ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿ ವಾಸ!

ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ. ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ .
ಸಿಂಹ ಬಾಲದ ಸಿಂಗಳಿಕಗಳು
ಸಿಂಹ ಬಾಲದ ಸಿಂಗಳಿಕಗಳು

ಕಾರವಾರ: ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ. ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ .

ಹಿಂದಿನ ಅಧ್ಯಯನಕ್ಕೆ ಹೋಲಿಸಿದರೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ವ್ಯಾಪಿಸಿರುವ ಶರಾವತಿ ಕಣಿವೆ ಪ್ರದೇಶದಲ್ಲಿ ಈ ಜಾತಿಯ ಸಿಂಗಳಿಕಗಳಿದ್ದು, ಇವುಗಳ ಸಂರಕ್ಷಣೆಗೆ ಅಧ್ಯಯನದಿಂದ ದೊಡ್ಡ ಉತ್ತೇಜನ ಸಿಕ್ಕಿದಂತಾಗಿದೆ.  2015ರಲ್ಲಿ ಮಾಡಲಾದ ಅಧ್ಯಯನ ಪ್ರಕಾರ 600 ಸಿಂಗಳಿಕಗಳು 30 ಗುಂಪುಗಳಲ್ಲಿ ವಾಸಿಸುತ್ತಿದ್ದವು. 

ಇತ್ತೀಚಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿರ್ಸಿ-ಹೊನ್ನಾವರ ಮತ್ತು ಶಿವಮೊಗ್ಗ ಅರಣ್ಯ ವಿಭಾಗಗಳಲ್ಲಿ ಅಧ್ಯಯನ ನಡೆಸಲಾಗಿತ್ತು. ಸ್ವಯಂ ಸೇವಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪಶ್ಚಿಮ ಘಟ್ಟ ಪ್ರದೇಶದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ  ನಡೆಯುವ ಮೂಲಕ ಅಧ್ಯಯನ ನಡೆಸಿದ್ದಾರೆ.

ಶಿರಸಿ ಅರಣ್ಯ ವಿಭಾಗದ ಕ್ಯಾದಗಿ ಮತ್ತು ಸಿದ್ದಾಪುರ ಅರಣ್ಯ ವ್ಯಾಪ್ತಿ ಮತ್ತು  ಹೊನ್ನಾವರ ಅರಣ್ಯ ವಿಭಾಗದಲ್ಲಿ ಹೊನ್ನಾವರ, ಗೇರುಸೊಪ್ಪ, ಭಟ್ಕಳ ಮತ್ತು ಕುಮಟಾ ಅರಣ್ಯ ವ್ಯಾಪ್ತಿ ಹಾಗೂ ಶಿವಮೊಗ್ಗ ವನ್ಯಜೀವಿ ವಿಭಾಗದ ಕೊಗಾರ್ ಮತ್ತು ಕಾರ್ಗಲ್ ಅರಣ್ಯ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿದೆ ಎಂದು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ತಿಳಿಸಿದ್ದಾರೆ. 

ಶರಾವತಿಯ ಉತ್ತರಕ್ಕೆ ಹೋಲಿಸಿದರೆ ಉತ್ತರ ಕನ್ನಡ  ಸಿಂಹ ಬಾಲದ ಸಿಂಗಳಿಕಗಳ ಸಂರಕ್ಷಣೆಗೆ ಮಹತ್ವದ ಮತ್ತು ಸಂಭಾವ್ಯ ತಾಣ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಎಸ್ ಎಸಿಒಎನ್ ಹಿರಿಯ ಪ್ರಧಾನ ವಿಜ್ಞಾನಿ ಎಚ್.ಎನ್.  ಕುಮಾರ್ ಹೇಳಿದ್ದಾರೆ. ಗೇರುಸೊಪ್ಪಾ ಮತ್ತು ಇತರ ಸ್ಥಳಗಳ ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗುವ ಹೈ-ಟೆನ್ಷನ್ ಟ್ರಾನ್ಸ್ಮಿಷನ್ ಲೈನ್‌ಗಳು ಮತ್ತಿತರ ಇಲಾಖೆಗಳ ಕ್ರಮಗಳು ಸಿಂಗಳಿಕಗಳ ಸಂರಕ್ಷಣೆಗೆ ನೆರವಾಗಿವೆ ಎಂದು ಅವರು ಹೇಳಿದ್ದಾರೆ.

ಕೆನರಾ ಮತ್ತು ಶಿವಮೊಗ್ಗ ಎರಡೂ ವಲಯಗಳನ್ನು ಒಳಗೊಂಡಿರುವ ಶರಾವತಿ ಕಣಿವೆ ಅಭಯಾರಣ್ಯದಲ್ಲಿ ಇದೇ ಮೊದಲ ಬಾರಿಗೆ ಸಿಂಗಳಿಕ ಕುರಿತು ಅಧ್ಯಯನ ನಡೆಸಲಾಗಿದೆ. ಈ ಹಿಂದೆ ಕೆನರಾ ಸರ್ಕಲ್ ನಲ್ಲಿ ಮಾತ್ರ ಅಧ್ಯಯನ ನಡೆಸಲಾಗಿತ್ತು. ಸಿಂಗಳಿಕಗಳು ಘಟ್ಟದ ಮೇಲಿನ ಭಾಗವು ಅಲ್ಲದ, ಅತಿ ಕೆಳಗಿನ ಭಾಗವು ಅಲ್ಲದೆ, ಮದ್ಯೆ  ಭಾಗದಇಳಿಜಾರಿನ ಬೆಟ್ಟಗಳಲ್ಲಿ ಇವು ಹೆಚ್ಚಾಗಿ ವಾಸಿಸುತ್ತವೆ. ನೆಲದ ಮೇಲೆ ಅಪರೂಪವಾಗಿ ಕಂಡುಬರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com