ಕರಗ ಉತ್ಸವಕ್ಕೆ ಸಕಲ ಸಿದ್ಧತೆ; ಹಿಂದೂ ಸಂಘಟನೆಗಳ ಆಕ್ಷೇಪದ ನಡುವೆಯೂ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯ ಪಾಲನೆ

ಬುಧವಾರ ರಾತ್ರಿ ನಡೆಯುವ ಐತಿಹಾಸಿಕ ಕರಗ ಉತ್ಸವದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಸಂಕೇತಿಸುವ ಪುರಾತನ ಆಚರಣೆಯನ್ನು ಈ ವರ್ಷವೂ ಅನುಸರಿಸಲಾಗುವುದು.
ಕರಗ
ಕರಗ

ಬೆಂಗಳೂರು: ಬುಧವಾರ ರಾತ್ರಿ ನಡೆಯುವ ಐತಿಹಾಸಿಕ ಕರಗ ಉತ್ಸವದಲ್ಲಿ ಹಿಂದೂ-ಮುಸ್ಲಿಂ ಏಕತೆಯನ್ನು ಸಂಕೇತಿಸುವ ಪುರಾತನ ಆಚರಣೆಯನ್ನು ಈ ವರ್ಷವೂ ಅನುಸರಿಸಲಾಗುವುದು.

ಮೂಲಗಳ ಪ್ರಕಾರ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಂಘಟನಾ ಸಮಿತಿ ನಿರ್ಧರಿಸಿದೆ. ನಗರದ ಮಸ್ತಾನ್ ಸಾಹೇಬ್ ದರ್ಗಾಕ್ಕೆ ಕರಗ ಮೆರವಣಿಗೆ ಬರುವ ಸಂಪ್ರದಾಯವನ್ನು ಎಂದಿನಂತೆ ಮುಂದುವರಿಸಲು ನಿರ್ಧರಿಸಲಾಗಿದೆ.

ಹಿಂದೂ ಸಂಘಟನೆಗಳ ಆಕ್ಷೇಪದ ಹೊರತಾಗಿಯೂ, ದೇವಾಲಯದ ಆಡಳಿತ ಮಂಡಳಿಯು ಕಳೆದ ವರ್ಷ ಈ ಪದ್ಧತಿಯನ್ನು ಆಚರಿಸಿತ್ತು. ಈ ವರ್ಷವೂ ಕರಗ ಮೆರವಣಿಗೆ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಅನುಸರಿಸಲಾಗುವುದು ಎಂದು ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.

ಇಲ್ಲಿನ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ 11 ದಿನಗಳ ಕಾಲ ನಡೆಯುವ ಕರಗ ಉತ್ಸವವು ರಾತ್ರಿ 10 ಗಂಟೆಗೆ ಆರಂಭವಾಗಲಿದೆ. ಮಾರ್ಚ್ 29 ರಿಂದ ಏಪ್ರಿಲ್ 6ರ ನಡುವೆ ರಥೋತ್ಸವ ಸೇರಿದಂತೆ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.

ಏಪ್ರಿಲ್ 6 ರಂದು ನಡೆಯುವ ಉತ್ಸವದಲ್ಲಿ ಭಾಗವಹಿಸಲು ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ದೇವಸ್ಥಾನದ ಅಧಿಕಾರಿಗಳು ಆಹ್ವಾನಿಸಿದ್ದಾರೆ. ಉತ್ಸವದ ಪ್ರಮುಖ ಆಕರ್ಷಣೆಯಾದ ಕರಗ ಮೆರವಣಿಗೆಯು ಕೊನೆಯ ದಿನದಂದು (ಏಪ್ರಿಲ್ 7) ನಡೆಯಲಿದೆ.

ಬೆಂಗಳೂರು ಕರಗವು ಮುಖ್ಯವಾಗಿ ವಹ್ನಿಕುಲ ಕ್ಷತ್ರಿಯ ಸಮುದಾಯದಿಂದ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com