ಆರೋಗ್ಯವಾಗಿದ್ದೇನೆ, ಆತಂಕ ಬೇಡ, ಕೆಲವೇ ದಿನಗಳಲ್ಲಿ ಮನೆಗೆ ವಾಪಸ್: ಹೆಚ್ ಡಿ ದೇವೇಗೌಡ ಟ್ವೀಟ್
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಟ್ವೀಟ್ ಖಾತೆ ಮೂಲಕ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
Published: 28th February 2023 09:22 PM | Last Updated: 01st March 2023 04:59 PM | A+A A-

ಹೆಚ್ ಡಿ ದೇವೇಗೌಡ
ಬೆಂಗಳೂರು:ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಟ್ವೀಟ್ ಖಾತೆ ಮೂಲಕ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ನಾನು ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಆತಾಂಕ ಅಥವ ಭಯಪಡುವ ಅವಶ್ಯಕತೆ ಇಲ್ಲ. ಕೆಲವೇ ದಿನಗಳಲ್ಲಿ ಮನೆಗೆ ವಾಪಸ್ಸಾಗುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ.
I have come to the hospital for a routine check up. There is no need for any panic or anxiety. I will be back home in a couple of days.
— H D Devegowda (@H_D_Devegowda) February 28, 2023
ಇದನ್ನೂ ಓದಿ: ನಮ್ಮಪ್ಪನ ಜೀವ ಈ ಮಣ್ಣಿಗೆ ಹೋಗೋದರೊಳಗೆ...? ದೇವೇಗೌಡರ ಕೊನೆ ಆಸೆ ಬಿಚ್ಚಿಟ್ಟು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಣ್ಣೀರು!
ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಅಲ್ಲದೆ, ನನಗೆ ದೇವೇಗೌಡ ಅವರ ಆರೋಗ್ಯವೇ ಮುಖ್ಯ. ಈ ವಿಚಾರವಾಗಿ ಅವರಿಗೆ ಹೆಚ್ಚಿನ ಹೊರೆ ನೀಡುವುದು ಇಷ್ಟವಿಲ್ಲ. ದೇವೇಗೌಡರ ಆರೋಗ್ಯ ಸ್ಥಿತಿ ಹೇಗಿದೆ ಅಂತ ನನಗೆ ಮಾತ್ರ ಗೊತ್ತು. ಬೇರೆ ಯಾರಿಗೂ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.