ಅಕ್ರಮವಾಗಿ ಮರಗಳನ್ನು ಕಡಿದ ಆರೋಪ: ವಿರಾಜಪೇಟೆ ವಿಭಾಗದ ಡಿಸಿಎಫ್ ಆಗಿದ್ದ ಚಕ್ರಪಾಣಿ ಅಮಾನತು

ಕೋಟ್ಯಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದ ಆರೋಪದ ಮೇಲೆ ವಿರಾಜಪೇಟೆ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್), ಸದ್ಯ ಬೆಂಗಳೂರು ನಗರ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈ ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿ ಆದೇಶ ಹೊರಡಿಸಿದೆ.
ಅಮಾನತು
ಅಮಾನತು

ಬೆಂಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದ ಆರೋಪದ ಮೇಲೆ ವಿರಾಜಪೇಟೆ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ (ಡಿಸಿಎಫ್), ಸದ್ಯ ಬೆಂಗಳೂರು ನಗರ ವಿಭಾಗದಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈ ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿ ಆದೇಶ ಹೊರಡಿಸಿದೆ.

ಚಕ್ರಪಾಣಿ ಈ ಹಿಂದೆ ವಿರಾಜಪೇಟೆ ವಿಭಾಗದ ಡಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ವಿರುದ್ಧದ ಆರೋಪಗಳ ಹೊರತಾಗಿಯೂ ಅವರನ್ನು ನೇಮಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪರಿಸರ ಸಂರಕ್ಷಣಾವಾದಿಗಳು, ಕಾರ್ಯಕರ್ತರು ಮತ್ತು ತಜ್ಞರು ಪ್ರಶ್ನಿಸಿದ್ದರು.

ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಸರ್ವೆ ನಂ. 76/35 ಮತ್ತು 76/1ರಲ್ಲಿ ಅಕ್ರಮವಾಗಿ ಮರಗಳನ್ನು ಕಡಿದ ಪ್ರಕರಣವನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ. ಫೆಬ್ರುವರಿ 4, 2023 ರ ಪತ್ರದಲ್ಲಿ, ವಿವರವಾದ ತನಿಖೆಯ ನಂತರ ಅಧಿಕಾರಿಯು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ ಮತ್ತು ತೇಗದ ಮರಗಳನ್ನು ನೆಡುವ ನೆಪದಲ್ಲಿ, ಆಸ್ತಿ ಮಾಲೀಕರು ಮರಗಳಿಗೆ ಕೊಡಲಿಯೇಟು ನೀಡಿದ್ದಾರೆ ಎಂದು ತಿಳಿಸಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೇರಳದ ವಯನಾಡು ವನ್ಯಜೀವಿ ಅಭಯಾರಣ್ಯದಿಂದ 10 ಮೀಟರ್ ದೂರದಲ್ಲಿರುವ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದ ಪ್ರದೇಶದಲ್ಲಿದ್ದ ಬೃಹತ್ ಗಾತ್ರದ 66 ಮರಗಳನ್ನು ಕಡಿಯಲು ಅನುಮತಿ ಕೋರಿದ ದಾಖಲೆಯನ್ನು ಸೃಷ್ಟಿಸಲಾಗಿತ್ತು. ಬೋಗಸ್ ವರದಿ ಆಧರಿಸಿ, ಸ್ಥಳ ಪರಿಶೀಲಿಸದೆ ಮರಗಳನ್ನು ಕಡಿಯಲು ಚಕ್ರಪಾಣಿ ಅನುಮತಿ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ ದಳ) ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದರು. ಜಮೀನು ಮಾಲೀಕರಿಂದ ನಕಲಿ ಸಹಿ ಮಾಡಲಾಗಿದೆ ಎಂಬ ಅಂಶವೂ ಗಮನಕ್ಕೆ ಬಂದಿದೆ. ಸರ್ಕಾರದ ಮುದ್ರೆ, ಸಹಿಯನ್ನೂ ನಕಲಿ ಮಾಡಲಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com