ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಬಗ್ಗೆ ಮಾಹಿತಿ ನೀಡಿದ ಅಳಿಯ ಡಾ ಸಿ ಎನ್ ಮಂಜುನಾಥ್

ಮಾಜಿ ಪ್ರಧಾನಿ ದೇವೇಗೌಡರು ಚೆನ್ನಾಗಿದ್ದಾರೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಹಲವು ದಿನಗಳಿಂದ ಮಂಡಿನೋವು, ಕಾಲುನೋವಿನಿಂದ ಬಳಲುತ್ತಿದ್ದಾರೆ. ದಿನಂಪ್ರತಿಯ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಅಳಿಯ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.
Published on

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಚೆನ್ನಾಗಿದ್ದಾರೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಹಲವು ದಿನಗಳಿಂದ ಮಂಡಿನೋವು, ಕಾಲುನೋವಿನಿಂದ ಬಳಲುತ್ತಿದ್ದಾರೆ. ದಿನಂಪ್ರತಿಯ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಅಳಿಯ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ತಿಳಿಸಿದ್ದಾರೆ.

ದೇವೇಗೌಡರಿಗೆ ಹಲವು ದಿನಗಳಿಂದ ಮಂಡಿನೋವು, ಕಾಲು ಊತ ಇದೆ. ಅದಕ್ಕೆ ವಿಸ್ತಾರವಾದ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಮರ್ಜೆನ್ಸಿ ಪರಿಸ್ಥಿತಿಯಿಲ್ಲ, ವಾರ್ಡಲ್ಲಿದ್ದಾರೆ, ಊಟ ಮಾಡುತ್ತಿದ್ದಾರೆ, ಆರಾಮಾಗಿದ್ದಾರೆ, ಇನ್ನು ಎರಡು-ಮೂರು ದಿನಗಳಲ್ಲಿ ಮನೆಗೆ ವಾಪಸ್ಸಾಗುತ್ತಾರೆ ಎಂದರು. 

ಈಗ ಅವರಿಗೆ ವೈದ್ಯರು ಬಿಪಿ, ಡಯಾಬಿಟಿಸ್ ಗೆ, ಕಾಲು ಊತಕ್ಕೆ ಚಿಕಿತ್ಸೆ ನೀಡುತ್ತಿದ್ದಾರೆ. ನಿನ್ನೆ ಆರೋಗ್ಯ ತಪಾಸಣೆಗೆಂದು ನಿನ್ನೆ ಸಾಯಂಕಾಲ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದ ವೇಳೆ ವೈದ್ಯರು ಪರೀಕ್ಷಿಸಿ ಒಂದು ವಾರ ವಿಶ್ರಾಂತಿ ಇರುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com