ಸಾಲ ಮರುಪಾವತಿ: ಕೋಲಾರ ಸ್ತ್ರೀಶಕ್ತಿ ಸಂಘದ ಮಹಿಳೆಯರಿಂದ ಡಿಸಿಸಿ ಬ್ಯಾಂಕ್ ಅಧಿಕಾರಿ ಕಟ್ಟಿಹಾಕಲು ಯತ್ನ!

ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದ ವೇಳೆ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಾಗ ಭರವಸೆ ನೀಡಿದ್ದು, ಭರವಸೆ ಈಡೇರಿಸುವುದಾಗಿ ನಂಬಿ ಪಕ್ಷಕ್ಕೆ ಮತ ಹಾಕಿದ್ದೇವೆ ಎಂದು ಮಹಿಳೆಯರು ಹೇಳಿದರು
ಬ್ಯಾಂಕ್ ಅಧಿಕಾರಿಯನ್ನು ಕಟ್ಟಿ ಹಾಕಲು ಯತ್ನಿಸಿದ ಮಹಿಳೆಯರು
ಬ್ಯಾಂಕ್ ಅಧಿಕಾರಿಯನ್ನು ಕಟ್ಟಿ ಹಾಕಲು ಯತ್ನಿಸಿದ ಮಹಿಳೆಯರು

ಕೋಲಾರ: ಸಾಲ ಮನ್ನಾ ಕುರಿತು ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಮುಳಬಾಗಲು ತಾಲೂಕಿನ ಬೈರುಕೂರು ಗ್ರಾಮದ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಶುಕ್ರವಾರ ಕೋಲಾರ ಡಿಸಿಸಿ ಬ್ಯಾಂಕ್ ಪ್ರತಿನಿಧಿಯನ್ನು ಕಟ್ಟಿಹಾಕಲು ಯತ್ನಿಸಿದ ಘಟನೆ ನಡೆದಿದೆ. ಮಹಿಳೆಯರು ಅಧಿಕಾರಿಯನ್ನು ಕಟ್ಟಿ ಹಾಕಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಈ ಹಿಂದೆ ಕೋಲಾರ ತಾಲೂಕಿನ ಕ್ಯಾಲನೂರಿನಲ್ಲಿರುವ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಬಾಕಿ ವಸೂಲಿ ಮಾಡಲು ಬಂದ ಡಿಸಿಸಿ ಬ್ಯಾಂಕ್‌ನ ಮತ್ತೊಬ್ಬ ಪ್ರತಿನಿಧಿಯನ್ನು ಗ್ರಾಮ ಬಿಟ್ಟು ಹೋಗುವಂತೆ  ಒತ್ತಾಯಿಸಿದ್ದರು. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಇಂತಹ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು, ಈಗ ಅಧಿಕಾರಕ್ಕೆ ಬಂದಿದೆ, ಹೀಗಾಗಿ  ನಾವು ಸಾಲವನ್ನು ಮರುಪಾವತಿ ಮಾಡುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ.

ಬೈರುಕೂರಿನಲ್ಲಿ ಡಿಸಿಸಿ ಬ್ಯಾಂಕ್ ಪ್ರತಿನಿಧಿ ನಾಗರಾಜ್ ಸಾಲ ಮರುಪಾವತಿ ಮಾಡಬೇಕಾದವರ ಪಟ್ಟಿಯೊಂದಿಗೆ ಗ್ರಾಮಕ್ಕೆ ಆಗಮಿಸಿದರು. ಆದರೆ ಸ್ವಸಹಾಯ ಸಂಘದ ಮಹಿಳೆಯರು ಆತನನ್ನು ಕಟ್ಟಿ ಹಾಕಲು ಹಗ್ಗಗಳೊಂದಿಗೆ ಆಗಮಿಸಿದರು. ಕಾಂಗ್ರೆಸ್ ನಾಯಕರು ಸಾಲ ಮನ್ನಾ ಭರವಸೆ ನೀಡಿದ್ದರಿಂದ ಮರುಪಾವತಿ ಮಾಡುವುದಿಲ್ಲ ಎಂದು ಘೋಷಣೆ ಕೂಗಿದರು.

ಗ್ರಾಮದ ಕೆಲವು ಪುರುಷರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು, ಆದರೆ ಮಹಿಳೆಯರು ಅವರ ವಿರುದ್ಧವೂ ತಿರುಗಿದರು. ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದ ವೇಳೆ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಾಗ ಭರವಸೆ ನೀಡಿದ್ದು, ಭರವಸೆ ಈಡೇರಿಸುವುದಾಗಿ ನಂಬಿ ಪಕ್ಷಕ್ಕೆ ಮತ ಹಾಕಿದ್ದೇವೆ ಎಂದು ಮಹಿಳೆಯರು ಹೇಳಿದರು.

ಇದು ಸಹಕಾರಿ ಕ್ಷೇತ್ರದ ಬ್ಯಾಂಕ್‌ಗೆ ದೊಡ್ಡ ಹೊಡೆತ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬೈಲಹಳ್ಳಿ ಗೋವಿಂದ ಗೌಡ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಸುಮಾರು ಶೇ. 70 ರಷ್ಟು ಸಾಲಗಾರರು ಮೊತ್ತವನ್ನು ಮರುಪಾವತಿಸಲು ನಿರಾಕರಿಸಿದರೆ, ಬ್ಯಾಂಕ್ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳಿಗೆ 700 ಕೋಟಿ ರೂ.ಸಾಲ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಈ ಮೊತ್ತ 2,000 ಕೋಟಿ ರೂ. ಇದೆ. ಸರ್ಕಾರ ಸಾಲ ಮನ್ನಾ ಮಾಡುತ್ತಿದ್ದರೆಸ್ವಸಹಾಯ ಸಂಘಗಳಿಂದ ಹಣ ಕೇಳುವುದು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com