ಆಹಾರ ಸಾಮಗ್ರಿಗಳ ಮೂಟೆ
ಆಹಾರ ಸಾಮಗ್ರಿಗಳ ಮೂಟೆ

ಯುಗಾದಿ ಹೊತ್ತಿನಲ್ಲಿ ಮತದಾರರಿಗೆ ಹಂಚಲು ಆಹಾರ ಧಾನ್ಯ ದಾಸ್ತಾನು: ಕೆಜಿಎಫ್ ಶಾಸಕಿ ಶಶಿಧರ್ ಸೇರಿ ಮೂವರ ವಿರುದ್ಧ ಕೇಸು ದಾಖಲು

ಆಹಾರ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸರು ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ದಾಳಿ ನಡೆಸಿ ಕೆಜಿಎಫ್ ಶಾಸಕಿ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್ ಮುನಿಯಪ್ಪ ಅವರ ಪುತ್ರಿ ರೂಪಕಲಾ ಎಂ ಶಶಿಧರ್ ಅವರ ಭಾವಚಿತ್ರಗಳನ್ನು ಒಳಗೊಂಡಿದ್ದ ಅಕ್ಕಿ, ಬೇಳೆ, ಬೆಲ್ಲ, ಮೈದಾ ಹಿಟ್ಟು ತುಂಬಿದ ಸಾವಿರಾರು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಲಾರ: ಆಹಾರ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸರು ಮೊನ್ನೆ ಗುರುವಾರ ರಾತ್ರಿ ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ದಾಳಿ ನಡೆಸಿ ಕೆಜಿಎಫ್ ಶಾಸಕಿ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್ ಮುನಿಯಪ್ಪ ಅವರ ಪುತ್ರಿ ರೂಪಕಲಾ ಎಂ ಶಶಿಧರ್ ಅವರ ಭಾವಚಿತ್ರಗಳನ್ನು ಒಳಗೊಂಡಿದ್ದ ಅಕ್ಕಿ, ಬೇಳೆ, ಬೆಲ್ಲ, ಮೈದಾ ಹಿಟ್ಟು ತುಂಬಿದ ಸಾವಿರಾರು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಮದ ಶ್ರೀನಾಥ್ ಎಂಬುವವರ ತೋಟದಲ್ಲಿ ಈ ಚೀಲಗಳು ಪತ್ತೆಯಾಗಿವೆ. ಚೀಲದಲ್ಲಿ 4 ಕೆ ಜಿ ಅಕ್ಕಿ, 1 ಕೆಜಿ ಬೆಲ್ಲ, 900 ಗ್ರಾಂ ತೊಗರಿಬೇಳೆ, 900 ಗ್ರಾಮ ಕಡಲೆಬೇಳೆ, 1 ಕೆ ಜಿ ಮೈದಾ ಹಿಟ್ಟು ಇಡಲಾಗಿತ್ತು. ಇಂತಹ 3,066 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳನ್ನು ಮನೆ, ಶೆಡ್, ಅಂಗಳದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಇವುಗಳ ಒಟ್ಟಾರೆ ಮೌಲ್ಯ ಸುಮಾರು 50 ಲಕ್ಷ ಇರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಚೀಲದ ಮೇಲೆ ಯುಗಾದಿ ಹಬ್ಬದ ಶುಭಾಶಯಗಳು ಎಂದು ಬರೆಯಲಾಗಿತ್ತು. ಯುಗಾದಿ ಸಂದರ್ಭದಲ್ಲಿ ಜನರಿಗೆ, ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಹಂಚಲು ಕಿಟ್ ಸಂಗ್ರಹಿಸಿಟ್ಟಿದ್ದೆವು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದ್ದಾರೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬ್ಯಾಲಹಳ್ಳಿಯ ಶ್ರೀನಾಥ್, ಶಾಸಕಿ ರೂಪಾ ಶಶಿಧರ್, ದಾಸ್ತಾನು ಇರಿಸಿದ್ದ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com