ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು

ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು.
ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರು ವಿದೇಶಿ ಪ್ರವಾಸಿಗರು ಬುಧವಾರ ಹೋಳಿ ಆಚರಿಸಿದರು.
ಹಂಪಿಯ ವಿರೂಪಾಕ್ಷ ದೇವಸ್ಥಾನದ ಎದುರು ವಿದೇಶಿ ಪ್ರವಾಸಿಗರು ಬುಧವಾರ ಹೋಳಿ ಆಚರಿಸಿದರು.

ವಿಜಯನಗರ: ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು.

ವಿರೂಪಾಕ್ಷ ದೇವಾಲಯದ ಮುಂದೆ ಪ್ರತೀ ವರ್ಷ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಸುಮಾರು 300 ಮಂದಿ ವಿದೇಶಿ ಪ್ರವಾಸಿಗರು ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಮಾರ್ಗದರ್ಶಕರು, ಛಾಯಾಗ್ರಾಹಕರು ಮತ್ತು ಮಾರಾಟಗಾರರು ಹೋಳಿ ಆಚರಿಸಿದ್ದು, ತಮ್ಮ ಸಂಭ್ರಮದ ಜೊತೆಗೆ ಪ್ರವಾಸಿಗರನ್ನೂ ಸೇರಿಸಿಕೊಂಡರು.ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದ ನಂತರ ಹೋಳಿ ಹಬ್ಬ ಆಚರಣೆ ಆರಂಭಗೊಂಡವು.

'ಈ ಬಾರಿ ಹೋಳಿ ಹಬ್ಬಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಹಂಪಿ ಹೋಳಿ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ’ ಎಂದು ಗೈಡ್ ವೊಬ್ಬರು ಹೇಳಿದರು.

ದೇಶೀ ಪ್ರವಾಸಿಗರು ಕೂಡ ಹಂಪಿಯಲ್ಲಿ ಹೋಳಿ ಆಚರಣೆ ಮಾಡಲು ಆರಂಭಿಸಿದ್ದಾರೆ. ವಿರೂಪಾಕ್ಷ ದೇವಾಲಯದ ಸಂಕೀರ್ಣದಲ್ಲಿ ಮಹಿಳೆಯರು ಬಣ್ಣಗಳನ್ನು ಎರಚುವ ಶಿಲ್ಪಗಳಿವೆ. ಹೋಳಿ ಅಷ್ಟೇ ಅಲ್ಲದೆ, ದಸರಾ ಹಾಗೂ ದೀಪಾವಳಿಯನ್ನೂ ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೋಳಿ ಹಬ್ಬದ ಆಚರಣೆ ಬಹಳ ಸಂತೋಷವನ್ನು ತಂದಿದೆ. ಮತ್ತೆ ಮತ್ತೆ ಇಲ್ಲಿ ಬರಬೇಕೆಂದು ಎನಿಸುತ್ತಿದೆ ಎಂದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ವಿದೇಶಿ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಹಂಪಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಆದರೆ, ಹೋಳಿ ಆಚರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com