ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ 58,000 ಕ್ಷೇತ್ರಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ' ಆಚರಣೆ

ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗದ ಉಪಕ್ರಮದ ಭಾಗವಾಗಿ ಭಾನುವಾರ ಕರ್ನಾಟಕದಾದ್ಯಂತ 58,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ'ವನ್ನು ಆಚರಿಸಲಾಯಿತು.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗದ ಉಪಕ್ರಮದ ಭಾಗವಾಗಿ ಭಾನುವಾರ ಕರ್ನಾಟಕದಾದ್ಯಂತ 58,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ'ವನ್ನು ಆಚರಿಸಲಾಯಿತು.

ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೊಂದಿಗೆ ಮತಗಟ್ಟೆಗಳಿಗೆ ತೆರಳಿ ಧ್ವಜಾರೋಹಣ ಮಾಡಿದರು ಎಂದು ಸಿಇಒ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 10 ರಂದು ರಾಜ್ಯದ 224 ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ನಮ್ಮ ನಡೆಯಾಗಿ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸಲಾಯಿತು. ಸಾವಿರಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಲ್ಲಿ ಬೀದಿ ನಾಟಕ, ಮತದಾನದ ಮಹತ್ವದ ಕುರಿತ ಹಾಡುಗಳ ಪ್ರಸ್ತುತಿ, ಕರಪತ್ರಗಳ ವಿತರಣೆ, ಎಲ್‌ಇಡಿ ವಾಹನಗಳ ಮೂಲಕ ಜನರಿಗೆ ಮತದಾನದ ಮಹತ್ವವನ್ನು ತಿಳಿಸಲಾಯಿತು.

ರಾಜ್ಯದ ಪ್ರತಿ ಮತಗಟ್ಟಯಲ್ಲೂ ಮತಗಟ್ಟೆ ಅಧಿಕಾರಿಗಳು ಸ್ಥಳೀಯ ಮತದಾರರನ್ನು ಒಟ್ಟುಗೂಡಿಸಿ ದ್ವಜಾರೋಹಣ ನೆರವೇರಿಸಿ ಮತದಾನದ ಮಹತ್ವದ ಬಗ್ಗೆ ಜನರಿಗೆ ತಿಳಿಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com