾಜಾಳಿ ಮೀನುಗಾರ ರೋಷನ್ ಹೇಳಿದರು.

ಹೆಚ್ಚಿನ ವೇಗದ ಗಾಳಿಯಿಂದಾಗಿ ಕಡಲತೀರದಲ್ಲಿ ಲಂಗರು ಹಾಕಿದ್ದ  ದೇಸಿ ದೋಣಿ ನಾಶವಾಗಿದೆ. ತರಂಗಮೇಟಿಯಲ್ಲಿ ಸಮುದ್ರವು ಅಪಾರ ಪ್ರಮಾಣದ ಭೂಮಿಯನ್ನು ಕಿತ್ತುಕೊಂಡಿದೆ. 20 ತೆಂಗಿನ ಮರಗಳು ನೆಲಕ್ಕುರುಳಿದ್ದು, ಮನೆಗಳಿಗೆ ನೀರು ನುಗ್ಗಿದೆ, ಇದರಿಂದ ಜೀವನದ ಮೇಲೆ ತೀವ್ರ ಪೆಟ್ಟು ಬಿದ್ದಿದೆ ಎಂದು ಅಂಕೋಲಾದ ತರಂಗಮೇಟಿ ಗ್ರಾಮದ ಮೀನುಗಾರ ಈಶ್ವರ ಮಾಜಾಳಿಕರ್ ನೋವು ತೋಡಿಕೊಂಡಿದ್ದಾರೆ.

ಚಂಡಮಾರುತ ತೀವ್ರ ಸ್ವರೂಪ ಪಡೆದರೆ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ. ನಾವು  ಎಲ್ಲಾ ರೀತಿಯ  ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆರೋಗ್ಯ ಇಲಾಖೆ ಹಾಗೂ ವಿದ್ಯುತ್‌ ವಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ' ಎಂದು ಭರವಸೆ ನೀಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಮೀನುಗಾರರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com