ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನರೆವೇರಿಸಿ, ಉದ್ಘಾಟನೆ ಮಾಡಿದ ಮೊದಲ ಪ್ರಧಾನಿ ಎಂದರೆ ಅದು ಮೋದಿ: ಪ್ರಹ್ಲಾದ್ ಜೋಶಿ

ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆಯಷ್ಟೇ ಅಲ್ಲದೆ, ಉದ್ಘಾಟನೆಯನ್ನೂ ಮಾಡಿದ ಪ್ರಧಾನಿಯೊಬ್ಬರು ದೇಶಕ್ಕೆ ಪ್ರಥಮ ಬಾರಿಗೆ ಸಿಕ್ಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.
ಐಐಟಿ-ಧಾರವಾಡದ ನಿರ್ದೇಶಕ ಡಾ ವೆಂಕಪ್ಪಯ್ಯ ದೇಸಾಯಿ ಅವರು ಭಾನುವಾರ ಧಾರವಾಡದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಐಐಟಿ ಧಾರವಾಡದ ಹೊಸ ಕ್ಯಾಂಪಸ್‌ನ ವಿನ್ಯಾಸವನ್ನು ವಿವರಿಸಿದರು.
ಐಐಟಿ-ಧಾರವಾಡದ ನಿರ್ದೇಶಕ ಡಾ ವೆಂಕಪ್ಪಯ್ಯ ದೇಸಾಯಿ ಅವರು ಭಾನುವಾರ ಧಾರವಾಡದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಐಐಟಿ ಧಾರವಾಡದ ಹೊಸ ಕ್ಯಾಂಪಸ್‌ನ ವಿನ್ಯಾಸವನ್ನು ವಿವರಿಸಿದರು.
Updated on

ಧಾರವಾಡ: ತಮ್ಮ ಅಧಿಕಾರಾವಧಿಯಲ್ಲಿ ಯೋಜನೆಗೆ ಶಂಕುಸ್ಥಾಪನೆಯಷ್ಟೇ ಅಲ್ಲದೆ, ಉದ್ಘಾಟನೆಯನ್ನೂ ಮಾಡಿದ ಪ್ರಧಾನಿಯೊಬ್ಬರು ದೇಶಕ್ಕೆ ಪ್ರಥಮ ಬಾರಿಗೆ ಸಿಕ್ಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.

ನೂತನ ಐಐಟಿ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಹಿಂದಿನ ಸರ್ಕಾರಗಳು ಹೆಚ್ಚು ಮಾತನಾಡಿದರೂ ಏನೂ ಮಾಡಲಿಲ್ಲ. ಬಿಜೆಪಿ ಸರ್ಕಾರವು ಬಡತನ ನಿರ್ಮೂಲನೆ, ರಾಷ್ಟ್ರೀಯ ಭದ್ರತೆ ಮತ್ತು ಪಾರದರ್ಶಕ ಆಡಳಿತವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಅನೇಕ ರಾಜಕೀಯ ಮುಖಂಡರು ನವೀಕರಿಸಿದ ಐಐಟಿ ಧಾರವಾಡ ಕ್ಯಾಂಪಸ್‌ನ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಆದರೆ, ಅವರ ಹೇಳಿಕೆಗಳು ಆಧಾರರಹಿತವಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಳೆದ 35 ವರ್ಷಗಳಲ್ಲಿ ರಾಜ್ಯ ಇಷ್ಟೊಂದು ಜನಸಂದಣಿಯನ್ನು ಕಂಡಿರಲಿಲ್ಲ. ಐಐಟಿ ಕ್ಯಾಂಪಸ್‌ನ ಉದ್ಘಾಟನೆಯು ಹಲವು ವರ್ಷಗಳಾದರೂ ಸ್ಮರಿಸುವಂತಿರುತ್ತದೆ. ಜನರಿಗೆ ಉದ್ಯೋಗ ನೀಡುವಲ್ಲಿ ಉನ್ನತ ಸ್ಥಾನದಲ್ಲಿರುವ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರ 35 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಡಬಲ್ ಇಂಜಿನ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಮಿನುಗುತ್ತಿದೆ. ಸಂಪರ್ಕ ಕಲ್ಪಿಸುವುದು, ಕೈಗಾರಿಕೀಕರಣಕ್ಕೆ ಒತ್ತು ನೀಡುವುದು, ಹಳಿಗಳ ದ್ವಿಗುಣಗೊಳಿಸುವುದು ಮತ್ತು ಮೂಲಸೌಕರ್ಯಗಳ ನಿರ್ಮಾಣದಂತಹ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದು ತ್ವರಿತ ಗತಿಯಲ್ಲಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬಿಜೆಪಿ ನಾಯಕರು ಕೆಲಸ ಮಾಡುವುದಿಲ್ಲ. ಹೊಸ ಸವಾಲುಗಳನ್ನು ಎದುರಿಸಲು ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸಲು ಹೆಚ್ಚು ಗಮನಹರಿಸಿದ್ದೇವೆ. ಅದರಲ್ಲಿ ಐಐಟಿ ಕೂಡ ಒಂದಾಗಿದೆ. ಇದು ಹೊಸ ಪೀಳಿಗೆಗೆ ಎಂಜಿನಿಯರಿಂಗ್, ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಎತ್ತರ ಹೋಗಲು, ಸಾಧಿಸಲು ಸಹಾಯ ಮಾಡುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com