ಊರಿಗೆ ಹೋಗಲು ಸಿಗದ ಬಸ್ಸು: ನಾನ್ ಸ್ಟಾಪ್ ಬಸ್​ಗೆ ಕಲ್ಲೆಸೆದು ಡ್ಯಾಮೇಜ್ ಮಾಡಿ ದಂಡ ಕಟ್ಟಿದ ಮಹಿಳೆ!

ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ 'ಶಕ್ತಿ ಯೋಜನೆ' ಜಾರಿಗೆ ಬಂದ ನಂತರ ಹಲವು ಮಹಿಳೆಯರಿಗೆ ಉಪಯೋಗವಾದರೂ ಹಲವು ಸಮಸ್ಯೆಗಳಾಗುತ್ತಿರುವ ಸುದ್ದಿಗಳು ರಾಜ್ಯದ ನಾನಾ ಭಾಗಗಳಿಂದ ಬರುತ್ತಿವೆ.
ಕಲ್ಲೆಸೆದು ಹಾನಿಗೀಡಾದ ಕಲ್ಯಾಣ ಕರ್ನಾಟಕ ಭಾಗದ ಬಸ್ಸು
ಕಲ್ಲೆಸೆದು ಹಾನಿಗೀಡಾದ ಕಲ್ಯಾಣ ಕರ್ನಾಟಕ ಭಾಗದ ಬಸ್ಸು

ಹೊಸಪೇಟೆ: ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ 'ಶಕ್ತಿ ಯೋಜನೆ' ಜಾರಿಗೆ ಬಂದ ನಂತರ ಹಲವು ಮಹಿಳೆಯರಿಗೆ ಉಪಯೋಗವಾದರೂ ಹಲವು ಸಮಸ್ಯೆಗಳಾಗುತ್ತಿರುವ ಸುದ್ದಿಗಳು ರಾಜ್ಯದ ನಾನಾ ಭಾಗಗಳಿಂದ ಬರುತ್ತಿವೆ.

ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪಗೊಂಡ ಮಹಿಳೆ ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಕಲ್ಲೆಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಲಿಂಗಾಪುರದಲ್ಲಿ ನಡೆದಿದೆ.

ಬಸ್ ಗೆ ಏಕೆ ಕಲ್ಲು ಹೊಡೆದೆ ಎಂದು ಬಸ್ಸಿನ ಚಾಲಕ ಮತ್ತು ನಿರ್ವಾಹಕ ಕೇಳಿದ್ದಕ್ಕೆ, ಯಾವ ಬಸ್ಸು ನಿಲ್ಲಿಸದಿದ್ದರೆ ನಾವು ಪ್ರಯಾಣ ಮಾಡುವುದು ಹೇಗೆ ಎಂದು ಮಹಿಳೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಬಸ್ ಡ್ಯಾಮೇಜ್ ಹಿನ್ನೆಲೆ 5000 ರೂಪಾಯಿ ದಂಡ ಕಟ್ಟುವಂತೆ ಬಸ್ ಡಿಪೋ ಮ್ಯಾನೇಜರ್ ಖಡಕ್ ಎಚ್ಚರಿಕೆ ಕೊಟ್ಟರು.

ಬಳಿಕ ಮಹಿಳೆ ಪರಿಪರಿಯಾಗಿ ಬೇಡಿಕೊಂಡು 2 ಸಾವಿರ ರೂಪಾಯಿ ದಂಡ ಕಟ್ಟಿ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com