ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಲು ರಾಯಚೂರಿನಲ್ಲಿ ಸೆಕ್ಷನ್ 144 ಜಾರಿ

ಉತ್ತರ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಡಳಿತ ಜೂನ್ 17ರಿಂದ 27ರವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಾಲುವೆ ಮೂಲಕ ನಗರಕ್ಕೆ ನೀರು ಹರಿಸುತ್ತಿದೆ.
ತುಂಗಭದ್ರ ಜಲಾಶಯ
ತುಂಗಭದ್ರ ಜಲಾಶಯ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಡಳಿತ ಜೂನ್ 17ರಿಂದ 27ರವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಾಲುವೆ ಮೂಲಕ ನಗರಕ್ಕೆ ನೀರು ಹರಿಸುತ್ತಿದೆ.

ತುಂಗಭದ್ರಾ ಅಣೆಕಟ್ಟಿನಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ (ಟಿಎಲ್‌ಬಿಸಿ) ನೀರು ಬಿಡುವ ಮುನ್ನವೇ ನಾಲೆಯಿಂದ ನೀರು ಹರಿಸುವುದನ್ನು ತಡೆಯಲು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪ್ರಸ್ತುತ ಕೃಷ್ಣಾ ನದಿಯಿಂದ ರಾಯಚೂರು ನಗರಕ್ಕೆ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಬಿಕ್ಕಟ್ಟು ನಿವಾರಿಸಲು ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅಣೆಕಟ್ಟಿಯಿಂದ ಬಿಡುಗಡೆಯಾಗುವ ನೀರು ಟಿಎಲ್‌ಬಿಸಿ ಮೂಲಕ ಸುಮಾರು 130 ಮೈಲುಗಳವರೆಗೆ ಹರಿಯುತ್ತದೆ. ಮೊದಲು ಬಂಗಾರಪ್ಪ ಕೆರೆಯಲ್ಲಿರುವ ಬ್ಯಾಲೆನ್ಸಿಂಗ್ ಜಲಾಶಯದಲ್ಲಿ ನೀರು ಸಂಗ್ರಹಗೊಂಡು ನಂತರ ರಾಂಪುರ ಕೆರೆ ಜಲಾಶಯಕ್ಕೆ ಹರಿಸಲಾಗುವುದು. ನಂತರ ರಾಯಚೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ನೀರು ಬಿಡಲಾಗುವುದು.

ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯ್ಕ ಮಾತನಾಡಿ, ಗಸ್ತು ತಿರುಗಲು ಎಂಜಿನಿಯರ್‌ಗಳನ್ನು ನಿಯೋಜಿಸಿದ್ದರೂ, ಜನರು ಗೇಜ್‌ಗಳನ್ನು ಬಳಸಿ ನೀರು ತಿರುಗಿಸುವ ಸಾಧ್ಯತೆಗಳಿವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com