ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ಜೊತೆಗೆ ಮೊಟ್ಟೆ: ಸರ್ಕಾರಕ್ಕೆ ಬಿಬಿಎಂಪಿ ಮಾಜಿ ಸದಸ್ಯರ ಒತ್ತಾಯ

ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಸಿಗುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್​ನಲ್ಲಿ ಇದೀಗ ಮೊಟ್ಟೆ ಕೂಡ ಸಿಗಲಿದೆ. ಇಂದಿರಾ ಕ್ಯಾಂಟೀನ್​ನಲ್ಲಿ ಇನ್ನುಮುಂದೆ ಮೊಟ್ಟೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮಾಜಿ ಸದಸ್ಯರು ಮುಂದಾಗಿದ್ದಾರೆ.
ಇಂದಿರಾ ಕ್ಯಾಂಟಿನ್
ಇಂದಿರಾ ಕ್ಯಾಂಟಿನ್

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್​ಗಳಿಗೆ ಮರು ಜೀವ ಸಿಕ್ಕಿದೆ. ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ ಸಿಗುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್​ನಲ್ಲಿ ಇದೀಗ ಮೊಟ್ಟೆ ಕೂಡ ಸಿಗಲಿದೆ. ಇಂದಿರಾ ಕ್ಯಾಂಟೀನ್​ನಲ್ಲಿ ಇನ್ನುಮುಂದೆ ಮೊಟ್ಟೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಮಾಜಿ ಸದಸ್ಯರು ಮುಂದಾಗಿದ್ದಾರೆ.

ಇಂದಿರಾ ಕ್ಯಾಂಟೀನ್​ನಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಸಿಎಂ ಸೂಚನೆ ಬೆನ್ನಲ್ಲೇ ಅನೇಕ ತಜ್ಞರು ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರಕ್ಕೆ ಕೋಳಿ ಮೊಟ್ಟೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಡ, ಶ್ರಮಿಕ‌ ವರ್ಗದವರಿಗೆ ಕೋಳಿ ಮೊಟ್ಟೆ ಉತ್ತಮ ಪೌಷ್ಟಿಕಾಂಶ. ಹೀಗಾಗಿ ಕಾಂಗ್ರೆಸ್, ಬಿಬಿಎಂಪಿಯ ಮಾಜಿ ಸದಸ್ಯರು ಕೋಳಿ ಮೊಟ್ಟೆಗೆ ಒತ್ತಾಯಿಸಿದ್ದಾರೆ.  

ಮೆನುವಿನಲ್ಲಿ ಮೊಟ್ಟೆಗಳನ್ನು ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಮಾಜಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹೇಳಿದ್ದಾರೆ. ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಬ್ದುಲ್ ವಾಜಿದ್,  ಇಂದಿರಾ  ಕ್ಯಾಂಟೀನ್‌ನಲ್ಲಿ ಬಹುಪಾಲು ಕಾರ್ಮಿಕ ವರ್ಗ ಮತ್ತು ಬಡ ಜನರು ಊಟಕ್ಕೆ ಬರುತ್ತಾರೆ.  ಮೆನುವಿನಲ್ಲಿ ಪೌಷ್ಟಿಕಾಂಶ ಮತ್ತು ಪ್ರೋಟೀನ್ ಸೇರಿಸುವುದರಿಂದ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ಆದ್ದರಿಂದಸರ್ಕಾರ ಮತ್ತು ಬಿಬಿಎಂಪಿಗೆ  ಪ್ರಸ್ತಾವನೆಯನ್ನು ನೀಡಲಾಗುವುದು.

ಕ್ಯಾಂಟೀನ್‌ಗಳು ಮತ್ತು ಆಹಾರದ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಪಾಲಿಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾತನಾಡಿ, ಪಾಲಿಕೆಯು ತನ್ನ ಕ್ಯಾಂಟೀನ್‌ನಲ್ಲಿ ರಾತ್ರಿಯ ಊಟಕ್ಕೆ ಅದೇ ಪ್ರಮಾಣದ ಆಹಾರವನ್ನು ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. ಮೊಟ್ಟೆ ಸೇರ್ಪಡೆಗೆ ಸಂಬಂಧಿಸಿದಂತೆ ಅಧಿಕಾರಿಗಳು, ‘‘ಪ್ರಸ್ತಾವನೆ ಕಳುಹಿಸಿದರೆ ಚರ್ಚಿಸಿ ಸರಕಾರಕ್ಕೆ ಪರಿಗಣನೆಗೆ ಕಳುಹಿಸಲಾಗುವುದು ಎಂದಿದ್ದಾರೆ.

ಮೆನುವಿನಲ್ಲಿ ಮೊಟ್ಟೆ ಸೇರಿಸುವ ಸಲಹೆಯನ್ನು ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ನಾಯ್ಡು  ಶ್ಲಾಘಿಸಿದ್ದಾರೆ.  ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಆದರೆ ಇಂದಿರಾ ಕ್ಯಾಂಟೀನ್‌ಗೆ ಸಾಕಷ್ಟು ಸಸ್ಯಾಹಾರಿಗಳು ಬರುವುದರಿಂದ ಮೊಟ್ಟೆಯ ಕೌಂಟರ್ ಪ್ರತ್ಯೇಕವಾಗಿರಬೇಕು ಎಂದಿದ್ದಾರೆ.  ತಮ್ಮ ಶಾಸಕರ ಅನುದಾನ ನಿಧಿಯಿಂದ 17 ಲಕ್ಷ ರೂಪಾಯಿ ವೆಚ್ಚದಲ್ಲಿ  ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಏಳು ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವುದಾಗಿ ತಿಳಿಸಿದ್ದಾರೆ. ಪಾಲಿಕೆ ಜಂಟಿ ಆಯುಕ್ತರ ಕಚೇರಿಯಲ್ಲಿರುವ ಮಾನಿಟರ್‌ಗೆ ಸಿಸಿಟಿವಿ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಸಿಸಿಟಿವಿ ದೃಶ್ಯಾವಳಿಗಳು 45 ದಿನಗಳ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಪ್ರತಿ ತಿಂಗಳು ಬಿಲ್ ಮಾಡುವಾಗ, ಅಧಿಕಾರಿಗಳು ವೀಡಿಯೊವನ್ನು ಪರಿಶೀಲಿಸಬಹುದು ಮತ್ತು ಎಣಿಕೆಯ ಆಧಾರದ ಮೇಲೆ ಬಿಲ್ ಅನ್ನು ಸಿದ್ಧಪಡಿಸಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com