ಬಂಜಾರರಿಗೆ ಪ್ರಧಾನಮಂತ್ರಿಯವರ ವಾಕ್ಚಾತುರ್ಯವನ್ನಷ್ಟೇ ಎತ್ತಿ ತೋರಿಸಿದ್ದೆ: ಪ್ರಿಯಾಂಕ್ ಖರ್ಗೆ

ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಚುನಾವಣಾ ಆಯೋಗದ ನೋಟಿಸ್‌ ಜಾರಿ ಮಾಡಿರುವ ನೋಟಿಸ್'ಗೆ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಉತ್ತರ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಕಲಬುರಗಿ: ಚುನಾವಣಾ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿರುವ ಆರೋಪದ ಮೇಲೆ ಚುನಾವಣಾ ಆಯೋಗದ ನೋಟಿಸ್‌ ಜಾರಿ ಮಾಡಿರುವ ನೋಟಿಸ್'ಗೆ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಉತ್ತರ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ 'ನಾಲಾಯಕ್' ಎಂಬ ಹೇಳಿಕೆ ನೀಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಬುಧವಾರ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ನೋಟಿಸ್ ನಲ್ಲಿ ಗುರುವಾರ ಸಂಜೆ 5 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಗಡುವು ನೀಡಿತ್ತು.

ಇದರಂತೆ ಚುನಾವಣಾ ಆಯೋಗಕ್ಕೆ ಉತ್ತರ ನೀಡಿರುವ ಪ್ರಿಯಾಂಕ್ ಖರ್ಗೆಯವರು, ಚುನಾವಣಾ ನೀತಿ ಸಂಹಿತೆಯನ್ನು ನಾನು ಉಲ್ಲಂಘನೆ ಮಾಡಿಲ್ಲ. ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಜಾರ ಸಮುದಾಯಕ್ಕ ನೀಡಿದ ಭರವಸ ಹಾಗೂ ವಾಕ್ಚಾತುರ್ಯವನ್ನು ಮಾತ್ರ ನಾಲಾಯಕ್ ಎಂದು ಹೇಳಿದ್ದೆ.

ನನ್ನ ಮೇಲೆ ಮಾಡಿರುವ ಆರೋಪವನ್ನು ಪ್ರಧಾನಿಯ ಹಿನ್ನೆಲೆಯಲ್ಲಿ ನೋಡಬೇಕು. ಬಂಜಾರ ಸಮುದಾಯವನ್ನುದ್ದೇಶಿಸಿ ಕಲಬುರಗಿಯಲ್ಲಿ ಮೋದಿಯವರ ಮಾತುಗಳನ್ನು ಗಮನಿಸಬೇಕು. ಮೋದಿ-ಬೊಮ್ಮಾಯಿ ಸರ್ಕಾರದ ಬಂಜಾರ-ಪರಿಶಿಷ್ಟ ಜಾತಿ-ವಿರೋಧಿ ನೀತಿಗಳಿಂದ ತೀವ್ರ ನೋವನ್ನುಂಟುಮಾಡಿದೆ. ಇವರುಗಳು ಎಸ್‌ಸಿ -ಬಂಜಾರ ಸಮುದಾಯವನ್ನು ಬಾಯಿಗೆ ಬಡಿದು ಹಾಕಿಕೊಂಡಿರುವುದು ಬಿಟ್ಟು ಏನನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಪ್ರತಿಯೊಬ್ಬ ಸದಸ್ಯರಿಗೂ ಅತ್ಯಂತ ನೋವಿನ ಸಂಗತಿಯೆಂದರೆ, ಮಾರ್ಚ್ 14, 2023 ರಂದು ಸಂಸತ್ತಿಗೆ ನೀಡಿದ ಉತ್ತರದಲ್ಲಿ ಮೋದಿ ಸರ್ಕಾರವು ಅವರಿಗೆ ಹೆಚ್ಚಿನ ಮೀಸಲಾತಿಯನ್ನು ನಿಷ್ಕರುಣೆಯಿಂದ ತಿರಸ್ಕರಿಸಿದೆ. ಇದು ಕರ್ನಾಟಕ ರಾಜ್ಯದಾದ್ಯಂತ ಎಸ್‌ಸಿ ಮತ್ತು ಎಸ್‌ಟಿಗಳ ಮನಸನ್ನು ಘಾಸಿಗೊಳಿಸಿದೆ. ಇದು ನನಗೆ ಅತೀವ ನೋವು ತಂದಿದೆ.

ವಿಶೇಷವಾಗಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದ ನಾಗಮೋಹನ್ ದಾಸ್ ಸಮಿತಿಯನ್ನು ಸಮಾಜದ ದೀನದಲಿತ ವರ್ಗಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನಾನು ಕರ್ನಾಟಕದ ಆಗಿನ ಸಾಮಾಜಿಕ ನ್ಯಾಯ ಸಚಿವರನ್ನಾಗಿ ನೇಮಿಸಿದ್ದೇನೆ. ಅವರನ್ನು ಪೂರ್ಣ ಹಕ್ಕುಗಳನ್ನು ಘನತೆ ಮತ್ತು ಗೌರವಗಳೊಂದಿಗೆ ಸಮಾನವಾಗಿ ತರಲು ನಾನು ಪ್ರಯತ್ನ ಪಟ್ಟಿದ್ದೇನೆ" ಎಂದು ಚುನಾವಣಾ ಆಯೋಗಕ್ಕೆ ನೀಡಿರುವ ಉತ್ತರದಲ್ಲಿ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

"ಇನ್ನೂ ನೋವಿನ ಸಂಗತಿಯೆಂದರೆ, ಒಂದು ಕಡೆ ನಮ್ಮ, ಅಂದರೆ ಎಸ್‌ಸಿ ಮತ್ತು ಎಸ್‌ಟಿಯ ನ್ಯಾಯಯುತ ಬೇಡಿಕೆಗಳು ಮತ್ತು ಮೀಸಲಾತಿಯ ಹಕ್ಕನ್ನು ಮೋದಿ ಸರ್ಕಾರ ತಿರಸ್ಕರಿಸಿದೆ. ಇನ್ನೊಂದು ಕಡೆ, ನಾವು ಭಾರತದ ಪ್ರಧಾನಿಯಿಂದ ನಿಂದನೆ ಮತ್ತು ಅಪಹಾಸ್ಯಕ್ಕೊಳಗಾಗಿದ್ದೇವೆ" ಎಂದು ಅಸಮಾಧಾನ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com