ಬೆಳಗಾವಿ: ಆಗಸದಲ್ಲಿ ಹಾರಿಬಂದ ವಿಚಿತ್ರ ಬಲೂನ್, ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿ
ಬೆಳಗಾವಿ: ಬೆಳಗಾವಿಯ ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ ಗ್ರಾಮದ ಜಮೀನೊಂದರಲ್ಲಿ ವಿಚಿತ್ರ ಬಲೂನ್'ವೊಂದು ಪತ್ತೆಯಾಗಿದ್ದು, ಇದನ್ನು ಕಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಜಮೀನಿನಲ್ಲಿ ಬಿದ್ದ ದೊಡ್ಡ ಬಿಳಿ ಬಣ್ಣದ ಬಲೂನ್'ನ್ನು ಗ್ರಾಮಸ್ಥರು ನೋಡಿದ್ದಾರೆ. ಬಳಿಕ ಅದರಲ್ಲಿ ಕೆಲವು ಎಲೆಕ್ಟ್ರಿಕ್ ಡಿವೈಸ್ಗಳು ಪತ್ತೆಯಾಗಿವೆ. ಇದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಪೊಲೀಸರಿಗೆ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಇದರಲ್ಲಿ ಯಾವುದೇ ರೀತಿಯ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ. ನಂತರ ಬೆಳಗಾವಿಯ ವಿಜ್ಞಾನ ಕೇಂದ್ರಕ್ಕೆ ತಂದು ಪರಿಶೀಲನೆ ನಡೆಸಿದ್ದಾರೆ.
ಹವಾಮಾನ ಪರಿಸ್ಥಿತಿ ಪರಿಶೀಲನೆಗಾಗಿ ಇದನ್ನು ಗೋವಾ ವಿಜ್ಞಾನಿಗಲು ಬಿಟ್ಟಿರುವ ಸಾಧ್ಯತೆಗಳಿವೆ ಇದೆ. ಒಂದು ಬಾರಿ ಹಾರಿಸಿದರೆ ಮತ್ತೆ ಮೂಲ ಸ್ಥಳಕ್ಕೆ ತರಿಸಿಕೊಳ್ಳುವುದಿಲ್ಲ. ಸಾಧ್ಯವಿದ್ದಷ್ಟು ದೂರ ಹಾರಿದ ಬಳಿಕ ಬಲೂನ್ ತಾನಾಗಿಯೇ ಕೆಳಗೆ ಬೀಳುತ್ತದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ