ಕೊಪ್ಪಳ: ಸತತ ಮಳೆಗೆ ಮನೆ ಕುಸಿದು ವೃದ್ಧೆ, ನವಜಾತ ಶಿಶು ಸಾವು

ಜಿಲ್ಲೆಯ ಕನಕಗಿರಿಯ ಜೀರಾಳ ಎಂಬ ಗ್ರಾಮದಲ್ಲಿ ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಹಾಗೂ 20 ದಿನದ ನವಜಾತ ಶಿಶು ಮೃತಪಟ್ಟಿದೆ. 
ಧಾರಾಕಾರ ಮಳೆಗೆ ಕುಸಿದುಬಿದ್ದ ಮನೆ
ಧಾರಾಕಾರ ಮಳೆಗೆ ಕುಸಿದುಬಿದ್ದ ಮನೆ

ಕೊಪ್ಪಳ: ಜಿಲ್ಲೆಯ ಕನಕಗಿರಿಯ ಜೀರಾಳ ಎಂಬ ಗ್ರಾಮದಲ್ಲಿ ಕಳೆದ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಹಾಗೂ 20 ದಿನದ ನವಜಾತ ಶಿಶು ಮೃತಪಟ್ಟಿದೆ. 

ಮೃತರನ್ನು 60 ವರ್ಷದ ಫಕೀರಮ್ಮ ಮತ್ತು ಅವರ ಮೊಮ್ಮಗಳು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮಗುವಿನ ತಾಯಿ ಕನಕಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದರೆ, ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕನಕಮ್ಮ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಕಲಬುರಗಿಯಲ್ಲಿ ಕಳೆದ ವಾರ ರಾಹುಲ್ ಗಾಂಧಿ ಅವರ ಸಾರ್ವಜನಿಕ ರ್ಯಾಲಿಯನ್ನು ರದ್ದುಗೊಳಿಸಬೇಕಾಯಿತು.

ಇದೇ ಕಾರಣಕ್ಕೆ ಇತ್ತೀಚೆಗೆ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಅಮಿತ್ ಶಾ ಕೂಡ ತಮ್ಮ ರೋಡ್ ಶೋ ರದ್ದುಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com