SC/ST ಮೀಸಲಾತಿ ಹೆಚ್ಚಳ: ವಿಪಕ್ಷಗಳ ಆರೋಪಗಳ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿರುವ ರಾಜ್ಯ ಸರಕಾರ, ಆದೇಶದಂತೆ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿರುವ ರಾಜ್ಯ ಸರಕಾರ, ಆದೇಶದಂತೆ ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸುವ ಮತ್ತು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ತನ್ನ ನಿರ್ಧಾರವನ್ನು ಜಾರಿಗೆ ತರಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ಸಿಎಂ ತಳ್ಳಿಹಾಕಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್‌ಗೆ ಸೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಕಾಂಗ್ರೆಸ್ ನಾಯಕರಿಗೆ ಸರ್ಕಾರವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಗರದಲ್ಲಿ ನಿನ್ನೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ ಮಾಡಿದರು. ಇದೇ ಸಮಯದಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ' ಶಕ್ತಿ ನಿಮ್ಮ ಒಳಗಡೆ ಇದೆ.‌ ನೀವು ಏನು ಬೇಕಾದರು ಮಾಡಬಲ್ಲಿರಿ' ಎಂದಿದ್ದಾರೆ. ಮನಸ್ಸಿನಲ್ಲಿ ಸಂಕಲ್ಪ ಸಾಧಿಸುವ ಛಲ‌ ಇದ್ದರೆ‌ ಏನಾದರೂ ಸಾಧಿಸಬಹುದು. ನಿರಂತರ ಪ್ರಯತ್ನ ವಿದ್ದರೆ ಯಾವುದೂ ಅಸಾಧ್ಯವಲ್ಲ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 12 ಸಾವಿರ ಯುವ ಸಂಘಗಳನ್ನು ರಚಿಸಿ ಅವರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಗಳಾಗಳು ನೆರವು ನೀಡಲಾಗುತ್ತಿದೆ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈ ಯಾಗಬೇಕು. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ಗ್ರಾಮೀಣ ಭಾಗದ ಯುವಕರು ನಿರುದ್ಯೋಗಗಳಾಗಿದ್ದು ಅಲ್ಲಿಯೇ ಸಂಘ ರಚಿಸಿ ಉತ್ಪಾದನೆ ಮಾಡಿದರೆ, ಅವರು ಈ ನಾಡು ಕಟ್ಟಲು ಮುಂದಾಗುತ್ತಾರೆ. ಗ್ರಾಮೀಣ ಭಾಗದ ಯುವಕರು ಕೆಲಸವಿಲ್ಲದೇ ಇರಬಾರದು. ಎಲ್ಲರಿಗೆ ವಿದ್ಯೆ, ಎಲ್ಲರ ಕೈಗಳಿಗೆ ಕೆಲಸ ಕೊಡಬೇಕು. ಅವರು ದುಡಿಮೆ ಮಾಡಿ ಉತ್ತಮ ಚಾರಿತ್ರ್ಯ ವಂತರಾಗಿತ್ತಾರೆ.ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ ಎಂದು ತಿಳಿಸಿದರು.

ಆಟೊ ಚಾಲಕ ಬಾಂಧವರು ಹಗಲಿರುಳು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ 2.5 ಲಕ್ಷ ಆಟೊ ಚಾಲಕರಿದ್ದಾರೆ. ಅವರಿಗೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ‌ ಜಾರಿಗೆ ತರಲಾಗಿದೆ. 15 ಸಾವಿರ ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಲಾಗಿದೆ. ಶಾಲಾ/ ಕಾಲೇಜು ಪ್ರವೇಶ ಪ್ರಮಾಣ ಪತ್ರ ನೀಡುವವರಿಗೆ 2500 ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ನೀಡಲಾಗುವುದು. ವಿದ್ಯಾನಿಧಿ ಯೋಜನೆಯಿಂದ 11 ಲಕ್ಷ ರೈತರು, ಮೀನುಗಾರರು, ನೇಕಾರರ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಇದೇವೇಳೆ ಮುಖ್ಯಮಂತ್ರಿಗಳು ಪುಣ್ಯಕೋಟಿ’ ಗೋವು ದತ್ತು ಸ್ವೀಕಾರ ಯೋಜನೆಗೂ ಚಾಲನೆ ನೀಡಿದರು.

ರಾಜ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ದೇಶದಲ್ಲೇ ಇದು ಮೊದಲ ಪ್ರಯೋಗವಾಗಿದೆ, ಇಲ್ಲಿ ಗೋವುಗಳಿಗೆ ಮೇವು, ಆರೈಕೆ ಹಾಗೂ ಆಶ್ರಯ ನೀಡಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com