ಮತ ಎಣಿಕೆಗೆ 2 ದಿನಾ ಬೇಕಾ? ಎಂದಿದ್ದಕ್ಕೆ ಅದೆಷ್ಟು ಕಾಮೆಂಟ್; ಕುದುರೆ ವ್ಯಾಪಾರದ ಬಗ್ಗೆ ಮಾತಾಡಿ ನೋಡೋಣ ಎಂದ ಉಪೇಂದ್ರ

ಮತದಾನ ಹಾಗೂ  ಮತ ಎಣಿಕೆಗೆ 2 ದಿನಗಳ ಅಂತರ ಇರುವ  ಬಗ್ಗೆ ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದು ವ್ಯಾಪಕ ಚರ್ಚೆಯಾಗುತ್ತಿದೆ. 
ಉಪೇಂದ್ರ
ಉಪೇಂದ್ರ

ಬೆಂಗಳೂರು: ಮತದಾನ ಹಾಗೂ  ಮತ ಎಣಿಕೆಗೆ 2 ದಿನಗಳ ಅಂತರ ಇರುವ  ಬಗ್ಗೆ ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದು ವ್ಯಾಪಕ ಚರ್ಚೆಯಾಗುತ್ತಿದೆ. 

ನಟ ಉಪೇಂದ್ರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಸಾಕಷ್ಟು ಮಂದಿ, ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕ್ರಿಯೆ ಇರುವುದೇ ಹೀಗೆ... ಮತದಾನದ ಬಳಿಕ ಮತ ಎಣಿಕೆಗೆ ಅಷ್ಟು ಸಮಯ ಅಗತ್ಯವಿದೆ ಎಂದು ಹೇಳಿದ್ದರೆ, ಇನ್ನೂ ಕೆಲವು ಮಂದಿ ಟೀಕಿಸಿದ್ದಾರೆ. 

ತಮ್ಮ ಪೋಸ್ಟ್ ಗೆ ಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪೇಂದ್ರ, 2 ದಿನ ಬೇಕಾ ? ಗೊತ್ತಿಲ್ಲ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೆಕ್ಕೇ ಏನು ಕಾಮೆಂಟ್ ಗಳು, ಇದೇ ರೀತಿ ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಎಂದು ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com