ಮೊಬೈಲ್ ಕೊಡಿಸುವುದಾಗಿ ಭರವಸೆ ನೀಡಿ ಹುಬ್ಬಳ್ಳಿಯ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ!

ಹುಬ್ಬಳ್ಳಿ ನಗರದಲ್ಲಿ ದುಷ್ಕರ್ಮಿಗಳ ಗುಂಪೊಂದು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಗುರುವಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ದುಷ್ಕರ್ಮಿಗಳ ಗುಂಪೊಂದು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಗುರುವಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನಾಲ್ವರು ಆರೋಪಿಗಳು ಬಾಲಕಿಗೆ ಮೊಬೈಲ್ ಫೋನ್ ಖರೀದಿಸುವುದಾಗಿ ಭರವಸೆ ನೀಡಿ ತಮ್ಮ ಬಲೆಗೆ ಬೀಳಿಸಿಕೊಂಡಿದ್ದಾರೆ.

ಬಾಲಕಿಯನ್ನು ಆಕೆಯ ಊರಿನಿಂದ ಹುಬ್ಬಳ್ಳಿಗೆ ಕರೆಸಲಾಗಿತ್ತು. ಅಲ್ಲಿಂದ ಹೊರ ವರ್ತುಲ ರಸ್ತೆಗೆ ಬೈಕ್‌ನಲ್ಲಿ ಕರೆದೊಯ್ದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಅಪರಾಧ ಎಸಗಿದ್ದಾರೆ.

ಸಂತ್ರಸ್ತೆ ಸ್ವತಃ ಗೋಕುಲ ಠಾಣೆಗೆ ಬಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾಳೆ.

ಆಕೆಯ ದೂರಿನ ಪ್ರಕಾರ, ಇಬ್ಬರು ಆರೋಪಿಗಳು ಸಂತ್ರಸ್ತೆಗೆ ಪರಿಚಿತರು ಮತ್ತು ಇನ್ನೊಬ್ಬ ಆರೋಪಿಯು ಆಕೆಯ ಇನ್ನೊಬ್ಬ ಸ್ನೇಹಿತನ ಮೂಲಕ ಪರಿಚಯವಾಗಿದ್ದ. 

ಸಂತ್ರಸ್ತೆಯನ್ನು ಮೊದಲು ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಗೆ ಆರೋಪಿಗಳು ಕಪಾಳಮೋಕ್ಷ ಮಾಡಿದ್ದಾರೆ. ಸುಮ್ಮನಿರುವಂತೆ ಮತ್ತು ಆಕ್ಷೇಪಿಸದಂತೆ ಬೆದರಿಕೆ ಹಾಕಿದ್ದಾರೆ. ನಂತರ ಆಕೆಯನ್ನು ಹೊರ ವರ್ತುಲ ರಸ್ತೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ತೆ ಇಬ್ಬರನ್ನು ಗುರುತಿಸಿದ್ದು, ಇತರರನ್ನೂ ಗುರುತಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com